ನನಗೆ ಎಲ್ಲರ ಹೆಂಡತಿಯರು-ಮಕ್ಕಳು ಮತ್ತು ಮನೆಗಳು ಗೊತ್ತು ! – ‘ಜೊಮ್ಯಾಟೋ’ ಸಂಸ್ಥೆಯ ‘ಡೆಲಿವರಿ ಬಾಯ್’ ನದೀಮ್‌ನಿಂದ ಜನರಿಗೆ ಬೆದರಿಕೆ

(‘ಡೆಲಿವರಿ ಬಾಯ್’ ಎಂದರೆ ಆನ್‌ಲೈನ್‌ನಲ್ಲಿ ಖರೀದಿಸಿದ ಗೃಹೋಪಯೋಗಿ ವಸ್ತುಗಳು ಅಥವಾ ಆಹಾರ ಪದಾರ್ಥಗಳನ್ನು ತರುವ ವ್ಯಕ್ತಿ)

ನವ ದೆಹಲಿ : ದೇಶದ ರಾಜಧಾನಿಯಲ್ಲಿ ಆನ್‌ಲೈನ್ ಆಹಾರ ಮಾರುಕಟ್ಟೆಯಾದ ‘ಜೊಮ್ಯಾಟೋ’ದ ‘ಡೆಲಿವರಿ ಬಾಯ್’ ನದೀಮ್ ಪೊಲೀಸ್ ಹೊರಠಾಣೆಯ ಮುಂದೆ ತನ್ನ ಬೈಕಿಗೆ ಬೆಂಕಿ ಹಚ್ಚಿದ್ದಾನೆ. ಬೆಂಕಿಯಲ್ಲಿ ಪೊಲೀಸ್ ಠಾಣೆಯ ಕೆಲವು ಭಾಗ ಹಾನಿಗೊಳಗಾಗಿದೆ. ನದೀಮ್ ಕೂಡ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ಈ ಸಮಯದಲ್ಲಿ, ಅವನು ಘಟನಾ ಸ್ಥಳದಲ್ಲಿ ನೆರೆದಿದ್ದ ಜನರನ್ನು ‘ಎಲ್ಲರ ಹೆಂಡತಿಯರು, ಮಕ್ಕಳು ಮತ್ತು ಮನೆಗಳನ್ನು ನಾನು ಬಲ್ಲೆ’ ಎಂಬ ಮಾತುಗಳಿಂದ ಬೆದರಿಸಿದನು.

‘ಮಾಧ್ಯಮ ವರದಿಗಳ ಪ್ರಕಾರ, ಮೊಹಮ್ಮದ್ ನದೀಮ್ ‘ಜೊಮ್ಯಾಟೊ’ದಲ್ಲಿ ‘ಡೆಲಿವರಿ ಬಾಯ್’ ಆಗಿ ಕೆಲಸ ಮಾಡುತ್ತಿದ್ದಾನೆ. ಆತ ದೆಹಲಿಯ ಹೌಜರಾನಿ ಪ್ರದೇಶದ ನಿವಾಸಿಯಾಗಿದ್ದಾರೆ. ಎರಡು ದಿನಗಳ ಹಿಂದೆ ಖಾನ್ ಮಾರ್ಕೆಟ್‌ನಲ್ಲಿ ತನ್ನನ್ನು ದಿಟ್ಟಿಸಿದ ನದೀಮ್ ವಿರುದ್ಧ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಆದ್ದರಿಂದ ಪೊಲೀಸರು ನದೀಮ್‌ನನ್ನು ಬುದ್ಧಿ ಹೇಳಿ ಬಿಟ್ಟಿದ್ದರು. ಆದರೆ ನದೀಮ್ ಮಾತ್ರ ‘ಪೋಲೀಸರು ನನಗೆ ಕೆನ್ನಗೆ ಹೊಡೆದರು’ ಎಂದು ಹೇಳಿದ. ಮರುದಿನ ನದೀಮ್ ಪೆಟ್ರೋಲ್‌ನೊಂದಿಗೆ ಪೊಲೀಸ್ ಠಾಣೆಯ ಪ್ರದೇಶಕ್ಕೆ ಬಂದನು. ಅಲ್ಲಿ ಅವನು ಪೆಟ್ರೋಲ್ ಸಿಂಪಡಿಸಿ ತನ್ನ ಬೈಕಿಗೆ ಬೆಂಕಿ ಹಚ್ಚಿದನು. ಪ್ರಕರಣಕ್ಕೆ ಸಂಬಂಧಿಸಿದಂತೆ ನದೀಮ್‌ನನ್ನು ಬಂಧಿಸಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. (ಆ ವ್ಯಕ್ತಿ ಪೊಲೀಸ್ ಹೊರಠಾಣೆ ಪ್ರದೇಶಕ್ಕೆ ಬಂದು ಬೈಕಿಗೆ ಬೆಂಕಿ ಹಚ್ಚುವವರೆಗೂ ಪೊಲೀಸರು ನಿದ್ರೆ ಮಾಡುತ್ತಿದ್ದರೇ ? ಇದು ಪೊಲೀಸರಿಗೆ ನಾಚಿಕೆಗೇಡಿನ ಸಂಗತಿ !- ಸಂಪಾದಕರು)

ಸಂಪಾದಕೀಯ ನಿಲುವು

ಅಂತಹ ಮತಾಂಧರು ಕೆಲಸಗಳನ್ನು ಮಾಡುವ ಹೆಸರಿನಲ್ಲಿ ಜನರ ಬಗ್ಗೆ ಮಾಹಿತಿಯನ್ನು ಹೇಗೆ ಸಂಗ್ರಹಿಸುತ್ತಾರೆ ಎಂಬುದನ್ನು ಇದು ತೋರಿಸುತ್ತದೆ ! ಅವರು ಈ ಮಾಹಿತಿಯನ್ನು ಲವ್ ಜಿಹಾದ್‌ಗಾಗಿ ಬಳಸುವುದಿಲ್ಲವೇ ?