ಕೇಂದ್ರದಿಂದ ವಿಕಿಪೀಡಿಯಾಗೆ ನೋಟೀಸ್

ವಿಕಿಪೀಡಿಯಾ ಮೇಲೆ ತಪ್ಪು ಮಾಹಿತಿ ಪ್ರಸಾರ ಮಾಡಿದ ಆರೊಪ

ನವ ದೆಹಲಿ – ಭಾರತ ಸರಕಾರವು ‘ವಿಕಿಪೀಡಿಯಾ’ ಜಾಲತಾಣಕ್ಕೆ ನೊಟೀಸ ಕಳುಹಿಸಿದೆ. ಈ ನೋಟೀಸಿನಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಅವರ ವಿರುದ್ಧ ಮಾಡಿರುವ ದೂರುಗಳು ಮತ್ತು ತಾರತಮ್ಯಗಳನ್ನು ಉಲ್ಲೇಖಿಸಲಾಗಿದೆ.

ದೆಹಲಿ ಉಚ್ಚನ್ಯಾಯಾಲಯದಿಂದ ವಿಕಿಪೀಡಿಯಾಕ್ಕೆ ಛೀಮಾರಿ!

ವಿಕಿಪೀಡಿಯಾದಲ್ಲಿ ‘ಏಶಿಯನ್ ನ್ಯೂಸ್ ಇಂಟರ್ ‍ನ್ಯಾಶನಲ್’ನ (ಎ.ಎನ್.ಐ) ಜಾಲತಾಣದ ಪುಟವನ್ನು ಯಾರೋ ಸಂಪಾದಿಸಿ, ‘ಇದು ಸರಕಾರದ ಪ್ರಚಾರದ ಸಾಧನವಾಗಿದೆ’ ಎಂದು ಬರೆದಿದ್ದಾರೆ. ಅಲ್ಲದೆ, ವಿಕಿಪೀಡಿಯಾದ ಪುಟದಲ್ಲಿ ಅನೇಕ ವಿಷಯಗಳನ್ನು ತಪ್ಪಾದ ಪದ್ಧತಿಯಲ್ಲಿ ಸಂಪಾದಿಸಲಾಗಿತ್ತು. ಈ ಕುರಿತು ದೆಹಲಿ ಉಚ್ಚನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಇದರ ವಿಚಾರಣೆಯ ಸಮಯದಲ್ಲಿ ದೆಹಲಿ ಉಚ್ಚನ್ಯಾಯಾಲಯವು ವಿಕಿಪೀಡಿಯಾಕ್ಕೆ ಛೀಮಾರಿ ಹಾಕಿತ್ತು.

ಉಚ್ಚನ್ಯಾಯಾಲಯವು, ಒಂದು ವೇಳೆ ವಿಕಿಪೀಡಿಯಾ ಯಾವುದಾದರೊಂದು ಪುಟ ತಪ್ಪು ಪದ್ಧತಿಯಲ್ಲಿ ಸಂಪಾದಿಸಿದ್ದರೆ ಮತ್ತು ವಿಕಿಪೀಡಿಯಾ ಸಂಸ್ಥೆ ಅದನ್ನು ಬೆಂಬಲಿಸುತ್ತಿದ್ದರೆ, ಅದು ಸಂಪೂರ್ಣವಾಗಿ ತಪ್ಪಾಗಿದೆ. ಒಂದು ವೇಳೆ ಅದು ತನ್ನನ್ನು ಮಧ್ಯವರ್ತಿಯೆಂದು ಹೇಳಿಕೊಳ್ಳುತ್ತಿದ್ದರೆ, ನಿಮಗೆ ಇದರಲ್ಲಿ ಏನು ಸಮಸ್ಯೆಯಾಗುತ್ತಿದೆ ? ಒಂದು ವೇಳೆ ಏನಾದರೂ ತಪ್ಪು ಸಂಪಾದಿತವಾಗಿದ್ದರೆ, ವಿಕಿಪೀಡಿಯಾ ಖಂಡಿತವಾಗಿಯೂ ಅವರನ್ನು ಬೆಂಬಲಿಸಬಾರದು. ಯಾರು ಎ.ಎನ್.ಐ.ನ ವಿಕಿಪೀಡಿಯಾ ಪುಟವನ್ನು ತಪ್ಪು ಪದ್ಧತಿಯಲ್ಲಿ ಸಂಪಾದಿಸಿದ್ದಾರೆಯೋ, ಅವರ ಹೆಸರನ್ನು ಬಹಿರಂಗ ಪಡಿಸಬೇಕು.’ ಎಂದು ಹೇಳಿತ್ತು. ಇದಕ್ಕೆ ವಿಕಿಪೀಡಿಯಾ ಹಾಗೆ ಮಾಡಲು ನಿರಾಕರಿಸಿತ್ತು. ಸರಕಾರವು ಈಗ ವಿಕಿಪೀಡಿಯಾಗೆ ನೋಟೀಸ್ ಕಳುಹಿಸಿದ ಬಳಿಕ, ಅದರಲ್ಲಿ `ವಿಕಿಪೀಡಿಯಾ’ವನ್ನು ಮಧ್ಯಸ್ಥಗಾರನೆಂದು ಪರಿಗಣಿಸದೇ ಪ್ರಕಾಶಕನೆಂದು ಏಕೆ ಪರಿಗಣಿಸಬಾರದು ?’ ಎಂದು ಪ್ರಶ್ನಿಸಿದೆ.

