ತಿರುನೆಲವೇಲಿ (ತಮಿಳುನಾಡು) ಇಲ್ಲಿನ ಹಿಂದೂಗಳಿಗೆ ಪವಿತ್ರವಾದ ಬೆಟ್ಟದ ಮೇಲೆ ಚಂದ್ರ ಮತ್ತು ನಕ್ಷತ್ರ” ಚಿತ್ರಿಸಿ ‘ಅಲ್ಲಾಹ’ ಮತ್ತು ‘786’ ಬರೆದ ಧರ್ಮಾಂಧರು!

ಕೋಪಗೊಂಡ ಹಿಂದೂಗಳಿಂದ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಬೇಡಿಕೆ.

* ಸರಕಾರೀಕರಣ ಆಗಿರುವ ದೇವಸ್ಥಾನ ಮತ್ತು ಪವಿತ್ರ ಸ್ಥಾನಗಳ ಸ್ಥಿತಿ ಏನಾಗಬಲ್ಲದು ಎಂಬುದನ್ನು ಗಮನಿಸಿ ಸರಕಾರೀಕರಣವನ್ನು ರದ್ದುಪಡಿಸಿ ದೇವಸ್ಥಾನಗಳನ್ನು ಭಕ್ತರ ಅಧೀನಕೊಪ್ಪಿಸಲು ಹಿಂದೂರಾಷ್ಟ್ರದ ಸ್ಥಾಪನೆ ಮಾಡಿರಿ!

* ಮಸೀದಿ ಅಥವಾ ಚರ್ಚ್‍ಗಳ ಮೇಲೆ ಹಿಂದೂಗಳು ತಮ್ಮ ಧರ್ಮದ ಪವಿತ್ರ ಅಕ್ಷರಗಳನ್ನು ಬರೆದಿದ್ದರೆ ಇಷ್ಟೊತ್ತಿಗೆ ದೇಶದಲ್ಲಿ ಅಷ್ಟೇ ಅಲ್ಲ ಇಡೀ ಜಗತ್ತಿನಲ್ಲಿ ಹಿಂಸಾತ್ಮಕ ಪ್ರತಿಕ್ರಿಯೆಯು ಉದ್ಭವಿಸುತ್ತಿದ್ದವು.

* ಹಿಂದೂದ್ವೇಷಿ ದ್ರಮುಕ ಪಕ್ಷವು ಅಧಿಕಾರದಲ್ಲಿ ಇರುವ ರಾಜ್ಯದಲ್ಲಿ ಹಿಂದೂಗಳ ಧಾರ್ಮಿಕ ಸ್ಥಳಗಳು ಸಂಕಷ್ಟದಲ್ಲಿ ಸಿಲುಕುವುದರಲ್ಲಿ ಆಶ್ಚರ್ಯವೇನೂ ಇಲ್ಲ?

ತಿರುನೆಲವೇಲಿ(ತಮಿಳುನಾಡು)- ಇಲ್ಲಿಯ ದೇವಸ್ಥಾನಗಳಿರುವ ಪವಿತ್ರ ಬೆಟ್ಟದ ಮೇಲೆ ಧರ್ಮಾಂಧರು ಚಂದ್ರ ನಕ್ಷತ್ರ ಬರೆದಿರುವುದು ಮತ್ತು 786 (ಇಸ್ಲಾಂನಲ್ಲಿ ಪವಿತ್ರ ಸಂಖ್ಯೆ. ಈ ಸಂಖ್ಯೆಯನ್ನು ಸ್ಮರಿಸಿದರೆ ಕಾರ್ಯದಲ್ಲಿ ಯಶಸ್ಸು ಸಿಗುವುದು ಎಂದು ಆ ಪಂಥದವರಲ್ಲಿ ಶ್ರದ್ಧೆ ಇದೆ) ಈ ಸಂಖ್ಯೆ ಹಾಗೂ ಅಲ್ಲಾಹ ಶಬ್ದ ಬರೆದಿರುವುದು ಬೆಳಕಿಗೆ ಬಂದಿದೆ. ತದನಂತರ ಅಲ್ಲಿಯ ಹಿಂದೂಗಳು ಆಕ್ಷೇಪ ವ್ಯಕ್ತಪಡಿಸುತ್ತಾ ರಾಜ್ಯದ ಧಾರ್ಮಿಕ ದತ್ತಿ ವಿಭಾಗದವರು ತಕ್ಷಣ ಕ್ರಮ ಜರುಗಿಸಬೇಕು. ಮತ್ತು ಬೆಟ್ಟ ಹಾಗೂ ಮಂದಿರಗಳ ರಕ್ಷಣೆ ಮಾಡಬೇಕು ಎಂದು ಬೇಡಿಕೆಯನ್ನು ಮಾಡಿದ್ದಾರೆ. ಧರ್ಮಾಂಧರು ಪವಿತ್ರ ಬೆಟ್ಟದ ಮೇಲೆ ಇರುವ ದೇವಸ್ಥಾನದ ಪರಿಸರದಲ್ಲಿ ಅತಿಕ್ರಮಣ ಮಾಡುವ ಪ್ರಯತ್ನಿಸುತ್ತಿದ್ದಾರೆಂಬ ಭೀತಿಯು ಹಿಂದೂಗಳಲ್ಲಿ ಮೂಡಿದೆ.