* ಬಾಂಗ್ಲಾದೇಶದ ಹೊಸ ಹೆಸರು ‘ಜಿಹಾದಿಸ್ತಾನ’ವಾಗಿದ್ದು ಪ್ರಧಾನಿ ಶೇಖ್ ಹಸೀನಾ ಅದರ ರಾಣಿಯಾಗಿದ್ದಾರೆ ! – ಸಂಪಾದಕರು * ಭಾರತದ ಒಬ್ಬನೇ ಒಬ್ಬ ಹಿಂದೂ ಸಾಹಿತಿ, ಲೇಖಕರು, ಕ್ರೀಡಾಪಟು ಇತ್ಯಾದಿ, ಹಾಗೆಯೇ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಯ ಬಗ್ಗೆ ಖಂಡಿಸಿದ್ದಾರೆಯೇ ? ಇದರ ತುಲನೆಯಲ್ಲಿ ತಸ್ಲಿಮಾ ನಸ್ರೀನ್ ಇವರು ಹಿಂದುಗಳಿಗೆ ತಮ್ಮವರು ಎಂದೆನಿಸುತ್ತದೆ ! – ಸಂಪಾದಕರು |
ನವದೆಹಲಿ : ಬಾಂಗ್ಲಾದೇಶದ ಹೊಸ ಹೆಸರು `ಜಿಹಾದಿಸ್ತಾನ’ ಆಗಿದೆ. ದೇಶಾದ್ಯಂತ ಜಿಹಾದಿಗಳಿಂದ ಹಿಂದೂಗಳ ಪೂಜಾ ಮಂಟಪಗಳು, ದೇವತೆಗಳ ಮೂರ್ತಿಗಳು, ದೇವಸ್ಥಾನಗಳು, ಮನೆಗಳು ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ. ಪ್ರಧಾನಿ ಶೇಖ್ ಹಸೀನಾ ಅವರು ಪ್ರಸಾರ ಮಾಧ್ಯಮಗಳಿಗೆ ಬಾಯಿಮುಚ್ಚಿಕೊಂಡಿರಲು ಹೇಳಿದ್ದಾರೆ. ಶೇಖ್ ಹಸೀನಾ ಈಗ ಜಿಹಾದಿಗಳ ತಾಯಿ ಮತ್ತು ಜಿಹಾದಿಸ್ತಾನದ ರಾಣಿಯಾಗಿದ್ದಾರೆ, ಇಂತಹ ಕಠಿಣ ಶಬ್ದಗಳಲ್ಲಿ ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್ ಇವರು ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರನ್ನು ಟೀಕಿಸಿದ್ದಾರೆ.
Hindu villages were burnt, Hasina was playing flute: Taslima Nasreen slams Bangladesh PM – India News https://t.co/sFUYcV5Mgr
— taslima nasreen (@taslimanasreen) October 19, 2021
1. ಈ ಬಗ್ಗೆ ತಸ್ಲಿಮಾ ನಸ್ರೀನ್ ಇವರು ಒಟ್ಟು 3 ಟ್ವೀಟ್ಸ್ ಮಾಡಿದ್ದಾರೆ. ಇನ್ನೊಂದು ಟ್ವೀಟ್‍ನಲ್ಲಿ ಅವರು, ಬಾಂಗ್ಲಾದೇಶದಲ್ಲಿ ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ ಮತ್ತು ಅವರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಇಂತಹ ಸಮಯದಲ್ಲಿ ಪ್ರಧಾನಿ ಶೇಖ್ ಹಸೀನಾ ಇವರು ತಮ್ಮ ಸಹೋದರ ಶೇಖ್ ರಸೆಲ್ ಅವರ ಜನ್ಮದಿನವನ್ನು ಆಚರಿಸುತ್ತಿದ್ದಾರೆ ಎಂದು ಬರೆದಿದ್ದಾರೆ. (ಒಂದು ಕಡೆ, ‘ಹಿಂದೂಗಳ ಮೇಲೆ ದಾಳಿ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸುವೆವು’, ಎಂದೆನ್ನುವ ಹಸೀನಾ ಇವರ ಆಳ್ವಿಕೆಯಲ್ಲಿ ಪ್ರತ್ಯಕ್ಷದಲ್ಲಿ ಮಾತ್ರ ಹಿಂದೂಗಳ ಮೇಲಿನ ದಾಳಿಗಳು ನಿಲ್ಲುವುದಿಲ್ಲ, ಇದು ನೈಜಸ್ಥಿತಿಯಾಗಿದೆ ! – ಸಂಪಾದಕರು)
2. ಮೂರನೆಯ ಟ್ವೀಟ್‍ನಲ್ಲಿ, ನಸ್ರೀನ್ ಇವರು, “ಬಾಂಗ್ಲಾದೇಶದ ಎರಡು ಗ್ರಾಮಗಳಾದ ಪಿರಗಂಜ್ ಮತ್ತು ರಂಗಪುರಕ್ಕೆ ಬೆಂಕಿ ಹಚ್ಚಲಾಗಿದೆ, ಆದರೆ ಹಸೀನಾ ಕೊಳಲು ನುಡಿಸುತ್ತಿದ್ದಾಳೆ.’ ಈ ಗ್ರಾಮಗಳಲ್ಲಿ ಹಿಂದೂಗಳ 66 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಇದರಲ್ಲಿ 40 ಹಿಂದುಗಳು ಗಾಯಗೊಂಡಿದ್ದರು.”ಎಂದು ಟ್ವೀಟ್ ಬರೆದಿದ್ದಾರೆ.
3. ಎರಡು ದಿನಗಳ ಹಿಂದೆ ನಸ್ರಿನ್ ಇವರು ‘ಪ್ರವಾದಿ ಮಹಮ್ಮದ್ ಅವರ ಅನುಯಾಯಿಗಳು ಪ್ರವಾದಿಯವರದ್ದೇ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಿದ್ದಾರೆ. ಪ್ರವಾದಿಯು ಕಾಬಾದಲ್ಲಿ ಮೂರ್ತಿಯನ್ನು ಪೂಜಿಸುವವರ 360 ವಿಗ್ರಹಗಳನ್ನು ಧ್ವಂಸ ಮಾಡಿದ್ದರು. ಅವರ ಅನುಯಾಯಿಗಳು ಅದನ್ನೇ ಮಾಡುತ್ತಿದ್ದಾರೆ’, ಎಂದು ಟ್ವೀಟ್ ಮಾಡಿದ್ದಾರೆ.