ಅಮರಾವತಿ (ಆಂಧ್ರಪ್ರದೇಶ) – ‘ಕೆನಡಾದಲ್ಲಿ ಹಿಂದೂ ದೇವಸ್ಥಾನಗಳು ಮತ್ತು ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿಯಿಂದ ನನಗೆ ತುಂಬಾ ದುಃಖವಾಗಿದೆ. ಕೆನಡಾದಲ್ಲಿ ನಡೆದ ಘಟನೆ ನೋವು ಮತ್ತು ಕಳವಳವನ್ನು ನಿರ್ಮಾಣ ಮಾಡಿದೆ. ಅಲ್ಲಿನ ಕೆನಡಾ ಸರಕಾರ ಅಲ್ಲಿರುವ ಹಿಂದೂ ಸಮುದಾಯದವರಿಗೆ ಸುರಕ್ಷಿತ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಕ್ರಮಗಳನ್ನು ತಕ್ಷಣ ಕೈಗೊಳ್ಳುತ್ತದೆ’ ಎಂದು ನಾನು ಭಾವಿಸುತ್ತೇನೆ ಎಂದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿದ್ದಾರೆ. ‘ವಿವಿಧ ದೇಶಗಳಲ್ಲಿ ಹಿಂದೂಗಳ ವಿರುದ್ಧ ಹಿಂಸಾಚಾರ ಮತ್ತು ದ್ವೇಷದ ಘಟನೆಗಳು ನಡೆಯುತ್ತಿವೆ, ಆದರೂ ವಿಶ್ವ ನಾಯಕರು, ಅಂತರರಾಷ್ಟ್ರೀಯ ಸಂಸ್ಥೆಗಳು ಮೌನವಾಗಿ ಬೆಂಬಲ ನೀಡುತ್ತಿದೆ. ಇಂದು ನಿಮಗೆ ಅಸಮಾಧಾನದ ಧ್ವನಿಗಳನ್ನು ಕೇಳುತ್ತದೆಯೇ ? ಹಿಂದೂ ಏಕತೆ ಎಲ್ಲಿದೆ ? ಈ ಅನ್ಯಾಯವನ್ನು ಎದುರಿಸಲು ನಾವೇಕೆ ಒಂಟಿಯಾಗಿದ್ದೇವೆ ಎಂಬ ಪ್ರಶ್ನೆಗಳನ್ನು ಎತ್ತಿದರು.
Pawan Kalyan condemns #CanadaTempleAttack!
“Let’s stand united against persecution!”
– @PawanKalyan‘Hindus facing global persecution deserve attention & solidarity. Urging Canadian government to ensure safety & security.’#Brampton #GlobalMinority #AriseAwakeAlertHindus… https://t.co/vUnIiOS3yW pic.twitter.com/hXpBRksWh9
— Sanatan Prabhat (@SanatanPrabhat) November 5, 2024
ಸಂಪಾದಕೀಯ ನಿಲುವುಕೆನಡಾದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಯಿಂದ ದುಃಖವಾಯಿತು ! – ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ ಕಲ್ಯಾಣ್ |