ಕನ್ಯಾಕುಮಾರಿ(ತಮಿಳನಾಡು) ಜಿಲ್ಲೆಯಲ್ಲಿ ಅನಧಿಕೃತ ಚರ್ಚ್‍ನ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಹಿಂದುತ್ವನಿಷ್ಠರ ಬಂಧನ !

ಕನ್ಯಾಕುಮಾರಿ ಜಿಲ್ಲೆಯಲ್ಲಿ ಮಾಥುರ ಎಕ್ವಡಕ್ಟ ಸೇತುವೆಯ ಸಮೀಪ ಅನಧಿಕೃತವಾದ ಚರ್ಚ್‍ನ ವಿರುದ್ಧ ಇತ್ತಿಚೆಗೆ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು ತೀವ್ರವಾಗಿ ಆಂದೋಲನವನ್ನು ಮಾಡಿದ್ದವು. ಈ ಅನಧಿಕೃತ ಚರ್ಚ್ ಅನ್ನು ತೆಗೆಯುವಂತೆ ಒತ್ತಾಯಿಸಿ ಜಿಲ್ಲೆಯ ೩೦೦ ಕ್ಕೂ ಹೆಚ್ಚು ಹಿಂದುತ್ವನಿಷ್ಠರು ೫೦ ಸ್ಥಳಗಳಲ್ಲಿ ‘ರಸ್ತೆ ತಡೆ’ ಆಂದೋಲನವನ್ನು ಮಾಡಿದರು.

ತಮಿಳುನಾಡಿನ ಡಿಎಂಕೆ ಸರಕಾರವು ೩೬ ಸಾವಿರ ಹಿಂದೂ ದೇವಾಲಯಗಳಲ್ಲಿ ಬ್ರಾಹ್ಮಣೇತರ ಪುರೋಹಿತರನ್ನು ನೇಮಿಸಲಿದೆ !

ತಮಿಳುನಾಡಿನಲ್ಲಿ ಹೊಸದಾಗಿ ಚುನಾಯಿತ ಡಿಎಂಕೆ ಪಕ್ಷದ ಸರಕಾರವು ೧೦೦ ದಿನಗಳಲ್ಲಿ ರಾಜ್ಯದ ದೇವಾಲಯಗಳಲ್ಲಿ ೨೦೦ ಬ್ರಾಹ್ಮಣೇತರ ಪುರೋಹಿತರನ್ನು ನೇಮಕ ಮಾಡುವುದಾಗಿ ಘೋಷಿಸಿದೆ. ಅಲ್ಲದೆ ೧೦೦ ದಿನಗಳ ‘ಶೈವ ಅರ್ಚಕ’ (ಪುಜಾರಿ) ಅಭ್ಯಾಸಕ್ರಮವನ್ನು ಪ್ರಾರಂಭಿಸಲಾಗುವುದು.

ದೇವಾಲಯಗಳ ಭೂಮಿ ಯಾವಾಗಲೂ ದೇವಾಲಯಗಳಿಗೆ ಸೇರಿರುತ್ತದೆ ! – ಮದ್ರಾಸ್ ಉಚ್ಚನ್ಯಾಯಾಲಯದ ಐತಿಹಾಸಿಕ ಆದೇಶ

ದೇವಾಲಯಗಳಿಗೆ ದಾನ ಮಾಡುವವರ ಇಚ್ಛೆಗೆ ವಿರುದ್ಧವಾಗಿ ಯಾರಿಗೂ ಭೂಮಿ ನೀಡಬಾರದು. ಭೂಮಿ ಯಾವಾಗಲೂ ದೇವಾಲಯಗಳಿಗೆ ಸೇರಿರುತ್ತದೆ. ಸಾಮಾನ್ಯವಾಗಿ ದೇವಾಲಯದ ಭೂಮಿಯ ಮೇಲೆ ಆಯಾ ಸಮುದಾಯದ ಜನರ ಹಿತಾಸಕ್ತಿಗಳು ಅವಲಂಬಿಸಿರುವ ಸಂದರ್ಭಗಳಲ್ಲಿ ಕಾನೂನು ಅನ್ವಯಿಸುವುದಿಲ್ಲ ಎಂಬ ಐತಿಹಾಸಿಕ ತೀರ್ಪನ್ನು ಮದ್ರಾಸ್ ಉಚ್ಚನ್ಯಾಯಾಲಯವು ನೀಡಿದೆ.

