ಬಹಿಷ್ಕಾರದ ಎಚ್ಚರಿಕೆಯ ನೀಡಿದ ನಂತರ ದೀಪಾವಳಿಯನ್ನು ‘ಜಶ್ನ್-ಎ-ರಿವಾಜ್’ ಎಂದು ಕರೆಯುವ ಜಾಹೀರಾತನ್ನು ಹಿಂತೆಗೆದುಕೊಂಡ ‘ಫ್ಯಾಬ್‍ಇಂಡಿಯಾ’!

ಹಿಂದೂಗಳು ಸಂಘಟಿತರಾಗಿ ವಿರೋಧಿಸಿದ ಪರಿಣಾಮ !

ನವ ದೆಹಲಿ : ಬಟ್ಟೆ, ಮನೆ ಅಲಂಕಾರ ಇತ್ಯಾದಿ ಉತ್ಪಾದನೆಗಳಿಗೆ ಸಂಬಂಧಿತ ‘ಫ್ಯಾಬ್‍ಇಂಡಿಯಾ’ ಸಂಸ್ಥೆಯು ಹಿಂದೂಗಳ ಹಬ್ಬಗಳ ಹಿನ್ನೆಲೆಯಲ್ಲಿ ‘ಜಶ್ನ್-ಇ-ರಿವಾಜ್’ ಜಾಹೀರಾತುಗಳ ಮೂಲಕ ಪ್ರಸಾರ ಮಾಡಲು ಆರಂಭಿಸಿತ್ತು. ಇದನ್ನು ಹಿಂದೂಗಳು ಹಾಗೂ ಭಾಜಪದವರು ಬಲವಾಗಿ ವಿರೋಧಿಸಿದರು. ಅದೇ ರೀತಿ ಇದನ್ನು ಬಹಿಷ್ಕರಿಸುವ ಎಚ್ಚರಿಕೆಯನ್ನೂ ನೀಡಿದರು. ತದನಂತರ ಈ ಜಾಹೀರಾತನ್ನು ಹಿಂದೂಯು ಹಿಂಪಡೆಯಲಾಯಿತು. ‘ಫ್ಯಾಬ್‍ಇಂಡಿಯಾ’ದಿಂದ ದೀಪಾವಳಿ ಹಬ್ಬವನ್ನು ಅವಮಾನಿಸಲು ಮತ್ತು ಅದನ್ನು ‘ಜಶ್ನ್-ಎ-ರಿವಾಜ್’ ಎಂದು ಕರೆಯಲು ಪ್ರಯತ್ನಿಸಲಾಗಿತ್ತು. ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಸಂಸದರಾದ ತೇಜಸ್ವಿ ಸೂರ್ಯ ಇವರು ಮಾತನಾಡಿ, ‘ದೀಪಾವಳಿ ‘ಜಶ್ನ್-ಎ-ರಿವಾಜ್’ ಅಲ್ಲ. ಉದ್ದೇಶಪೂರ್ವಕವಾಗಿ ತಪ್ಪಾಗಿ ಅಪಪ್ರಚಾರವನ್ನು ಮಾಡುವವರು ಆರ್ಥಿಕ ನಷ್ಟವನ್ನು ಸಹಿಸಬೇಕಾಗುತ್ತದೆ ಎಂದು ಹೇಳಿದರು.’