ವಸಂತಕುಂಜ ಸ್ಮಶಾನಭೂಮಿಯ ಸ್ಥಳಾಂತರದ ಕುರಿತು ದೆಹಲಿ ಉಚ್ಚ ನ್ಯಾಯಾಲಯದ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯದ ಸ್ಥಗಿತ

ಸರ್ವೋಚ್ಚ ನ್ಯಾಯಾಲಯ

ನವ ದೆಹಲಿ – ದೆಹಲಿಯ ವಸಂತಕುಂಜ ಪರಿಸರದ ಮಸೂದಪೂರ ಗ್ರಾಮದ ೧೦೦ ವರ್ಷಗಳಷ್ಟು ಹಳೆಯ ಸ್ಮಶಾನಭೂಮಿಯನ್ನು ಕಿಶನಗಡದಲ್ಲಿ ಸ್ಥಳಾಂತರಿಸುವಂತೆ ನೀಡಿದ ದೆಹಲಿ ಉಚ್ಚ ನ್ಯಾಯಾಲಯದ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯವು ಸ್ಥಗಿತದ ಆದೇಶ ನೀಡಿತು. ಹಾಗೆಯೇ ದಕ್ಷಿಣ ದೆಹಲಿ ಮಹಾನಗರಪಾಲಿಕೆಗೆ ಈ ಸ್ಮಶಾನಭೂಮಿಯನ್ನು ಒಂದು ವರ್ಷದೊಳಗೆ ವಿದ್ಯುತ್ ಸ್ಮಶಾನಭೂಮಿಯಲ್ಲಿ ಪರಿವರ್ತನೆಗೊಳಿಸಲು ನಿರ್ದೇಶನ ನೀಡಿತು. ‘ಒಂದು ವೇಳೆ ಪ್ರತಿಯೊಂದು ನಿವಾಸಿ ಸಂಘಟನೆಯು ಸ್ಮಶಾನಭೂಮಿಯನ್ನು ಸ್ಥಳಾಂತರಗೊಳಿಸಲು ಪ್ರಯತ್ನಿಸಿದರೆ, ನಗರದ ಗಡಿಯಲ್ಲಿ ಒಂದೂ ಸ್ಮಶಾನಭೂಮಿ ಬಾಕಿ ಉಳಿಯುವುದಿಲ್ಲ’, ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.

೧. ‘ವಸಂತಕುಂಜ ಪರಿಸರದ ಸ್ಮಶಾನಭೂಮಿ ‘ದೆಹಲಿ ಮಹಾನಗರಪಾಲಿಕೆ ಕಾಯಿದೆ, ೧೯೫೭’ ಜಾರಿಗೊಳ್ಳುವ ಮೊದಲೇ ಅಸ್ತಿತ್ವದಲ್ಲಿದ್ದರೇ ವಸಂತಕುಂಜ ನಿವಾಸಿ ವಸಾಹತು ೧೯೯೦ರಲ್ಲಿ ಅಸ್ತಿತ್ವದಲ್ಲಿ ಬಂದಿದೆ’, ಎಂದು ನ್ಯಾಯಮೂರ್ತಿ ಎಮ್.ಆರ್. ಶಹಾ ಮತ್ತು ನ್ಯಾಯಮೂರ್ತಿ ಎಮ್.ಎಮ್. ಸುಂದರೇಶ ಇವರ ನ್ಯಾಯಪೀಠವು ಸ್ಥಗಿತ ತೀರ್ಪು ಆದೇಶವನ್ನು ನೀಡುವಾಗ ಹೇಳಿದೆ.

೨. ವಸಂತಕುಂಜ ನಿವಾಸಿ ಕಲ್ಯಾಣ ಸಂಘಟನೆಯ ವತಿಯಿಂದ ದಾಖಲಿಸಲಾಗಿರುವ ದೂರಿನ ಆಲಿಕೆಯ ಬಳಿಕ ಈ ತೀರ್ಪು ನೀಡಲಾಯಿತು.

೩. ವಸಂತಕುಂಜ ನಿವಾಸಿ ಕಲ್ಯಾಣ ಸಂಘಟನೆಯ ಪ್ರತಿನಿಧಿಸುವ ಹಿರಿಯ ನ್ಯಾಯವಾದಿ ಕರಣ ಸಿಂಗ ಭಾಟಿಯವರು, “ಸ್ಮಶಾನಭೂಮಿ ವಸಂತಕುಂಜದ ನಿವಾಸಿ ಸಂಕೀರಣದ ಹತ್ತಿರವಿದೆ ಮತ್ತು ಇದರಿಂದ ಸಂಕೀರಣದಲ್ಲಿ ವಾಸಿಸುವ ನಿವಾಸಿಗಳ ಆರೋಗ್ಯಕ್ಕೆ ಅಪಾಯವಿದೆ.” ಎಂದು ವಾದವನ್ನು ಮಂಡಿಸಿದರು.ಇದಕ್ಕೆ ಮಹಾನಗರಪಾಲಿಕೆಯ ಪರ ನ್ಯಾಯವಾದಿ ವಂದನಾ ಸಹಗಲ ಇವರು ‘ಈ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಣಯ ನೀಡುವ ಅಧಿಕಾರ ಮಹಾಪಾಲಿಕೆಯ ಸ್ಥಾಯಿ ಸಮಿತಿಗೆ ಇದೆ’, ಎಂದು ಯುಕ್ತಿವಾದ ಮಂಡಿಸಿದರು. ನ್ಯಾಯವಾದಿ ಸಹಗಲ ಇವರು ಮಾಡಿರುವ ಯುಕ್ತಿವಾದವನ್ನು ಸರ್ವೋಚ್ಚ ನ್ಯಾಯಾಲಯವು ಸಮ್ಮತಿಸಿತು.