ಚೆನ್ನೈನಲ್ಲಿ ಅಕ್ರಮವಾಗಿ ನೆಲೆಸಿದ ಇರಾನಿ ಮುಸಲ್ಮಾನ ಗುಂಪಿನಿಂದ ದರೋಡೆ !

ನಕಲಿ ಆಧಾರ ಕಾರ್ಡ್ ಜಪ್ತಿ

* ಭಾರತದಲ್ಲಿ ಅಕ್ರಮವಾಗಿ ನೆಲೆಸಿ ದರೋಡೆ ಮಾಡುವ ತನಕ ಅವರ ಮಾಹಿತಿಯು ತನಿಖಾ ಸಂಸ್ಥೆಗಳಿಗೆ ಸಿಗುವುದಿಲ್ಲ, ಇದರಿಂದ ಅವರು ನಿದ್ರಿಸುತ್ತಿದ್ದಾರೆಂದು ತಿಳಿದುಕೊಳ್ಳಬೇಕೆ ? ಇಂತಹ ಘಟನೆಗಳು ದೇಶದ ಭದ್ರತೆಗಾಗಿ ಅತ್ಯಂತ ಅಪಾಯಕಾರಿಯಾಗಿದ್ದು ಕೇಂದ್ರ ಸರಕಾರವು ಈ ಬಗ್ಗೆ ಗಮನ ಹರಿಸಬೇಕು !

* ಭಾರತೀಯ ನಾಗರಿಕರಿಗೆ ಅನೇಕ ಬಾರಿ ಗೋಳಾಟ ಮಾಡಿದ ನಂತರ ಆಧಾರ ಕಾರ್ಡ್, ಚುನಾವಣಾ ಗುರುತುಪತ್ರ ಇತ್ಯಾದಿಗಳು ಸಿಗುತ್ತದೆ; ಆದರೆ ನುಸುಳುಕೋರರಿಗೆ ಅದು ಅತ್ಯಂತ ಸಹಜವಾಗಿ ಹೇಗೆ ಸಿಗುತ್ತದೆ, ಈ ಬಗ್ಗೆ ಏಕೆ ತನಿಖೆ ನಡೆಸಲಾಗುವುದಿಲ್ಲ ?

* ಈಗಾಗಲೇ ಭಾರತದಲ್ಲಿ ಬಾಂಗ್ಲಾದೇಶಿ ಹಾಗೂ ರೊಹಿಂಗ್ಯಾ ನುಸುಳುಕೋರರು ದೊಡ್ಡ ಪ್ರಮಾಣದಲ್ಲಿ ವಾಸಿಸುತ್ತಿರುವಾಗ ಇರಾನಿ ಮುಸಲ್ಮಾನರೂ ನುಸುಳಿ ಅಪರಾಧ ಚಟುವಟಿಕೆಗಳನ್ನು ಮಾಡುತ್ತಾರೆ, ಇದರಿಂದ ಭಾರತವು ಧರ್ಮಶಾಲೆಯಾಗಿದೆ ಎಂದು ಹೆಚ್ಚು ಸ್ಪಷ್ಟವಾಗುತ್ತದೆ !

ಚೆನ್ನೈ (ತಮಿಳನಾಡು) – ಇಲ್ಲಿ ಅಕ್ರಮವಾಗಿ ನೆಲೆಸಿ ದರೋಡೆ ಮಾಡುತ್ತಿದ್ದ ೯ ಇರಾನಿ ಮುಸಲ್ಮಾನರ ನಾಗರಿಕರನ್ನು ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ೩ ಮಹಿಳೆಯರೂ ಸೇರಿದ್ದಾರೆ. ಅವರಿಂದ ನಕಲಿ ಆದಾರ ಕಾರ್ಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರೆಲ್ಲರು ಕೊವಲಮ್‍ನಲ್ಲಿ ಒಂದು ರೆಸಾರ್ಟ್‍ನಲ್ಲಿ(ರಜೆ ಕಳೆಯಲು ಅಥವಾ ಮನೊರಂಜನೆಗಾಗಿ ಜನಪ್ರಿಯವಾದ ಸ್ಥಳ) ಅಕ್ರಮವಾಗಿ ನೆಲೆಸಿದ್ದರು. ದರೋಡೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮಾಲಿಯಾದ ಓರ್ವ ನಾಗರಿಕನನ್ನು ಪೊಲೀಸರು ವಿಚಾರಣೆ ನಡೆಸುತ್ತಿರುವಾಗ ಈ ನಾಗರಿಕರ ಮಾಹಿತಿ ಸಿಕ್ಕಿತು. ಇರಾನಿ ನಾಗರಿಕರು ಈ ಸೋಮಾಲಿಯಾದ ನಾಗರಿಕನಿಗೆ ತಾವು ಕೇಂದ್ರದ ಪೊಲೀಸ್ ಎಂದು ಹೇಳಿಕೊಂಡು ಆತನಿಂದ ೨ ಲಕ್ಷ ೮೪ ಸಾವಿರ ರೂಪಾಯಿ ಲೂಟಿಗೈದಿದ್ದರು. ಈ ಅಪರಾಧಕ್ಕಾಗಿ ಉಪಯೋಗಿಸಲಾಗಿದ್ದ ಚತುಶ್ಚಕ್ರ ವಾಹನವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಇರಾನಿ ನಾಗರಿಕರ ದಂಡು ಈ ಹಿಂದೆ ಅನೇಕ ಜನರಲ್ಲಿ ದರೋಡೆ ಮಾಡಿರಬಹುದು ಎಂದು ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.