ನವ ದೆಹಲಿ – ಜೂನ್ ೨೧ ರಿಂದ ೧೮ ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಕೊರೊನಾ ವಿರುದ್ಧ ಉಚಿತವಾಗಿ ಲಸಿಕೆ ನೀಡಲಾಗುವುದು, ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ ೭ ರಂದು ಸಂಜೆ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಕಟಿಸಿದರು. ಅಲ್ಲದೆ, ರಾಜ್ಯ ಸರಕಾರಗಳಿಗೆ ನೀಡಲಾಗಿರುವ ಚುಚ್ಚುಮದ್ದಿನ ಶೇ. ೨೫ ರಷ್ಟು ಭಾಗವನ್ನು ಕೇಂದ್ರ ಸರಕಾರವು ತನ್ನಲ್ಲಿ ತೆಗೆದುಕೊಳ್ಳಲಿದೆ. ಈ ನಿಟ್ಟಿನಲ್ಲಿ ಮುಂದಿನ ಎರಡು ವಾರಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿಯಮಗಳನ್ನು ಪ್ರಕಟಿಸಲಿವೆ. ಲಸಿಕೆ ಖಾಸಗಿ ಆಸ್ಪತ್ರೆಗಳಲ್ಲಿಯೂ ಲಭ್ಯವಿರುತ್ತದೆ. ಕೇವಲ ಲಸಿಕೆಯ ಬೆಲೆಗಿಂತ ಕೇವಲ ೧೫೦ ರೂಪಾಯಿ ಹೆಚ್ಚು ತೆಗೆದುಕೊಂಡು ಇದು ಲಭ್ಯವಾಗಲಿದೆ ಎಂದು ಮೋದಿ ಘೋಷಿಸಿದರು. ಅದೇರೀತಿ ಬಡವರಿಗೆ ಉಚಿತ ಪಡಿತರವನ್ನು ನೀಡುವ ಗಡುವನ್ನು ದೀಪಾವಳಿಯ ತನಕ ವಿಸ್ತರಿಸಲಾಗಿದೆ, ಅಂದರೆ ನವೆಂಬರ್ ೨೦೨೧ ರ ವರೆಗೆ ವಿಸ್ತರಿಸಲಾಗಿದೆ ಎಂದು ಮೋದಿಯವರು ಹೇಳಿದರು. ದೇಶದಲ್ಲಿ ಲಸಿಕೀಕರಣ ಕಾರ್ಯಕ್ರಮವನ್ನು ಆರಂಭಿಸಿದ ನಂತರ ಕೇಂದ್ರ ಸರಕಾರವು ಕೋವಿಡ್ ಯೋಧರು ಮತ್ತು ೪೫ ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಮಾತ್ರ ಉಚಿತ ಲಸಿಕೀಕರಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರೆ, ೧೮ ರಿಂದ ೪೪ ವರ್ಷದೊಳಗಿನ ಜನರಿಗೆ ಲಸಿಕೆ ನೀಡುವ ಜವಾಬ್ದಾರಿಯನ್ನು ರಾಜ್ಯಗಳು ವಹಿಸಿಕೊಂಡಿದ್ದವು. ಈಗ, ಕೇಂದ್ರ ಸರಕಾರವು ೧೮ ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡಲಿದೆ.
PM Modi announces free Covid vaccine for all adults; watch for more details | https://t.co/WrOcJAr5kR pic.twitter.com/lNn3NAIDda
— Economic Times (@EconomicTimes) June 7, 2021
ಕೆಲವೇ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಲಸಿಕೆ ಪೂರೈಕೆ ಆಗಲಿದೆ !
ಪ್ರಧಾನಿ ಮೋದಿಯವರು ತಮ್ಮ ಮಾತನ್ನು ಮುಂದುವರೆಸುತ್ತಾ, ಹಿಂದಿನ ಇತಿಹಾಸವನ್ನು ಗಮನಿಸಿದರೆ ಭಾರತದಲ್ಲಿ ಲಸಿಕೀಕರಣ ಮಾಡಲು ದಶಕಗಳು ತಗಲುತ್ತಿದ್ದವು. ೨೦೧೪ ರಲ್ಲಿ, ಭಾರತದಲ್ಲಿ ಲಸಿಕೀಕರಣದ ವೇಗವು ಶೇ. ೬೦ ರಷ್ಟು ಮಾತ್ರ ಇತ್ತು. ಉತ್ಪಾದನಾ ಪ್ರಮಾಣವು ತುಂಬಾ ಕಡಿಮೆಯಿತ್ತು. ಲಸಿಕೆಕರಣವನ್ನು ಅದೇ ವೇಗದಲ್ಲಿ ನಡೆಸಿದ್ದರೆ, ದೇಶಕ್ಕೆ ಇನ್ನೂ೪೦ ವರ್ಷಗಳು ತಗಲುತ್ತ್ತಿದ್ದವು; ಆದರೆ `ಮಿಷನ್ ಇಂದ್ರಧನುಷ್ಯ’ ಪ್ರಾರಂಭಿಸಿದಾಗಿನಿಮದ, ಕಳೆದ ಆರು ವರ್ಷಗಳಲ್ಲಿ ಲಸಿಕೀಕರಣ ಪ್ರಮಾಣವು ಶೇ. ೬೦ ರಿಂದ ಶೇ. ೯೦ ಕ್ಕೆ ಏರಿದೆ. ಕೊರೋನಾ ಬಿಕ್ಕಟ್ಟಿನಲ್ಲಿಯೂ ಸಹ, ಭಾರತವು ಒಂದು ವರ್ಷದಲ್ಲಿ ಎರಡು ಸ್ವದೇಶಿ ಲಸಿಕೆಗಳನ್ನು ತಯಾರಿಸಿತು. ಲಸಿಕೀಕರಣದಲ್ಲಿ ಭಾರತವು ಹಿಂದುಳಿದಿಲ್ಲ. ದೇಶದಲ್ಲಿ ಪ್ರಸ್ತುತ ೭ ಸಂಸ್ಥೆಗಳು ಕೊರೋನಾ ತಡೆಗಟ್ಟುವ ಲಸಿಕೆಗಳನ್ನು ಉತ್ಪಾದಿಸುತ್ತಿವೆ. ೩ ಲಸಿಕೆಗಳ ಪ್ರಯೋಗಗಳು ನಡೆಯುತ್ತಿವೆ. ಲಸಿಕೆಗಳ ಪೂರೈಕೆ ಬಗ್ಗೆ ಇತರ ದೇಶಗಳೊಂದಿಗೆ ಚರ್ಚೆ ನಡೆಯುತ್ತಿದೆ. ಈ ಕಾರಣದಿಂದಾಗಿ ಮುಂದಿನ ಕೆಲವು ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಲಸಿಕೆಗಳ ಪೂರೈಕೆಯಾಗಲಿದೆ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ.