ಬಲಾತ್ಕಾರ ನಂತರದ ಕನ್ಯತ್ವ ಪರೀಕ್ಷೆಯ ಮೇಲೆ ಸರ್ವೋಚ್ಚ ನ್ಯಾಯಾಲಯದಿಂದ ನಿಷೇಧ !

ಈ ರೀತಿಯ ಪರೀಕ್ಷೆ ನಡೆಸುವವರಿಗೆ ಅಸಭ್ಯವರ್ತನೆಯ ಆರೋಪದಲ್ಲಿ ಅಪರಾಧಿ ಎಂದು ತಿಳಿಯಲಾಗುವುದು ಎಂದು ಸ್ಪಷ್ಟಪಡಿಸಿತು.

ಶಿವಲಿಂಗಕ್ಕೆ ಸಂರಕ್ಷಣೆ ಸಿಗುವ ಸಂದರ್ಭದಲ್ಲಿನ ಹಿಂದೂಗಳ ಭೂಮಿಕೆಯನ್ನು ಸರ್ವೋಚ್ಚ ನ್ಯಾಯಾಲಯವು ಕೇಳಲಿದೆ

ವಾರಾಣಸಿಯಲ್ಲಿನ ಜ್ಞಾನವಾಪಿಯ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಹಿಂದೂಗಳ ಪಕ್ಷಕ್ಕೆ ದೊಡ್ಡ ಭರವಸೆಯನ್ನು ನೀಡುತ್ತ ಅಲ್ಲಿ ದೊರೆತ ಶಿವಲಿಂಗಕ್ಕೆ ಸಂರಕ್ಷಣೆ ನೀಡುವ ವಿಷಯದ ಮೇಲೆ ಆಲಿಕೆ ನಡೆಸುವುದಾಗಿ ಒಪ್ಪಿಕೊಂಡಿದೆ.

ಮೌಲಾನಾಗಳಿಗೆ ಕೇಜ್ರಿವಾಲ ವರ್ಷಕ್ಕೆ ೧೮ ಸಾವಿರ ರೂಪಾಯಿ ನೀಡುತ್ತಾರೆ ! – ಕೇಂದ್ರ ಸಚಿವ ಅನುರಾಗ ಠಾಕೂರ

ಅವರು ಹಿಂದೂ ದೇವಾಲಯಗಳ ಅರ್ಚಕರಿಗೆ, ಗುರುದ್ವಾರಾಗಳ ಗ್ರಂಥಿಗಳಿಗೆ ಮತ್ತು ಚರ್ಚ್‌ಗಳ ಪಾದ್ರಿಗಳಿಗೆ ಎಂದಾದರೂ ೧೮ ಸಾವಿರ ರೂಪಾಯಿ ಗೌರವಧನವನ್ನು ಕೊಟ್ಟಿದ್ದಾರೆಯೇ ?, ಎಂದು ಕೇಂದ್ರ ಸಚಿವ ಅನುರಾಗ ಠಾಕೂರ ಪ್ರಶ್ನಿಸಿದ್ದಾರೆ.

ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ ಅವರಿಗೆ ಬೆದರಿಕೆ

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ರಾಮ ರಹೀಮ ಅವರ ಭಕ್ತರಿಂದ ಬೆದರಿಕೆಗಳು ಬರುತ್ತಿವೆ ಎಂದು ಮಲಿವಾಲ ಅವರ ಆರೋಪ

ದೆಹಲಿಯಲ್ಲಿನ ೪ ಖಲೀಸ್ತಾನಿ ಭಯೋತ್ಪಾದಕರ ಬಂಧನ

ಇವರಿಂದ ೫ ಚೀನಾದ ಗ್ರೆನೆಡ್, ಏಕೆ ೪೭ ರೈಫಲ ಮತ್ತು ೯ ಸೆಂಟಿಮೀಟರ್ ಆಟೋಮ್ಯಾಟಿಕ್ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಈ ಶಸ್ತ್ರಾಸ್ತ್ರಗಳು ಪಾಕಿಸ್ತಾನದಿಂದ ಡ್ರೋನ ಮೂಲಕ ಪಂಜಾಬ್‌ಗೆ ಕಳುಹಿಸಲಾಗಿತ್ತು.

ಒಂದು ದೇಶ, ಒಂದು ಪೊಲೀಸ ಸಮವಸ್ತ್ರ, ಈ ಬಗ್ಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಚರ್ಚೆ ನಡೆಸಬೇಕು ! – ಪ್ರಧಾನಿ ಮೋದಿ ಅವರ ಕರೆ

‘ಒಂದು ದೇಶ, ಒಂದು ಪೊಲೀಸ ಸಮವಸ್ತ್ರ’ ಈ ಪರಿಕಲ್ಪನೆಯ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಚರ್ಚಿಸಬೇಕೆಂದು ಪ್ರಧಾನಿ ಮೋದಿಯವರು ಕರೆ ನೀಡಿದ್ದಾರೆ. ಅವರು ‘ವಿಡಿಯೋ ಕಾನ್ಫರೆನ್ಸಿಂಗ್‌’ ಮೂಲಕ ಚಿಂತನ ಶಿಬಿರದಲ್ಲಿ ರಾಜ್ಯದ ಗೃಹ ಸಚಿವರನ್ನು ಸಂಬೋಧಿಸುತ್ತ ಮಾತನಾಡುತ್ತಿದ್ದರು.

