ಗುಜರಾತ್‍ನಲ್ಲಿ ‘ಗೋ ಸಂಶೋಧನಾ ಕೇಂದ್ರ’ದ ಸ್ಥಾಪನೆ !

‘ಗುಜರಾತ ಟೆಕ್ನೊಲೊಜಿಕಲ ಯುನಿವರ್ಸಿಟಿ’ (‘ಜಿ.ಟಿ.ಯು.’ವು) `ಗೋ ಸಂಶೋಧನಾ ಕೇಂದ್ರ’ವನ್ನು ಪ್ರಾರಂಭಿಸಿದೆ. ಹಸುವಿನ ಹಾಲು, ಗೋಮೂತ್ರ ಮತ್ತು ಸಗಣಿ ಸಾಂಪ್ರದಾಯಿಕ ಬಳಕೆಯನ್ನು ಉತ್ತೇಜಿಸಲು ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ರಾಷ್ಟ್ರೀಯ ಕಾಮಧೇನು ಆಯೋಗದಡಿಯಲ್ಲಿ ಸ್ಥಾಪಿಸಲಾದ ‘ಕಾಮಧೇನು ಸಂಸ್ಥೆ’ ಈ ಕೇಂದ್ರದ ಮುಂದಾಳತ್ವವನ್ನು ವಹಿಸಿಕೊಂಡಿದೆ.

ಲಸಿಕೀಕರಣಗಾಗಿ ಹಜ್ ಯಾತ್ರಿಕರನ್ನು ತನ್ನ ಆದ್ಯತೆಯ ಪಟ್ಟಿಯಲ್ಲಿ ಸೇರಿಸಿದ ಕೇರಳದ ಸಿಪಿಐ (ಎಂ) ನೇತೃತ್ವದ ಸರಕಾರ !

ಕೇರಳ ರಾಜ್ಯದ ಸಿಪಿಐ (ಎಂ) ಸರಕಾರವು ಕೊರೊನಾ ಲಸಿಕೆ ನೀಡಲು ೧೮ ರಿಂದ ೪೪ ವರ್ಷದೊಳಗಿನ ನಾಗರಿಕರಿಗೆ ಆದ್ಯತೆ ನೀಡಿದೆ. ಈ ಪೈಕಿ ೪೩ ಗುಂಪುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದರಲ್ಲಿ ಹಜ್ ಯಾತ್ರಾರ್ಥಿಗಳನ್ನು ಸಹ ಸೇರಿಸಲಾಗಿದೆ.

ಜೂನ್ ೨೧ ರಿಂದ ಕೇಂದ್ರ ಸರಕಾರವು ದೇಶದಲ್ಲಿ ೧೮ ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ವ್ಯಕ್ತಿಗಳಿಗೆ ಉಚಿತ ಲಸಿಕೀಕರಣ ನೀಡಲಿದೆ ! – ಪ್ರಧಾನಿ ನರೇಂದ್ರ ಮೋದಿಯಿಂದ ಘೋಷಣೆ

ಜೂನ್ ೨೧ ರಿಂದ ೧೮ ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಕೊರೊನಾ ವಿರುದ್ಧ ಉಚಿತವಾಗಿ ಲಸಿಕೆ ನೀಡಲಾಗುವುದು, ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ ೭ ರಂದು ಸಂಜೆ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಕಟಿಸಿದರು. ಅಲ್ಲದೆ, ರಾಜ್ಯ ಸರಕಾರಗಳಿಗೆ ನೀಡಲಾಗಿರುವ ಚುಚ್ಚುಮದ್ದಿನ ಶೇ. ೨೫ ರಷ್ಟು ಭಾಗವನ್ನು ಕೇಂದ್ರ ಸರಕಾರವು ತನ್ನಲ್ಲಿ ತೆಗೆದುಕೊಳ್ಳಲಿದೆ

ಖಲಿಸ್ತಾನಿ ಭಯೋತ್ಪಾದಕ ಜರ್ನಲ್ ಸಿಂಗ್ ಭಿಂದ್ರನವಾಲೆಯನ್ನು ‘ಹುತಾತ್ಮ’ ಎಂದು ಹೇಳಿದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ರು !

ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಇವರು ತಮ್ಮ ‘ಇನ್‍ಸ್ಟಾಗ್ರಾಮ್’ ಈ ಸಾಮಾಜಿಕ ಮಾಧ್ಯಮದಲ್ಲಿ ಖಲಿಸ್ತಾನಿ ಭಯೋತ್ಪಾದಕ ಜರ್ನಲ್ ಸಿಂಗ್ ಭಿಂದ್ರನವಾಲೆಯ ಮೃತ್ಯುದಿನದ ನಿಮಿತ್ತ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಾ ಆತನನ್ನು ‘ಹುತಾತ್ಮ’ ಎಂದು ಕರೆದಿದ್ದಾರೆ.

ಸಿಕಂದರಾ (ಉತ್ತರ ಪ್ರದೇಶ) ಇಲ್ಲಿಯ ದರ್ಗಾಗೆ ಹೋಗುವ ಜನಸಮೂಹದಿಂದ ಪೊಲೀಸರ ಮೇಲೆ ದಾಳಿ

ಇದರಿಂದ ಮತಾಂಧರ ಬಗ್ಗೆ ಪೊಲೀಸರಿಗೆ ಎಷ್ಟು ಭಯ ಇದೆ ಎಂಬುದು ಗಮನಕ್ಕೆ ಬರುತ್ತದೆ ! ಹಿಂದೂಗಳ ಮುಂದೆ ಪೌರುಷವನ್ನು ತೋರಿಸುವ ಪೊಲೀಸರು ಮತಾಂಧರಿಂದ ಹೊಡೆಸಿಕೊಳ್ಳುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ತಮ್ಮ ಧರ್ಮದ ಪ್ರಚಾರ ಮಾಡುವಾಗ ಇತರ ಧರ್ಮಗಳನ್ನು ಅವಮಾನಿಸುವ ಅಧಿಕಾರ ಯಾವುದೇ ಧರ್ಮಕ್ಕೆ ಇಲ್ಲ ! – ಕರ್ನಾಟಕ ಉಚ್ಚನ್ಯಾಯಾಲಯ

ತಮ್ಮ ಧರ್ಮದ ಪ್ರಚಾರ ಮಾಡುವಾಗ ಇತರೆ ಧರ್ಮಗಳನ್ನು ಅವಮಾನಿಸುವ ಮೂಲಭೂತ ಅಧಿಕಾರವನ್ನು ಯಾವುದೇ ಧರ್ಮಕ್ಕೆ ನೀಡಲಾಗುವುದಿಲ್ಲ. ಯಾವುದೇ ಧರ್ಮಗುರುಗಳು ಅಥವಾ ಯಾವುದೇ ವ್ಯಕ್ತಿಯು ಸ್ವಂತ ಧರ್ಮದ ಪ್ರಚಾರ ಮಾಡುವಾಗ ಇತರ ಧರ್ಮದ ಅವಮಾನ ಆಗದಂತೆ ಎಚ್ಚರ ವಹಿಸಬೇಕು ಎಂದು ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಎಚ್.ಪಿ. ಸಂದೇಶ ಇವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಲ್ಲಿಯವರೆಗೆ ಜನರನ್ನು ಪ್ರಚೋದಿಸಿ ಹಿಂಸಾಚಾರ ಮಾಡುವುದಿಲ್ಲವೋ ಅಲ್ಲಿಯವರೆಗೆ ಪ್ರತಿಯೊಬ್ಬ ನಾಗರಿಕನಿಗೂ ಸರಕಾರವನ್ನು ಟೀಕಿಸುವ ಹಕ್ಕಿದೆ ! – ಸರ್ವೋಚ್ಚ ನ್ಯಾಯಾಲಯ

ಸರಕಾರ ಮತ್ತು ಅದರ ಅಧಿಕಾರಿಗಳು ತೆಗೆದುಕೊಳ್ಳುವ ನಿರ್ಧಾರಗಳನ್ನು ಟೀಕಿಸುವ ಹಕ್ಕು ಪ್ರತಿಯೊಬ್ಬ ನಾಗರಿಕರಿಗೆ ಇದೆ. ಟೀಕೆಯಿಂದ ಸರಕಾರದ ವಿರುದ್ಧ ಹಿಂಸಾಚಾರ ಮಾಡಿ ಅಶಾಂತಿಯು ಉಂಟಾಗದಿರುವ ತನಕ ಈ ಹಕ್ಕು ಸೀಮಿತವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಪತ್ರಕರ್ತ ವಿನೋದ ದುವಾ ವಿರುದ್ಧ ದೇಶದ್ರೋಹದ ಆರೋಪವನ್ನು ವಜಾಗೊಳಿಸಿ ನ್ಯಾಯಾಲಯವು ಈ ಆದೇಶವನ್ನು ಜಾರಿಗೊಳಿಸಿದೆ.

