ಸಿಕಂದರಾ (ಉತ್ತರ ಪ್ರದೇಶ) ಇಲ್ಲಿಯ ದರ್ಗಾಗೆ ಹೋಗುವ ಜನಸಮೂಹದಿಂದ ಪೊಲೀಸರ ಮೇಲೆ ದಾಳಿ

೩ ಪೊಲೀಸರಿಗೆ ಗಾಯ

* ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದ ಪೊಲೀಸರು ಸಮಾಜವನ್ನು ಹೇಗೆ ರಕ್ಷಿಸುವರು ? ಜನಸಮೂಹಕ್ಕೆ ಪ್ರತ್ಯುತ್ತರ ನೀಡಲು ಪೊಲೀಸರಿಂದ ಸಾಧ್ಯವಿಲ್ಲವೇ ? ಅವರಿಗೆ ತರಬೇತಿಯಲ್ಲಿ ಇದನ್ನು ಕಲಿಸುವುದಿಲ್ಲವೇ ?

* ಇದರಿಂದ ಮತಾಂಧರ ಬಗ್ಗೆ ಪೊಲೀಸರಿಗೆ ಎಷ್ಟು ಭಯ ಇದೆ ಎಂಬುದು ಗಮನಕ್ಕೆ ಬರುತ್ತದೆ ! ಹಿಂದೂಗಳ ಮುಂದೆ ಪೌರುಷವನ್ನು ತೋರಿಸುವ ಪೊಲೀಸರು ಮತಾಂಧರಿಂದ ಹೊಡೆಸಿಕೊಳ್ಳುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ದಾಳಿಯಲ್ಲಿ ಗಾಯಗೊಂಡ ಪೊಲೀಸ್

ಸಿಕಂದರಾ (ಉತ್ತರ ಪ್ರದೇಶ) – ಇಲ್ಲಿಯ ಒಂದು ದರ್ಗಾವೊಂದಕ್ಕೆ ಚಾದರ ಹೊದಿಸಲು ಹೋಗುತ್ತಿದ್ದ ಸಮೂಹವನ್ನು ತಡೆಯಲು ಯತ್ನಿಸುತ್ತಿದ್ದ ಪೊಲೀಸರ ಮೇಲೆ ಸಮೂಹದಿಂದ ಕಲ್ಲು, ಇಟ್ಟಿಗೆ ಮತ್ತು ಕೋಲುಗಳಿಂದ ಹಲ್ಲೆ ನಡೆಸಿತು. ಈ ದಾಳಿಯಲ್ಲಿ ಸಿಕಂದರಾ ಪೊಲೀಸ್ ಠಾಣೆ ಮುಖ್ಯಸ್ಥ ಸೇರಿದಂತೆ ಒಟ್ಟು ಐದು ಜನರು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಿದ್ದಾರೆ.

ಸುರಾಯಮಮರೆಜ ಪ್ರದೇಶದಲ್ಲಿ ಜೂನ್ ೬ ರಂದು ಕೆಲವರು ಚಾದರ ಹೊದಿಸಲು ಗಾಜಿ ಮಿಯಾನ್ ದರ್ಗಾಕ್ಕೆ ಹೋಗಿದ್ದರು. ದರ್ಗಾದಲ್ಲಿ ಬೀಡುಬಿಟ್ಟಿದ್ದ ಪೊಲೀಸರಿಗೆ ಮಾಹಿತಿ ದೊರೆತ ಕೂಡಲೇ ಅವರು ಸಂಚಾರ ನಿಷೇಧ ಇರುವ ಬಗ್ಗೆ ಹೇಳಿ ಗುಂಪನ್ನು ತಡೆಯಲು ಪ್ರಯತ್ನಿಸಿದರು. ಇದರಿಂದ ಜನಸಮೂಹ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು ಮತ್ತು ನಂತರ ಗಲಾಟೆಯಾಗಿ ಮಾರ್ಪಟ್ಟಿತು. ಜನಸಮೂಹವು ನೇರವಾಗಿ ಪೊಲೀಸರಿಗೆ ಹೊಡೆಯಲು ಪ್ರಾರಂಭಿಸಿತು. ಹೆಚ್ಚುವರಿ ಪೊಲೀಸರ ಸಹಾಯದಿಂದ ಅವರು ಗುಂಪನ್ನು ಚದುರಿಸಲಾಯಿತು.