ಕಾರ್ಯಕ್ರಮವನ್ನು ಜುಲೈ ೨೩ ರಂದು ಪ್ರಸಾರ ಮಾಡಲಾಗುವುದು !

ಚೆನ್ನೈ – ಗುರುಪೂರ್ಣಿಮೆ ನಿಮಿತ್ತ ಚೆನ್ನೈನಲ್ಲಿ ‘ಶ್ರೀ ಟಿ.ವಿ’ಯಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಪೂ. (ಸೌ.) ಉಮಾ ರವಿಚಂದ್ರನ್ ಹಾಗೂ ಸನಾತನ ಸಂಸ್ಥೆಯ ಶ್ರೀ. ಬಾಲಾಜಿಯವರು ಭಾಗವಹಿಸಿದ್ದರು. ‘ಶ್ರೀ ಟಿ.ವಿ. ಯ ಕು. ಸಾಯಿ ನಿಖಿಲಾ ಕೇಳಿದ ಪ್ರಶ್ನೆಗಳಿಗೆ ಪೂ. (ಸೌ.) ಉಮಾ ರವಿಚಂದ್ರನ್ ಉತ್ತರಿಸಿದರು. ಈ ವಿಶೇಷ ಕಾರ್ಯಕ್ರಮದ ಪ್ರಕ್ಷೇಪಣೆಯನ್ನು ಗುರುಪೂರ್ಣಿಮೆಯ ದಿನದಂದು ಅಂದರೆ ಜುಲೈ ೨೩ ರಂದು ಪ್ರಸಾರ ಮಾಡಲಾಗುವುದು.
ಈ ಸಮಯದಲ್ಲಿ ಪೂ. (ಸೌ.) ಉಮಾ ರವಿಚಂದ್ರನ್ ಅವರು ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಜುಲೈ ೨೪ ರಂದು ಆಯೋಜಿಸಲಾಗಿರುವ ಆನ್‍ಲೈನ್ ಗುರುಪೂರ್ಣಿಮಾ ಉತ್ಸವದ ಬಗ್ಗೆ ವಿವರವಾದ ಮಾಹಿತಿಯನ್ನು ಸಹ ನೀಡಿದರು.
ಕ್ಷಣಚಿತ್ರಗಳು
೧. ಈ ವಿಶೇಷ ಪ್ರಶ್ನೋತ್ತರ ಕಾರ್ಯಕ್ರಮದ ನಂತರ ಶ್ರೀ. ಟಿ.ವಿ.’ಯ ಶ್ರೀ. ಬಾಲಗೌತಮರು ಪೂ. (ಸೌ.) ಉಮಾ ರವಿಚಂದ್ರನ್ ಅವರಲ್ಲಿ ಇಂತಹ ಪ್ರಶ್ನೋತ್ತರ ಕಾರ್ಯಕ್ರಮವನ್ನು ನಿಯಮಿತವಾಗಿ ನಡೆಸುವಂತೆ ವಿನಂತಿಸಿದರು.
೨. ಕಾರ್ಯಕ್ರಮ ಮುಕ್ತಾಯದ ನಂತರ, ಕು. ನಿಖಿಲಾ ಇವರು ‘ನನಗೆ ಬಹಳಷ್ಟು ಹೊಸ ವಿಷಯಗಳನ್ನು ಕಲಿಯಲು ಸಿಕ್ಕಿತು’, ಎಂದು ಪ್ರತಿಕ್ರಿಯಿಸಿದ್ದಾರೆ ಮತ್ತು ಸನಾತನದ ಸತ್ಸಂಗಗಳಿಗೆ ಉಪಸ್ಥಿತರಿರಲು ತಮ್ಮ ಸಿದ್ಧತೆಯನ್ನು ಸಹ ತೋರಿಸಿದರು.
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