ಕಮ್ಯುನಿಸ್ಟ್ ಸಿದ್ಧಾಂತ ಹೊಂದಿರುವವರು ವಿಕಿಪೀಡಿಯಾದ ಮೇಲೆ ನಿಯಂತ್ರಣ ಹೊಂದಿದ್ದಾರೆ !

ವಿಕಿಪೀಡಿಯಾವನ್ನು 2001 ರಲ್ಲಿ ಪ್ರಾರಂಭಿಸಲಾಯಿತು. ಜಿಮ್ಮಿ ವೇಲ್ಸ್ ಮತ್ತು ಲ್ಯಾರಿ ಸೆಂಗರ್ ಇದನ್ನು ಪ್ರಾರಂಭಿಸಿದರು. 2003 ರಲ್ಲಿ ಹಿಂದಿಯಲ್ಲಿಯೂ ಜಾಲತಾಣ ಪ್ರಾರಂಭವಾಯಿತು. ಪ್ರತಿ ತಿಂಗಳು 170 ಕೋಟಿ ಜನರು ಈ ಜಾಲತಾಣದ ಮೇಲಿನ ಮಾಹಿತಿಯನ್ನು ಉಪಯೋಗಿಸುತ್ತಾರೆ. ಈ ಬಳಕೆದಾರರಿಗೆ ವಿಷಯವನ್ನು ಸಂಪಾದಿಸುವ ಸೌಲಭ್ಯವನ್ನು ಸಹ ಸಿಗುತ್ತದೆ. ಇದರಿಂದಾಗಿ ಹಲವು ಬಾರಿ ಜನರು ಇಲ್ಲಿರುವ ತಪ್ಪು ವಿಷಯಗಳನ್ನು ಸಂಪಾದಿಸುತ್ತಾರೆ. ಈ ಜಾಲತಾಣದ ನಿಯಂತ್ರಣವನ್ನು ಸಾಮ್ಯವಾದಿ ವಿಚಾರಸರಣಿಯ ಜನರ ಕೈಯಲ್ಲಿದೆ. ಇದರಿಂದಲೇ ಈ ಜಾಲತಾಣದಲ್ಲಿ ಅನೇಕ ಬಾರಿ ಭಾರತ ಮತ್ತು ಹಿಂದೂ ವಿರೋಧಿ ವಿಷಯಗಳು ಕಂಡುಬರುತ್ತವೆ.

ಸಂಪಾದಕೀಯ ನಿಲುವು

ವಿಕಿಪೀಡಿಯಾ ಹಿಂದೂ ಮತ್ತು ಭಾರತ ದ್ವೇಷಿ ವೆಬ್ಸೈಟ್ ಆಗಿದೆ. ಇಲ್ಲಿ ಹಿಂದೂಗಳ ಬಗ್ಗೆ ತಪ್ಪು ಮಾಹಿತಿಯನ್ನು ಪ್ರಸಾರ ಮಾಡಲಾಗುತ್ತದೆ ಹಾಗೂ ಒಳ್ಳೆಯ ಮಾಹಿತಿಯನ್ನು ತೆಗೆದುಹಾಕುತ್ತದೆ. ಆದುದರಿಂದ ಇಂತಹ ವೆಬ್‌ಸೈಟ್‌ಗಳ ಮೇಲೆ ಭಾರತದಲ್ಲಿ ನಿರ್ಬಂಧ ಹೇರುವುದು ಸೂಕ್ತವಾಗಿದೆ !