ಉತ್ತರಪ್ರದೇಶ ಮದರಸ ಶಿಕ್ಷಣ ಮಂಡಳಿ ಕಾನೂನು’ ರದ್ದುಪಡಿಸುವ ನಿರ್ಣಯ ಸರ್ವೋಚ್ಚ ನ್ಯಾಯಾಲಯವು ತಳ್ಳಿ ಹಾಕಿದೆ

ಅಲಹಾಬಾದ್ ಉಚ್ಚ ನ್ಯಾಯಾಲಯದಿಂದ ಕಾನೂನು ರದ್ದತಿಗೆ ಸಮ್ಮತಿಸಿತ್ತು !

ನವ ದೆಹಲಿ – ಸರ್ವೋಚ್ಚ ನ್ಯಾಯಾಲಯವು ‘ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾನೂನು, ೨೦೦೪’ ರದ್ದುಪಡಿಸಲು ನಿರಾಕರಿಸಿದೆ. ‘ಈ ಕಾನೂನಿನಿಂದ ಜಾತ್ಯತೀತತೆ ತತ್ವಕ್ಕೆ ಬಿರುಕು ಮೂಡಬಹುದು’, ಎಂದು ಹೇಳುತ್ತಾ ಈ ಕಾನೂನುನು ರದ್ದು ಪಡಿಸುವಂತೆ ಅಲಹಾಬಾದ್ ಉಚ್ಚ ನ್ಯಾಯಾಲಯವು ಮಾರ್ಚ್ ತಿಂಗಳಲ್ಲಿ ತೀರ್ಪು ನೀಡಿತ್ತು. ಇದರ ನಂತರ ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಪ್ರಕರಣ ಹೋದಾಗ ಎಪ್ರಿಲ್ ತಿಂಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ಉಚ್ಚ ನ್ಯಾಯಾಲಯದ ತೀರ್ಪಿಗೆ ಮಧ್ಯಂತರ ತಡೆ ಆಜ್ಞೆ ನೀಡಿತ್ತು. ಈಗ ನ್ಯಾಯಾಲಯವು ಅಂತಿಮ ತೀರ್ಪು ನೀಡುವಾಗ ಈ ಕಾನೂನು ಕಾಯಂಗೊಳಿಸುವ ಆದೇಶ ನೀಡಿದೆ.

೧. ಮಾರ್ಚ್ ತಿಂಗಳಲ್ಲಿ ಉಚ್ಚ ನ್ಯಾಯಾಲಯವು ಪ್ರಸ್ತುತ ಕಾನೂನಿಗೆ ತಡೆ ಆಜ್ಞೆ ನೀಡಿ ಮದರಸಾಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಇತರ ಶಾಲೆಯಲ್ಲಿ ಸೇರಲು ಆದೇಶ ನೀಡಿತ್ತು. ಅದರ ನಂತರ ಈ ನಿರ್ಣಯಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು.

೨. ಸರ್ವೋಚ್ಚ ನ್ಯಾಯಾಲಯದಲ್ಲಿ ಪರ ಮಂಡಿಸುವಾಗ ಉತ್ತರ ಪ್ರದೇಶ ಸರಕಾರವು, ‘ಈ ಕಾನೂನು ಸಂವಿಧಾನಾತ್ಮಕ ಆಧಾರ ಇದೆ’ ಎಂದು ಹೇಳಿತು. ಇದರ ಕುರಿತು ನ್ಯಾಯಾಧೀಶರು ಅವರ ಅಧ್ಯಕ್ಷತೆಯಲ್ಲಿ ೩ ನ್ಯಾಯಮೂರ್ತಿಗಳ ಖಂಡಪೀಠವು, ಮದರಸಾಗಳಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬುವ ಅಪೇಕ್ಷೆ ಇರುತ್ತಿದ್ದರೆ ಮದರಸಾದ ಕಾನೂನು ರದ್ದ ಪಡಿಸುವುದು, ಇದು ಅದಕ್ಕೆ ಉಪಾಯ ಎನಿಸುವುದಿಲ್ಲ, ಬದಲಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದಿಂದ ವಂಚಿಸಲಾಗದು, ಅದರ ಕಾಳಜಿ ತೆಗೆದುಕೊಳ್ಳಲು ಯೋಗ್ಯವಾದ ಆದೇಶ ನೀಡುವುದು ಒಳ್ಳೆಯ ಉಪಾಯವಾಗುವುದು ಎಂದು ಹೇಳಿದೆ.

ಪದವಿ ನೀಡುವ ಅಧಿಕಾರ ತಳ್ಳಿ ಹಾಕಲಾಯಿತು !

ಸರ್ವೋಚ್ಚ ನ್ಯಾಯಾಲಯವು ಸಂವಿಧಾನಾತ್ಮಕ ಕಾನೂನು ಇದೆ ಎಂದು ಅಭಿಪ್ರಾಯ ನೀಡಿದ್ದರು, ಅಲ್ಲಿ ‘ಫಾಜಿಲ್’, ‘ಕಾಮಿಲ್’ (ಮದರಸಾಗಳಲ್ಲಿ ಶಿಕ್ಷಣ ಪಡೆದವರಿಗೆ ನೀಡಲಾಗುವ ಪದವಿಗಳು) ಇಂತಹ ಪದವಿಗಳು ನೀಡುವ ಅಧಿಕಾರ ಈ ವಿದ್ಯಾಪೀಠ ಅನುದಾನ ಕಾನೂನಿನ ವಿರುದ್ಧವಾಗಿದೆ. ಪದವಿ ಪ್ರಧಾನ ಮಾಡುವ ಅಧಿಕಾರ ಕಾನೂನಿನ ರೀತಿಯಲ್ಲಿ ಇಲ್ಲ, ಬಾಕಿ ಕಾನೂನು ಸಂವಿಧಾನಾತ್ಮಕವಾಗಿವೆ, ಎಂದು ಹೇಳಿತು.