50,000 ಮೆಟ್ರಿಕ್ ಟನ್ ಗೋಧಿಯನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸುವ ಪ್ರಯತ್ನದಲ್ಲಿರುವ ಭಾರತ !

ಮುಂದುವರಿದ ಭಾರತದ ಗಾಂಧಿಗಿರಿ ! ಮಾನವೀಯ ದೃಷ್ಟಿಯಿಂದ ಕಳುಹಿಸಲಾಗುವ ನೆರವು ಬಡ ಅಸಹಾಯಕ ಅಫ್ಘಾನಿ ಜನರ ತನಕ ತಲುಪುತ್ತದೆಯೇ ಅಥವಾ ತಾಲಿಬಾನಿಗಳೇ ತಿಂದು ತೇಗುವರೊ ಈ ಬಗ್ಗೆ ಯಾರು ಭರವಸೆ ನೀಡುವರು ?- ಸಂಪಾದಕರು 

ನವದೆಹಲಿ – ಭಾರತ ಸರಕಾರವು ಅಫ್ಘಾನಿಸ್ತಾನಕ್ಕೆ ಮಾನವೀಯ ದೃಷ್ಟಿಯಿಂದ ಸಹಾಯವೆಂದು 50,000 ಮೆಟ್ರಿಕ್ ಟನ್ ಗೋಧಿ ಮತ್ತು ಔಷಧಿಗಳನ್ನು ಕಳುಹಿಸಲು ಯೋಚಿಸುತ್ತಿದೆ. ಕಳೆದ ವರ್ಷ ಭಾರತವು 75,000 ಮೆಟ್ರಿಕ್ ಟನ್ ಗೋಧಿಯನ್ನು ಕಳುಹಿಸಿತ್ತು. ಆಗ ಅದನ್ನು ಇರಾನಿನ ಚಾಬಾಹಾರ್ ಬಂದರಿನ ಮಾರ್ಗವಾಗಿ ಕಳುಹಿಸಲಾಗಿತ್ತು. ಭಾರತವು ಈಗ ಅದನ್ನು ಅಟಾರಿ ಗೆಇಯಿಂದ ಪಾಕಿಸ್ತಾನದ ಮೂಲಕ ಕಳುಹಿಸಲು ಯೋಚಿಸುತ್ತಿದೆ. ಅದಕ್ಕಾಗಿ ಪಾಕಿಸ್ತಾನದೊಂದಿಗೆ ಚರ್ಚಿಸಲಾಗುತ್ತಿದೆ. (ಪಾಕಿಸ್ತಾನದ ಮೂಲಕ ಕಳುಹಿಸಿದ ಗೋಧಿ ಅಫ್ಘಾನಿಸ್ತಾನಕ್ಕೆ ತಲುಪಬಹುದೇ ? – ಸಂಪಾದಕರು)