ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಮತಾಂಧರ ಅತ್ಯಾಚಾರದ ಮಾಹಿತಿ ನೀಡುವ ‘ಇಸ್ಕಾನ್’ ಹಾಗೂ `ಬಾಂಗ್ಲಾದೇಶ ಹಿಂದೂ ಯುನಿಟಿ ಕೌನ್ಸಿಲ್’ನ ಟ್ವಿಟರ್ ಅಕೌಂಟ್ಸ್ (ಖಾತೆ) ಅಮಾನತು !

ಟ್ವಿಟರನ ಹಿಂದುದ್ವೇಷ !

ಟ್ವಿಟರನ ಈ ರೀತಿಯ ದಬ್ಬಾಳಿಕೆ ಹೊಸತಲ್ಲ. ಈ ಮೊದಲೂ ಟ್ವಿಟರ್ ಹಿಂದುತ್ವನಿಷ್ಠ ಸಂಘಟನೆಗಳ ಹಾಗೂ ಮುಖಂಡರ ಅಕೌಂಟ್ (ಖಾತೆ) ಅಮಾನತುಗೊಳಿಸಿತ್ತು. ಟ್ವಿಟರನ ಈ ದಾದಾಗಿರಿಯನ್ನು ತೊಡೆದು ಹಾಕಲು ಹಿಂದೂಗಳು ಸಮಾಂತರ ಮಾಧ್ಯಮವನ್ನು ನಿರ್ಮಿಸುವುದು ಅಗತ್ಯವಾಗಿದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !- ಸಂಪಾದಕರು 

ನವ ದೆಹಲಿ – ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲಾಗುತ್ತಿರುವ ಅತ್ಯಾಚಾರವನ್ನು ಅಲ್ಲಿಯ ಪ್ರಸಾರ ಮಾಧ್ಯಮಗಳು ಮುಚ್ಚಿಡುತ್ತಿದೆ. (ಬಾಂಗ್ಲಾದೇಶದ ಹಿಂದುದ್ವೇಷಿ ಹಾಗೂ ಮುಸಲ್ಮಾನ ಪ್ರೇಮಿ ಪ್ರಸಾರ ಮಾಧ್ಯಮಗಳು ಹಾಗೂ ಭಾರತದಲ್ಲಿನ ಪ್ರಸಾರ ಮಾಧ್ಯಮಗಳ ನಡುವೆ ವಿಶೇಷವಾದ ವ್ಯತ್ಯಾಸವೇನೂ ಇಲ್ಲಾ, ಎಂಬುದು ಗಮನಕ್ಕೆ ಬರುತ್ತದೆ ! – ಸಂಪಾದಕರು) ಆದ್ದರಿಂದ ಈ ಅತ್ಯಾಚಾರವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಜಗತ್ತಿನ ಮುಂದೆ ತರಲು ಹಿಂದೂಗಳು ಪ್ರಯತ್ನವನ್ನು ಪ್ರಾರಂಭಿಸಿದ್ದಾರೆ. ಅದಕ್ಕಾಗಿ ಬಾಂಗ್ಲಾದೇಶದಲ್ಲಿನ ‘ಇಸ್ಕಾನ್’ ಹಾಗೂ ‘ಬಾಂಗ್ಲಾದೇಶ ಹಿಂದೂ ಯುನಿಟಿ ಕೌನ್ಸಿಲ್’ ಇವರ ಟ್ವಿಟರ ಹ್ಯಾಂಡಲ ಮುಂದಾಳತ್ವವಹಿಸಿದ್ದರು; ಆದರೆ ಅವರಿಬ್ಬರ ಟ್ವಿಟರ ಅಕೌಂಟಅನ್ನು ಟ್ವಿಟರ ಹಠಾತ್ತಾಗಿ ಅಮಾನತುಗೊಳಿಸಿದೆ. ಬಾಂಗ್ಲಾದೇಶದಲ್ಲಿನ ಇಸ್ಕಾನ ದೇವಾಲಯದ ಮೇಲೆ ದಾಳಿ ಮಾಡಿ ಮತಾಂಧರು 2 ಸಾಧುಗಳ ಹತ್ಯೆ ಮಾಡಿದರು. ಟ್ವಿಟರನ ಮೂಲಕ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂ ವಿರೋಧಿ ಅತ್ಯಾಚಾರಗಳ ಮಾಹಿತಿ ಜಗತ್ತಿಗೆ ಸಿಗುತ್ತಿತ್ತು. ಆದ್ದರಿಂದ ಜಗತ್ತಿನಾದ್ಯಂತ ಹಿಂದೂಗಳಿಂದ ಬಾಂಗ್ಲಾದೇಶದ ಸರಕಾರದ ಮೇಲೆ ಕ್ರಮ ಕೈಗೊಳ್ಳುವ ಒತ್ತಡವು ಹೆಚ್ಚಾಗಿತ್ತು.