‘ವಾರ್ನರ್ ಬ್ರದರ್ಸ್’ ಸಂಸ್ಥೆಯ ವೀಡಿಯೊದಲ್ಲಿ ಜಮ್ಮು – ಕಾಶ್ಮೀರ ಮತ್ತು ಲಡಾಖ್ ಅನ್ನು ಭಾರತದ ನಕ್ಷೆಯಿಂದ ಹೊರಗಿಡಲಾಗಿದೆ !

ಅಮೆರಿಕದ ಚಲನಚಿತ್ರ ನಿರ್ಮಾಣ ಕಂಪನಿಯಾದ ‘ವಾರ್ನರ್ ಬ್ರದರ್ಸ್’ ಸಂಸ್ಥೆಯಿಂದ ಮಕ್ಕಳ ಶಿಕ್ಷಣದ ಬಗ್ಗೆ ವೀಡಿಯೊಗಳನ್ನು ಸಹ ತಯಾರಿಸಲಾಗುತ್ತದೆ. ಇಂತಹ ಒಂದು ವಿಡಿಯೋದಲ್ಲಿ ಭಾರತದ ನಕಾಶೆಯನ್ನು ಅವಮಾನಿಸಲಾಗಿದೆ. ಯು-ಟ್ಯೂಬ್ ಚಾನೆಲ್‌ನಲ್ಲಿರುವ ಈ ಸಂಸ್ಥೆಯ ಅಧಿಕೃತ ವಿಡಿಯೋದಲ್ಲಿ ತೋರಿಸಲಾದ ನಕಾಶೆಯಲ್ಲಿ ಭಾರತದ ಜಮ್ಮು – ಕಾಶ್ಮೀರ ಮತ್ತು ಲಡಾಖ್ ಅನ್ನು ಹೊರಗಿಡಲಾಗಿದೆ.

ಕೋಲಕಾತಾದ ಬಿಜೆಪಿ ಕಚೇರಿ ಬಳಿ ೫೧ ನಾಡಬಾಂಬ್‌ಗಳು ಪತ್ತೆ !

ಇಲ್ಲಿನ ಬಿಜೆಪಿ ಕಚೇರಿಯ ಬಳಿ ೫೧ ನಾಡಬಾಂಬ್‌ಗಳು ಪತ್ತೆಯಾಗಿವೆ. ಒಂದು ಚೀಲದಲ್ಲಿ ಈ ಬಾಂಬ್‌ಗಳನ್ನು ಇಡಲಾಗಿತ್ತು. ಈ ಮಾಹಿತಿ ಪಡೆದ ನಂತರ, ಬಾಂಬ್ ನಿಷ್ಕ್ರೀಯ ದಳವು ಸ್ಥಳಕ್ಕೆ ತಲುಪಿತು. ಈ ಎಲ್ಲಾ ಬಾಂಬ್‌ಗಳು ಕಡಿಮೆ ತೀವ್ರತೆಯ ಹೊಂದಿವೆ ಎಂದು ಹೇಳಲಾಗುತ್ತದೆ.

ಪೊಲೀಸರ ಮೇಲೆ ಹಲ್ಲೆ ನಡೆಸಿದ ಗೂಂಡಾನಿಗೆ ಪರಾರಿಯಾಗಲು ಅವಕಾಶ ನೀಡಿದ ಮಾಜಿ ಬಿಜೆಪಿ ಪದಾಧಿಕಾರಿಯ ಬಂಧನ

ಪೊಲೀಸರ ಮೇಲೆ ಹಲ್ಲೆ ನಡೆಸಿದ ಗೂಂಡಾನಿಗೆ ಪರಾರಿಯಾಗಲು ಅವಕಾಶ ನೀಡಿದ ಮಾಜಿ ಬಿಜೆಪಿ ಪದಾಧಿಕಾರಿ ನಾರಾಯಣ ಸಿಂಗ್ ಭದೌರಿಯಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ನಂತರ ಬಿಜೆಪಿ ಅವರನ್ನು ದಕ್ಷಿಣ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದೆ.