ಬಲಾತ್ಕಾರ ನಂತರದ ಕನ್ಯತ್ವ ಪರೀಕ್ಷೆಯ ಮೇಲೆ ಸರ್ವೋಚ್ಚ ನ್ಯಾಯಾಲಯದಿಂದ ನಿಷೇಧ !

ನವದೆಹಲಿ – ಬಲತ್ಕಾರ ಮತ್ತು ಲೈಂಗಿಕ ಶೋಷಣೆ ಈ ಪ್ರಕರಣದಲ್ಲಿ ಮಾಡಲಾಗುವ ಕನ್ಯತ್ವ ಪರೀಕ್ಷೆ ಮೇಲೆ (ಟು ಫಿಂಗರ್ ಟೆಸ್ಟ್) ಸರ್ವೋಚ್ಚ ನ್ಯಾಯಾಲಯ ನಿಷೇಧ ಹೇರಿದೆ. ಇದರ ಜೊತೆಗೆ ಈ ರೀತಿಯ ಪರೀಕ್ಷೆ ನಡೆಸುವವರಿಗೆ ಅಸಭ್ಯವರ್ತನೆಯ ಆರೋಪದಲ್ಲಿ ಅಪರಾಧಿ ಎಂದು ತಿಳಿಯಲಾಗುವುದು ಎಂದು ಸ್ಪಷ್ಟಪಡಿಸಿತು.

೧. ಈ ನ್ಯಾಯಾಲಯವು ಪದೇ ಪದೇ ಬಲಾತ್ಕಾರ ಮತ್ತು ಲೈಂಗಿಕ ಶೋಷಣೆಯ ಪ್ರಕರಣದಲ್ಲಿ ಕನ್ಯತ್ವ ಪರೀಕ್ಷೆ ಮಾಡಲು ನಿರಾಕರಿಸಿದೆ. ಈ ಪರೀಕ್ಷಣೆಗೆ ಯಾವುದೇ ಆಧಾರವಿಲ್ಲ ತದ್ವಿರುದ್ಧ ಸಂತ್ರಸ್ತ ಮಹಿಳೆಯ ಮೇಲೆ ಮತ್ತೆ ಅತ್ಯಾಚಾರ ಮಾಡಿದಂತೆ ಆಗುತ್ತದೆ. ಆಕೆಗೆ ಇನ್ನೊಂದು ಮಾನಸಿಕ ಆಘಾತ ನೀಡುವ ಹಾಗೆ ಆಗುತ್ತದೆ, ಈ ಪರೀಕ್ಷೆ ಮಾಡಬಾರದು, ಎಂದು ಹೇಳಿದೆ.

೨. ನ್ಯಾಯಾಲಯವು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಬಲಾತ್ಕಾರ ಮತ್ತು ಲೈಂಗಿಕ ಶೋಷಣೆಯ ಸಂತ್ರಸ್ತರಿಗೆ ಕನ್ಯತ್ವ ಪರೀಕ್ಷೆ ಮಾಡದಂತೆ ಕಾಳಜಿ ತೆಗೆದುಕೊಳ್ಳಲು ಆದೇಶ ನೀಡಿದೆ. ಹಾಗೂ ಕೇಂದ್ರ ಸರಕಾರ ಸಹಿತ ರಾಜ್ಯ ಸರಕಾರಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸೂಚನೆ ಎಲ್ಲಾ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ಕಳುಹಿಸುವಂತೆ ಆದೇಶ ನೀಡಿದೆ.

೩. ನ್ಯಾಯಾಲಯವು ಸಂತ್ರಸ್ತ ಮಹಿಳೆಯ ಯೋಗ್ಯ ಪರೀಕ್ಷೆ ಆಗಬೇಕು, ಇದಕ್ಕಾಗಿ ಆರೋಗ್ಯ ಸಿಬ್ಬಂದಿಗಳ ಕಾರ್ಯಶಾಲೆ ನಡೆಸಲು ಸಹ ಸೂಚನೆ ನೀಡಿದೆ. ಇದರ ಜೊತೆ ವೈದ್ಯಕೀಯ ಅಭ್ಯಾಸ ಕ್ರಮದ ತಪಾಸಣೆ ಮಾಡಲು ಹೇಳಿದೆ. ಇದರಿಂದ ಬಲಾತ್ಕಾರ ಅಥವಾ ಲೈಂಗಿಕ ಶೋಷಣೆ ಸಂತ್ರಸ್ತ ಮಹಿಳೆಯ ಪರೀಕ್ಷೆ ಮಾಡುವಾಗ ಕನ್ಯತ್ವ ಪರೀಕ್ಷೆ ಒಂದು ಪ್ರಕ್ರಿಯೆ ಎಂದು ಒಪ್ಪಲಾಗುವುದಿಲ್ಲ.