ಶಿವಲಿಂಗಕ್ಕೆ ಸಂರಕ್ಷಣೆ ಸಿಗುವ ಸಂದರ್ಭದಲ್ಲಿನ ಹಿಂದೂಗಳ ಭೂಮಿಕೆಯನ್ನು ಸರ್ವೋಚ್ಚ ನ್ಯಾಯಾಲಯವು ಕೇಳಲಿದೆ

ವಾರಾಣಸಿಯಲ್ಲಿನ ಜ್ಞಾನವಾಪಿಯ ಪ್ರಕರಣ

ನವದೆಹಲಿ – ವಾರಾಣಸಿಯಲ್ಲಿನ ಜ್ಞಾನವಾಪಿಯ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಹಿಂದೂಗಳ ಪಕ್ಷಕ್ಕೆ ದೊಡ್ಡ ಭರವಸೆಯನ್ನು ನೀಡುತ್ತ ಅಲ್ಲಿ ದೊರೆತ ಶಿವಲಿಂಗಕ್ಕೆ ಸಂರಕ್ಷಣೆ ನೀಡುವ ವಿಷಯದ ಮೇಲೆ ಆಲಿಕೆ ನಡೆಸುವುದಾಗಿ ಒಪ್ಪಿಕೊಂಡಿದೆ. ಈ ಮೊದಲು ನ್ಯಾಯಾಲಯವು ಕೇವಲ ನವೆಂಬರ್‌ ೧೨ರ ವರೆಗೆ ಶಿವಲಿಂಗಕ್ಕೆ ಸಂರಕ್ಷಣೆ ನೀಡಲಾಗುವುದು, ಎಂದು ಹೇಳಿತ್ತು. ನವೆಂಬರ್‌ ೧೨ರಂದು ಈ ವಿಷಯದಲ್ಲಿ ನ್ಯಾಯಾಲಯವು ಹಿಂದೂ ಪಕ್ಷದ ಭೂಮಿಕೆಯನ್ನು ಆಲಿಸಿ ತೀರ್ಪು ನೀಡಲಿದೆ.

೧. ಮೇ, ೨೦೨೦ರಂದು ನ್ಯಾಯಾಲಯದ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಜ್ಞಾನವಾಪಿ ಮಸೀದಿಯ ತಳಮಹಡಿಯ ತನಿಖೆ ನಡೆಸಲಾಗಿತ್ತು. ಆಗ ಅಲ್ಲಿ ಪ್ರಾಚೀನ ಶಿವಲಿಂಗ ದೊರೆತಿತ್ತು. ಹಿಂದೂ ಪಕ್ಷವು ಅದು ಕಾಶಿ ವಿಶ್ವನಾಥನ ಮೂಲ ಶಿವಲಿಂಗವಾಗಿದೆ ಎಂಬ ಸ್ಪಷ್ಟ ಭೂಮಿಕೆಯನ್ನು ಮಂಡಿಸಿತ್ತು. ಆದರೆ ಮುಸಲ್ಮಾನ ಪಕ್ಷವು ಇದನ್ನು ವಿರೊಧಿಸಿತ್ತು.

೨. ಈ ತಿಂಗಳ ಆರಂಭದಲ್ಲಿ ವಾರಣಾಶಿಯಲ್ಲಿನ ಒಂದು ನ್ಯಾಯಾಲಯವು ಶಿವಲಿಂಗದ ‘ಕಾರ್ಬನ ಡೇಟಿಂಗ್‌’ ಪರೀಕ್ಷೆ (ಯಾವುದೇ ವಸ್ತುವಿನ ಆಯುಷ್ಯವನ್ನು ಅಳೆಯಲು ಮಾಡಲಾಗುವ ವೈಜ್ಞಾನಿಕ ಪ್ರಕ್ರಿಯೆ) ಹಾಗೂ ಇತರ ವೈಜ್ಞಾನಿಕ ಸಂಶೋಧನೆಗಳನ್ನು ಮಾಡುವ ಹಿಂದೂ ಪಕ್ಷದ ಬೇಡಿಕೆಯನ್ನು ನಿರಾಕರಿಸಿತ್ತು. ‘ಇಂತಹ ಪ್ರಕ್ರಿಯೆಯನ್ನು ಮಾಡುವುದರಿಂದ ಶಿವಲಿಂಗದ ಮೇಲೆ ವಿಪರೀತ ಪರಿಣಾಮವಾಗಬಹುದು, ಎಂದು ನ್ಯಾಯಾಲಯವು ಹೇಳಿತ್ತು.