ನವದೆಹಲಿ : ಉಕ್ರೇನನಲ್ಲಿರುವ ಭಾರತೀಯ ಪ್ರಜೆಗಳು ತಕ್ಷಣವೇ ಉಕ್ರೇನ್ ತೊರೆಯಬೇಕು ಎಂದು ಭಾರತೀಯ ರಾಯಭಾರ ಕಚೇರಿ ಸಲಹೆ ನೀಡಿದೆ. ಇಂತಹ ಸಲಹೆ ನೀಡುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಉಕ್ರೇನ್‌ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿ ಮತ್ತು ಇತ್ತೀಚಿನ ದಾಳಿಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರಾಯಭಾರ ಕಚೇರಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಹಂಗೇರಿ, ಸೋಲ್ವಾಕಿಯಾ, ಮಾಲ್ಡೋವಾ, ಪೋಲೆಂಡ್, ರೊಮೇನಿಯಾದಂತಹ ಗಡಿ ರಾಷ್ಟ್ರಗಳ ಸಹಾಯದಿಂದ ನೀವು ಉಕ್ರೇನ್‌ನಿಂದ ಹೊರಬರಬಹುದು ಎಂದು ಅದು ಭಾರತೀಯರನ್ನು ಉದ್ದೇಶಿಸಿ ಹೇಳಿದ್ದಾರೆ.
Advisory to Indian Nationals in Ukraine@MEAIndia @DDNewslive @DDNational @PIB_India @IndianDiplomacy @eoiromania @IndiainPoland @IndiaInHungary @IndiaInSlovakia pic.twitter.com/kFR3qJKlJR
— India in Ukraine (@IndiainUkraine) October 25, 2022
ಭಾರತೀಯ ನಾಗರಿಕರಿಗೆ ಸಹಾಯ ಮಾಡಲು ಸಹಾಯವಾಣಿ ಸಂಖ್ಯೆಗಳನ್ನು ಸಹ ಪ್ರಸಾರ ಮಾಡಲಾಗಿದೆ
ಭಾರತೀಯ ನಾಗರಿಕರ ನೆರವಿಗಾಗಿ ಮೂರು ಸಹಾಯವಾಣಿ ಸಂಖ್ಯೆಗಳು +೩೮೦೯೩೩೫೫೯೯೫೮, +೩೮೦೬೩೫೯೧೭೮೮೧ ಮತ್ತು +೩೮೦೬೭೮೭೪೫೯೪೫ ಅನ್ನು ರಾಯಭಾರ ಕಚೇರಿ ರವಾನಿಸಿದೆ.