ಮೌಲಾನಾಗಳಿಗೆ ಕೇಜ್ರಿವಾಲ ವರ್ಷಕ್ಕೆ ೧೮ ಸಾವಿರ ರೂಪಾಯಿ ನೀಡುತ್ತಾರೆ ! – ಕೇಂದ್ರ ಸಚಿವ ಅನುರಾಗ ಠಾಕೂರ

ಕೇಂದ್ರ ಸಚಿವ ಅನುರಾಗ ಠಾಕೂರ ಮತ್ತು ದೆಹಲಿಯ ಮುಖ್ಯ ಮಂತ್ರಿ ಅರವಿಂದ ಕೇಜ್ರಿವಾಲ

ನವ ದೆಹಲಿ – ಭಾರತೀಯ ನೋಟುಗಳ ಮೇಲೆ ಶ್ರೀ ಲಕ್ಷ್ಮಿ ಮತ್ತು ಶ್ರೀ ಗಣೇಶನ ಚಿತ್ರಗಳನ್ನು ಮುದ್ರಿಸುವಂತೆ ಒತ್ತಾಯಿಸಿದ ದೆಹಲಿಯ ಮುಖ್ಯ ಮಂತ್ರಿ ಅರವಿಂದ ಕೇಜ್ರಿವಾಲ ಅವರು ಮೌಲವಿಗಳಿಗೆ ಪ್ರತಿವರ್ಷ ೧೮ ಸಾವಿರ ರೂಪಾಯಿ ಗೌರವಧನವನ್ನು ಕೊಡುತ್ತಿದ್ದಾರೆ. ಆದರೆ ಅವರು ಹಿಂದೂ ದೇವಾಲಯಗಳ ಅರ್ಚಕರಿಗೆ, ಗುರುದ್ವಾರಾಗಳ ಗ್ರಂಥಿಗಳಿಗೆ ಮತ್ತು ಚರ್ಚ್‌ಗಳ ಪಾದ್ರಿಗಳಿಗೆ ಎಂದಾದರೂ ೧೮ ಸಾವಿರ ರೂಪಾಯಿ ಗೌರವಧನವನ್ನು ಕೊಟ್ಟಿದ್ದಾರೆಯೇ ?, ಎಂದು ಕೇಂದ್ರ ಸಚಿವ ಅನುರಾಗ ಠಾಕೂರ ಪ್ರಶ್ನಿಸಿದ್ದಾರೆ.

ಠಾಕುರ ತಮ್ಮ ಮಾತನ್ನು ಮುಂದುವರೆಸುತ್ತಾ, ಕೇಜ್ರಿವಾಲ ಅರಾಜಕತೆಯ ಸಂಕೇತವಾಗಿದ್ದಾರೆ. ತಮ್ಮ ಸರಕಾರದಿಂದಲೇ ಮಾಡಲಾಗಿರುವ ಭ್ರಷ್ಟಾಚಾರದ ಆರೋಪಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಅವರು ನೋಟುಗಳ ಮೇಲೆ ದೇವತೆಗಳ ಚಿತ್ರಗಳನ್ನು ಮುದ್ರಿಸಲು ಒತ್ತಾಯಿಸಿದ್ದಾರೆ. ಕೇಜ್ರಿವಾಲ ಅವರು ಶ್ರೀರಾಮಮಂದಿರವನ್ನು ವಿರೋಧಿಸಿದರು, ದೇವತೆಗಳನ್ನು ಅವಮಾನಿಸಿದರು ಮತ್ತು ಈಗ ಅವರು ಇಂತಹ ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ ಎಂದು ಹೇಳಿದರು.