ಪ್ರಸಿದ್ಧ ಉದ್ಯಮಿ ಇಲಾನ್ ಮಸ್ಕ್‌ರವರ ಬಳಿ ಟ್ವಿಟ್ಟರಿನ ಮಾಲೀಕತ್ವ !

ಮುಖ್ಯ ಕಾರ್ಯಕಾರಿ ಅಧಿಕಾರಿ ಪರಾಗ ಅಗ್ರವಾಲರೊಂದಿಗೆ ೩ ಜನರು ಹೊರಗೆ

ನವದೆಹಲಿ – ಪ್ರಸಿದ್ಧ ಉದ್ಯೋಗಪತಿ ಇಲಾನ್ ಮಸ್ಕ್‌ರವರು ಟ್ವಿಟರ್ ಸಂಸ್ಥೆಯ ಮಾಲೀಕತ್ವದ ಅಧಿಕಾರ ಪಡೆದಿದ್ದಾರೆ. ಇದರ ನಂತರ ಅವರು ತಕ್ಷಣ ಮುಖ್ಯ ಕಾರ್ಯಕಾರಿ ಅಧಿಕಾರಿ ಪರಾಗ ಅಗ್ರವಾಲ, ಕಾನೂನು ವಿಭಾಗದ ಪ್ರಮುಖ ವಿಜಯ ಗಡ್ಡೆ ಮತ್ತು ಮುಖ್ಯ ಆರ್ಥಿಕ ಅಧಿಕಾರಿ ನೆಡ್ ಸೆಗಲ್, ಈ ಹಿರಿಯ ಅಧಿಕಾರಿಗಳನ್ನು ತೆಗೆದುಹಾಕಿದ್ದಾರೆ. ಇವರ ಜೊತೆಗೆ ಕೆಲವು ನೌಕರರನ್ನು ಕೂಡ ಕೆಲಸದಿಂದ ತೆಗೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಇಲಾನ್ ಮಸ್ಕ್‌ರವರು ಟ್ವೀಟ್ ಮೂಲಕ, ಭವಿಷ್ಯದ ನಾಗರೀಕರಿಗಾಗಿ ಒಂದು ಡಿಜಿಟಲ್ ವೃತ್ತವಿರುವುದು ಆವಶ್ಯಕವಾಗಿದೆ, ಆದುದರಿಂದ ನಾನು ಟ್ವಿಟರ್‌ನ್ನು ಖರೀದಿಸಿದ್ದೇನೆ. ಇಲ್ಲಿ ವಿವಿಧ ವಿಚಾರಸರಣಿಯ ಜನರು ಹಿಂಸೆಯಿಲ್ಲದೇ ವಾದ-ವಿವಾದ ನಡೆಸಲು ಸಾಧ್ಯವಾಗುವುದು. ಪ್ರಸ್ತುತ ಸಮಾಜವು ಎಡಪಂಥಿಯ ಮತ್ತು ಬಲಪಂಥೀಯ ಎಂದು ವಿಭಜನೆಯಾಗುವ ಭಯವಿದೆ. ಇದರಿಂದಾಗಿ ತಿರಸ್ಕಾರ ಮತ್ತು ಸಮಾಜದಲ್ಲಿನ ಬಿರುಕು ಹೆಚ್ಚುವುದು, ಎಂದು ಹೇಳಿದ್ದಾರೆ.