ಮದ್ರಾಸ್ ಉಚ್ಚ ನ್ಯಾಯಾಲಯದಿಂದ ದೇವಾಲಯದಲ್ಲಿನ ಮುಖ್ಯ ಅರ್ಚಕರ ನೇಮಕಾತಿಯ ಪ್ರಕರಣದಲ್ಲಿ ‘ಯಥಾಸ್ಥಿತಿ’ ಕಾಪಾಡಲು ಆದೇಶ !

ದೇವಸ್ಥಾನಗಳು ಸರಕಾರಿಕರಣವಾದಾಗ, ಸರಕಾರ ಯಾರಿಗೆ ಬೇಕಾದದರೂ ದೇವಸ್ಥಾನದ ಅರ್ಚಕರನ್ನಾಗಿ ಮತ್ತು ಸೇವಕರನ್ನಾಗಿ ನೇಮಿಸಿ ಹಿಂದೂ ಸಂಪ್ರದಾಯಗಳನ್ನು ಉಲ್ಲಂಘಿಸುತ್ತದೆ, ಎಂಬುದನ್ನು ಗಮನದಲ್ಲಿಡಿ !

ಚೆನ್ನೈ (ತಮಿಳುನಾಡು) – ಮದ್ರಾಸ್ ಉಚ್ಚ ನ್ಯಾಯಾಲಯವು ಹಿಂದೂಗಳ ದೇವಸ್ಥಾನಗಳಲ್ಲಿ ಮುಖ್ಯ ಅರ್ಚಕರ ನೇಮಕದ ವಿಷಯವನ್ನು ‘ಯಥಾಸ್ಥಿತಿ’ ಕಾಪಾಡಲು ಆದೇಶಿಸಿದೆ. ‘ಅಖಿಲ ಭಾರತೀಯ ಆದಿ ಶೈವ ಶಿವಾಚಾರ್ಯ ಸೇವಾ ಸಂಗಮ’ದ ಅರ್ಜಿಯ ವಿಚಾರಣೆ ವೇಳೆ ಈ ಮಧ್ಯಂತರ ಆದೇಶವನ್ನು ನೀಡಲಾಗಿದೆ. ಮುಂದಿನ ವಿಚಾರಣೆ ಆಗಸ್ಟ್ 25 ರಂದು ನಡೆಯಲಿದೆ. ರಾಜ್ಯದಲ್ಲಿ ಮುಖ್ಯ ಅರ್ಚಕ, ಪರಿಚಾರಕ ಇತ್ಯಾದಿ ಹುದ್ದೆಗಳಿಗೆ ಸರಕಾರದಿಂದ ಅರ್ಜಿಗಳನ್ನು ಆಹ್ವಾನಿಸುವ ಜಾಹೀರಾತು ಜುಲೈ 6 ರಂದು ಪ್ರಕಟಿಸಲಾಗಿತ್ತು. ಅಖಿಲ ಭಾರತೀಯ ಆದಿ ಶೈವ ಶಿವಾಚಾರ್ಯ ಸೇವಾ ಸಂಗಮ’ವು ಈ ಜಾಹೀರಾತನ್ನು ರದ್ದುಪಡಿಸುವಂತೆ ಕೋರಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.