ಪ್ರಸಿದ್ಧ ಉದ್ಯಮಿ ಇಲಾನ್ ಮಸ್ಕ್‌ರವರ ಬಳಿ ಟ್ವಿಟ್ಟರಿನ ಮಾಲೀಕತ್ವ !

ಪ್ರಸಿದ್ಧ ಉದ್ಯೋಗಪತಿ ಇಲಾನ್ ಮಸ್ಕ್‌ರವರು ಟ್ವಿಟರ್ ಸಂಸ್ಥೆಯ ಮಾಲೀಕತ್ವದ ಅಧಿಕಾರ ಪಡೆದಿದ್ದಾರೆ. ಇದರ ನಂತರ ಅವರು ತಕ್ಷಣ ಮುಖ್ಯ ಕಾರ್ಯಕಾರಿ ಅಧಿಕಾರಿ ಪರಾಗ ಅಗ್ರವಾಲ, ಕಾನೂನು ವಿಭಾಗದ ಪ್ರಮುಖ ವಿಜಯ ಗಡ್ಡೆ ಮತ್ತು ಮುಖ್ಯ ಆರ್ಥಿಕ ಅಧಿಕಾರಿ ನೆಡ್ ಸೆಗಲ್, ಈ ಹಿರಿಯ ಅಧಿಕಾರಿಗಳನ್ನು ತೆಗೆದುಹಾಕಿದ್ದಾರೆ.

ವಸಂತಕುಂಜ ಸ್ಮಶಾನಭೂಮಿಯ ಸ್ಥಳಾಂತರದ ಕುರಿತು ದೆಹಲಿ ಉಚ್ಚ ನ್ಯಾಯಾಲಯದ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯದ ಸ್ಥಗಿತ

ದೆಹಲಿಯ ವಸಂತಕುಂಜ ಪರಿಸರದ ಮಸೂದಪೂರ ಗ್ರಾಮದ ೧೦೦ ವರ್ಷಗಳಷ್ಟು ಹಳೆಯ ಸ್ಮಶಾನಭೂಮಿಯನ್ನು ಕಿಶನಗಡದಲ್ಲಿ ಸ್ಥಳಾಂತರಿಸುವಂತೆ ನೀಡಿದ ದೆಹಲಿ ಉಚ್ಚ ನ್ಯಾಯಾಲಯದ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯವು ಸ್ಥಗಿತದ ಆದೇಶ ನೀಡಿತು.

ನನಗೆ ಎಲ್ಲರ ಹೆಂಡತಿಯರು-ಮಕ್ಕಳು ಮತ್ತು ಮನೆಗಳು ಗೊತ್ತು ! – ‘ಜೊಮ್ಯಾಟೋ’ ಸಂಸ್ಥೆಯ ‘ಡೆಲಿವರಿ ಬಾಯ್’ ನದೀಮ್‌ನಿಂದ ಜನರಿಗೆ ಬೆದರಿಕೆ

ಅಂತಹ ಮತಾಂಧರು ಕೆಲಸಗಳನ್ನು ಮಾಡುವ ಹೆಸರಿನಲ್ಲಿ ಜನರ ಬಗ್ಗೆ ಮಾಹಿತಿಯನ್ನು ಹೇಗೆ ಸಂಗ್ರಹಿಸುತ್ತಾರೆ ಎಂಬುದನ್ನು ಇದು ತೋರಿಸುತ್ತದೆ ! ಅವರು ಈ ಮಾಹಿತಿಯನ್ನು ಲವ್ ಜಿಹಾದ್‌ಗಾಗಿ ಬಳಸುವುದಿಲ್ಲವೇ ?

ಉಕ್ರೇನ್‌ನಲ್ಲಿರುವ ಭಾರತೀಯರು ಕೂಡಲೇ ದೇಶವನ್ನು ತೊರೆಯಬೇಕು ! – ಭಾರತ ಸರ್ಕಾರದಿಂದ ಸಲಹೆ

ಭಾರತೀಯ ನಾಗರಿಕರ ನೆರವಿಗಾಗಿ ಮೂರು ಸಹಾಯವಾಣಿ ಸಂಖ್ಯೆಗಳು +೩೮೦೯೩೩೫೫೯೯೫೮, +೩೮೦೬೩೫೯೧೭೮೮೧ ಮತ್ತು +೩೮೦೬೭೮೭೪೫೯೪೫ ಅನ್ನು ರಾಯಭಾರ ಕಚೇರಿ ರವಾನಿಸಿದೆ.