ದೇವಸ್ಥಾನದ ಪರಿಸರದಲ್ಲಿ ಪೂಜೆಯ ಬದಲಾಗಿ ಶಾಪಿಂಗ್ ಸೆಂಟರ ನಿರ್ಮಾಣವಾಗಿದೆ ! – ಮದ್ರಾಸ್ ಉಚ್ಚ ನ್ಯಾಯಾಲಯ

ದೇವಸ್ಥಾನ ಸರಕಾರಿಕರಣವಾದ ನಂತರ ಹೀಗೆಯೇ ಆಗುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಂಡು ದೇವಸ್ಥಾನದ ಸರಕಾರಿಕರಣವನ್ನು ತಡೆಗಟ್ಟಲು ಹಿಂದೂ ರಾಷ್ಟ್ರವನ್ನು ಸ್ಥಾಪಿಸಿರಿ !

ತಮಿಳನಾಡುವಿನಲ್ಲಿ ಹಿಂದುದ್ವೇಷಿ ದ್ರಾವಿಡ ಮುನ್ನೆತ್ರ ಕಳಘಂನ(ದ್ರಾವಿಡ ಪ್ರಗತಿ ಸಂಘ) ಸರಕಾರವು ಅಧಿಕಾರದಲ್ಲಿರುವುದರಿಂದ ಹಿಂದೂ ಧರ್ಮದ ಮೇಲೆ ಹೀಗೆ ಆಘಾತಗಳಾಗುತ್ತಲೇ ಇರುವುದು. ಇದನ್ನು ತಡೆಯಲು ಹಿಂದುಗಳು ಸಂಘಟಿತರಾಗಿ ಕಾನೂನುರೀತ್ಯಾ ಮಾರ್ಗದಿಂದ ಇಂತಹವುಗಳನ್ನು ಸಂಯಮದಿಂದ ವಿರೋಧಿಸುವುದು ಅಗತ್ಯವಿದೆ !

ಚೆನ್ನೈ (ತಮಿಳನಾಡು) – ಹಿಂದೂಗಳ ದೇವಸ್ಥಾನಗಳನ್ನು ಪೂಜಾರ್ಚನೆಗಾಗಿ ಉಪಯೋಗಿಸುವ ಬದಲು ಅಲ್ಲಿ ಶಾಪಿಂಗ್ ಸೆಂಟರಗಳು ನಿರ್ಮಾಣವಾಗಿವೆ, ಎಂದು ಮದ್ರಾಸ ಉಚ್ಚ ನ್ಯಾಯಾಲಯವು ಅಸಮಾಧಾನವನ್ನು ವ್ಯಕ್ತಪಡಿಸಿದೆ. ಈ ಸಮಯದಲ್ಲಿ ನ್ಯಾಯಾಲಯವು ಸರಕಾರದ ಧಾರ್ಮಿಕ ನಿರ್ವಹಣಾ ಇಲಾಖೆಯ ಮೇಲೆ ಚಾಟಿ ಬೀಸಿದೆ. ಕೆ. ಸುರೇಶ ಇವರು ಸಲ್ಲಿಸಿದ್ದ ಅರ್ಜಿಯ ಬಗ್ಗೆ ವಿಚಾರಣೆ ಮಾಡುತ್ತಿರುವಾಗ ಈ ರೀತಿ ಚಾಟಿ ಬೀಸಿದೆ. ಕೆ. ಸುರೇಶ ಇವರು ‘ಧರ್ಮಸೇನಾ’ ಸಂಘಟನೆಯ ಉಪಾಧ್ಯಕ್ಷರಾಗಿದ್ದಾರೆ. ಈ ಅರ್ಜಿಯನ್ನು ಕನ್ಯಾಕುಮಾರಿಯ ಆದಿಕೇಶವ ದೇವಸ್ಥಾನದ ಪೂಜೆಯ ವಿಷಯದಲ್ಲಿ ಸಲ್ಲಿಸಲಾಗಿತ್ತು. ದೇವಸ್ಥಾನದಲ್ಲಿನ ಪೂಜೆ ಹಾಗೂ ಅನುಷ್ಠಾನ ಇವುಗಳಿಗಾಗಿ ವಿಶೇಷ ಮಠಗಳಿರಬೇಕು ಎಂಬುದು ಕೆ. ಸುರೇಶ ಇವರ ಹೇಳಿಕೆಯಾಗಿದೆ. ಈ ಬಗ್ಗೆ ನ್ಯಾಯಾಲಯವು, ಇದನ್ನು ನ್ಯಾಯಾಲಯವು ನಿರ್ಣಯಿಸಲು ಸಾಧ್ಯವಿಲ್ಲ. ಅದಕ್ಕಾಗಿ ಯೋಗ್ಯ ವೇದಿಕೆಯನ್ನು(ಸಂಬಂಧಿತ ನ್ಯಾಸ) ಸಂಪರ್ಕಿಸಬೇಕು ಎಂದು ಹೇಳಿತು.