ತಮಿಳುನಾಡಿನಲ್ಲಿ ಕಳೆದ ೩೬ ವರ್ಷಗಳಲ್ಲಿ ಹಿಂದೂ ದೇವಾಲಯದ ೪೭೦೦೦ ಎಕರೆ ಭೂಮಿ ನಾಪತ್ತೆ !

ಭಕ್ತರು ನಿದ್ರಿಸುತ್ತಿರುವುದರಿಂದ ಜನ್ಮಹಿಂದುಗಳೇ ದೇವಾಲಯಗಳ ಭೂಮಿಯನ್ನು ಕಬಳಿಸುತ್ತಿರುವುದು ಶೋಭಿಸುವಂತಹದ್ದಲ್ಲ ! ದೇವಾಲಯಗಳು ಮತ್ತು ದೇವಾಲಯದ ಆಸ್ತಿಯನ್ನು ರಕ್ಷಿಸುವುದು ಸಹ ಭಕ್ತಿಯೇ ಆಗಿದೆ ಎಂದು ಹಿಂದೂಗಳು ಯಾವಾಗ ಅರಿತುಕೊಳ್ಳುವರು ?

ತಮಿಳುನಾಡಿನ ಒಂದು ಹಳ್ಳಿಯಲ್ಲಿ ಲಸಿಕೆ ತೆಗೆದುಕೊಳ್ಳಬೇಕೆಂದು ಉಚಿತ ಬಿರಿಯಾನಿ ಹಾಗೂ ಉಡುಗೊರೆ ನೀಡುವ ಯೋಜನೆ

ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಇಂತಹ ಯೋಜನೆಯನ್ನು ನಡೆಸಬೇಕಾಗುತ್ತದೆ, ಇದು ಜನರು ತಮ್ಮ ಆರೋಗ್ಯದ ಬಗ್ಗೆ ಎಷ್ಟು ಅಸಡ್ಡೆ ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ !

ಕೊರೊನಾದ ಪ್ರಭಾವವನ್ನು ಕಡಿಮೆಗೊಳಿಸಲು ಕೊಯಮತ್ತೂರಿನಲ್ಲಿ (ತಮಿಳುನಾಡು) ‘ಕೊರೊನಾ ದೇವಿ’ ದೇವಸ್ಥಾನದ ಸ್ಥಾಪನೆ

ಹಿಂದೂಗಳಿಗೆ ಧರ್ಮಶಿಕ್ಷಣವಿಲ್ಲದ ಕಾರಣ, ಅವರಿಂದ ಈ ರೀತಿಯ ಅಧಾರ್ಮಿಕ ಕೃತಿ ಆಗುತ್ತಿದೆ. ಹಿಂದೂ ರಾಷ್ಟ್ರದಲ್ಲಿ ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವ ಮೂಲಕ ಸಾಧನೆಯನ್ನು ಕಲಿಸಲಾಗುವುದು !

ರಾಜೀವ್ ಗಾಂಧಿಯನ್ನು ಹತ್ಯೆಗೈದು ಶಿಕ್ಷೆ ಅನುಭವಿಸುತ್ತಿರುವ ೭ ಮಂದಿಗೆ ಕ್ಷಮೆ ನೀಡಬೇಕು !

ತಮಿಳುನಾಡಿನ ಚುನಾವಣೆಯಲ್ಲಿ ಆಯ್ಕೆಯಾದ ದ್ರಮುಕ ಪಕ್ಷದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇವರು ಮಾಜಿ ಪ್ರಧಾನಿ ರಾಜೀವ ಗಾಂಧಿ ಹತ್ಯೆ ಪ್ರಕರಣದ ಎಲ್ಲಾ ಏಳು ಅಪರಾಧಿಗಳಿಗೆ ಕ್ಷಮೆ ನೀಡಬೇಕೆಂದು ಒತ್ತಾಯಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.

