ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿದ ‘ದಕ್ಷಿಣ ಆಫ್ರಿಕಾ ಹಿಂದೂ ಮಹಾಸಭಾ’

* ಇಂತಹ ನಿಷೇಧದ ಜೊತೆಗೆ ಇಂತಹ ಘಟನೆಗಳು ಪ್ರಪಂಚದಾದ್ಯಂತ ನಡೆಯದಂತೆ ಹಿಂದೂಗಳ ಪರಿಣಾಮಕಾರಿ ಸಂಘಟನೆಯನ್ನು ನಿರ್ಮಿಸುವುದು ಅಗತ್ಯವಾಗಿದೆ. ಅದಕ್ಕಾಗಿ ಪ್ರಪಂಚದಾದ್ಯಂತದ ಹಿಂದುತ್ವನಿಷ್ಠ ಸಂಘಟನೆಗಳು ನೇತೃತ್ವ ವಹಿಸಿಕೊಳ್ಳಬೇಕು !- ಸಂಪಾದಕರು 

* ಭಾರತದ ಎಷ್ಟು ಹಿಂದುತ್ವನಿಷ್ಠ ಸಂಘಟನೆಗಳು ಬಾಂಗ್ಲಾದೇಶಿ ಹಿಂದೂಗಳ ಮೇಲಿನ ದಾಳಿಯನ್ನು ವಿರೋಧಿಸಿವೆ ?- ಸಂಪಾದಕರು 

ನವದೆಹಲಿ : ಬಾಂಗ್ಲಾದೇಶದಲ್ಲಿ ಕಳೆದ ಕೆಲವು ದಿನಗಳಲ್ಲಿ ಸಂತ್ರಸ್ತರಿಗೆಗಳು, ನವರಾತ್ರ್ಯುತ್ಸವ ಮಂಟಪ ಮತ್ತು ದುರ್ಗಾ ದೇವಿಯ ಮೂರ್ತಿಗಳ ಮೇಲಾಗಿರುವ ದಾಳಿಯನ್ನು ‘ದಕ್ಷಿಣ ಆಫ್ರಿಕಾದ ಹಿಂದೂ ಮಹಾಸಭೆ’ಯು ಖಂಡಿಸಿದೆ. ‘ಬಾಂಗ್ಲಾದೇಶ ಸರಕಾರವು ಆರೋಪಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು, ಜೊತೆಗೆ ಸಂತ್ರಸ್ತರ ಸುರಕ್ಷತೆ ಮತ್ತು ಅವರಿಗೆ ಪೂಜೆಯ ಸ್ವಾತಂತ್ರ್ಯವನ್ನು ಸಿಗುವಂತೆ ಪ್ರಯತ್ನಿಸಬೇಕು’, ಎಂದು ಮಹಾಸಭೆಯು ಒತ್ತಾಯಿಸಿದೆ.

ಕೋಲಕಾತಾದ ಬಾಂಗ್ಲಾದೇಶ ಉಚ್ಚಾಯುಕ್ತರ ಕಾರ್ಯಾಲಯದ ಹೊರಗೆ ‘ಇಸ್ಕಾನ್’ ಸಂಸ್ಥೆಯಿಂದ ಭಜನೆ ಹಾಡಿ ವಿರೋಧ ವ್ಯಕ್ತ

ಬಾಂಗ್ಲಾದೇಶದ ‘ಇಂಟರನ್ಯಾಶನಲ್ ಸೊಸಾಯಟಿ ಫಾರ್ ಕೃಷ್ಣ ಕಾನ್ಶಿಯಸನೆಸ್ ಅಂದರೆ `ಇಸ್ಕಾನ್’ ಈ ದೇವಾಲಯದ ಮೇಲಾದ ದಾಳಿಯನ್ನು ವಿರೋಧಿಸಿ ‘ಇಸ್ಕಾನ್’ನ ಅನುಯಾಯಿಗಳು ಕೋಲಕಾತಾದ ಬಾಂಗ್ಲಾದೇಶದ ಉಚ್ಚಾಯುಕ್ತ ಕಾರ್ಯಾಲಯದ ಹೊರಗೆ ಭಜನೆಗಳನ್ನು ಹಾಡಿದರು. ಆರೋಪಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಹಿಂದೂಗಳಿಗೆ ರಕ್ಷಣೆ ನೀಡಬೇಕು, ಎಂದು ಈ ಸಮಯದಲ್ಲಿ ಒತ್ತಾಯಿಸಿದರು.