ಮದ್ರಾಸ ಉಚ್ಚ ನ್ಯಾಯಾಲಯವು ಹೇಳಿದಂತಹ ವಿಷಯಗಳು :

೧. ಸರಕಾರವು ದೇವಸ್ಥಾನದ ಪ್ರಾಚೀನ ಮೌಲ್ಯದತ್ತ ನಿರ್ಲಕ್ಷತೋರಿ ದೇವಸ್ಥಾನದ ಪರಿಸರದಲ್ಲಿ ಹಾಗೂ ಇತರ ಭೂಮಿಯನ್ನು ವ್ಯಾಪಾರಕ್ಕಾಗಿ ಬಾಡಿಗೆಗೆ ನೀಡಿದೆ.

೨. ದೇವಸ್ಥಾನದ ಸಂಪತ್ತನ್ನು ವ್ಯಾಪಾರದ ಕಾರ್ಯಕ್ಕಾಗಿ ಉಪಯೋಗಿಸಲು ಅನುಮತಿ ನೀಡಿದ್ದರಿಂದ ಇಲ್ಲಿ ಅಂಗಡಿಗಳೆಲ್ಲ ಶಾಪಿಂಗ್ ಸೆಂಟರಗಳಾಗಿವೆ.

೩. ಜನರು ಮಧುರೈಯಲ್ಲಿನ ಮೀನಾಕ್ಷಿ ಅಮ್ಮನ ದೇವಸ್ಥಾನದ ಹೊರಗೆ ಹತ್ತಿದ್ದ ಬೆಂಕಿಯ ಘಟನೆಯಿಂದ ಪಾಠ ಕಲಿತಿಲ್ಲ. (ಇಲ್ಲಿ ನಡೆದ ಅಗ್ನಿ ದುರಂತದಲ್ಲಿ ೩೦ ಅಂಗಡಿಗಳು ಸುಟ್ಟು ಹೋಗಿದ್ದವು)

೪. ಈ ದುಸ್ಥಿತಿಗಾಗಿ ಕೇವಲ ಧಾರ್ಮಿಕ ನಿರ್ವಹಣಾ ಮಂಡಳಿಯು ಮಾತ್ರ ದೋಷಿಯಲ್ಲ, ಅಲ್ಲಿ ಅಂಗಡಿಗಳನ್ನು ಹಾಕಿದ್ದ ಗುತ್ತಿಗೆದಾರರೂ ಅಷ್ಟೇ ಕಾರಣಕರ್ತರಾಗಿದ್ದಾರೆ. ಅವರು ಬಾಡಿಗೆ ಅಥವಾ ಸಣ್ಣಪುಟ್ಟ ಪರವಾನಗಿಯ ಶುಲ್ಕವನ್ನು ನೀಡಿ ದೇವಸ್ಥಾನದ ಭೂಮಿಯನ್ನು ಉಪಯೋಗಿಸಿ ಅನಿರ್ದಿಷ್ಟ ಕಾಲದ ವರೆಗೆ ಅದರ ಮಾಲಿಕರಾಗಿದ್ದಾರೆ.

೫. ಇನ್ನೊಂದು ಕಡೆ ದೇವಸ್ಥಾನಕ್ಕೆ ಆರ್ಥಿಕವಾಗಿ ಬಿಸಿ ಮುಟ್ಟಿದೆ. ಅರ್ಚಕರಿಗೆ ಸಮಯಕ್ಕೆ ಸರಿಯಾಗಿ ಸಂಬಳ ಸಿಗುವುದಿಲ್ಲ. ಜೊತೆಗೆ ಧಾರ್ಮಿಕ ಪರಂಪರೆಯು ಯೋಗ್ಯ ರೀತಿಯಲ್ಲಿ ಪಾಲನೆಯಾಗುತ್ತಿಲ್ಲ.