ತಮಿಳುನಾಡು ರಾಜ್ಯದ ಈರೋಡ್ ಜಿಲ್ಲೆಯಲ್ಲಿ ಹಿಂದೂಗಳ ಮತಾಂತರದ ಘಟನೆಗಳಲ್ಲಿ ಹೆಚ್ಚಳ !

ಕ್ರೈಸ್ತ ಮಿಷನರಿಗಳನ್ನು ನಿಯಂತ್ರಿಸಬೇಕಾದರೆ, ಭಾರತದಾದ್ಯಂತ ಮತಾಂತರ ವಿರೋಧಿ ಕಾನೂನುಗಳನ್ನು ಜಾರಿಗೆ ತರುವುದು ಅನಿವಾರ್ಯ ! ತಮಿಳುನಾಡಿನಲ್ಲಿ ಹೆಚ್ಚುತ್ತಿರುವ ಹಿಂದೂಗಳ ಮತಾಂತರವನ್ನು ಗಮನದಲ್ಲಿಟ್ಟುಕೊಂಡು, ಪರಿಣಾಮಕಾರಿ ಹಿಂದೂ ಸಂಘಟನೆಗೆ ಪರ್ಯಾಯ ಮಾರ್ಗಗಳಿಲ್ಲ !

ಯಾವುದೇ ಧಾರ್ಮಿಕ ಸಮೂಹದಿಂದ ಯಾವುದೇ ರೀತಿಯ ಅಸಹಿಷ್ಣುತನವನ್ನು ತಡೆಗಟ್ಟಬೇಕು !

ಕೇವಲ ಒಂದು ಪ್ರದೇಶದಲ್ಲಿ ಒಂದು ನಿರ್ದಿಷ್ಠ ಧರ್ಮದ ಬಹುಸಂಖ್ಯಾತ ಜನರು ಮಾತ್ರ ವಾಸಿಸುತ್ತಿದ್ದಾರೆ; ಎಂಬ ಕಾರಣದಿಂದ ಇತರ ಧರ್ಮಗಳ ಹಬ್ಬಗಳ ಆಚರಣೆ ಅಥವಾ ರಸ್ತೆಯಲ್ಲಿ ಮೆರವಣಿಗೆಗಳನ್ನು ನಡೆಸುವುದನ್ನು ತಡೆಗಟ್ಟಲು ಆಗುವುದಿಲ್ಲ ಎಂದು ಮದ್ರಾಸ ಉಚ್ಚ ನ್ಯಾಯಾಲಯವು ಒಂದು ಅರ್ಜಿಯ ವಿಚಾರಣೆಯ ಸಮಯದಲ್ಲಿ ತೀರ್ಪು ನೀಡಿದೆ.

ಕೊರೋನಾ ಲಸಿಕೆ ಬಗ್ಗೆ ಗಾಳಿಸುದ್ದಿಗಳನ್ನು ಹಬ್ಬಿಸಿದ್ದಕ್ಕಾಗಿ ತಮಿಳು ನಟ ಮನ್ಸೂರ್ ಅಲಿ ಖಾನ್‍ಗೆ ೨ ಲಕ್ಷ ರೂಪಾಯಿಗಳ ದಂಡ !

ಕೊರೋನಾ ಲಸಿಕೆ ಬಗ್ಗೆ ಗಾಳಿಸುದ್ದಿಗಳನ್ನು ಹಬ್ಬಿಸಿದ್ದಕ್ಕಾಗಿ ನಟ ಮನ್ಸೂರ್ ಅಲಿ ಖಾನ್ ಅವರಿಗೆ ಮದ್ರಾಸ್ ಉಚ್ಚ ನ್ಯಾಯಾಲಯವು ೨ ಲಕ್ಷ ರೂಪಾಯಿಯ ದಂಡವನ್ನು ವಿಧಿಸಿದೆ.