ಕೆನಡಾದಲ್ಲಿನ ದೇವಸ್ಥಾನಗಳ ಮೇಲೆ ನಡೆದಿರುವ ದಾಳಿಯ ನಂತರ ಅಸಮಾಧಾನಗೊಂಡಿರುವ ಹಿಂದುಗಳಿಂದ ಹಿಂದೂ ಐಕ್ಯತೆಯ ಪ್ರದರ್ಶನ !

ಬ್ರಮ್ಪ್ಟನ (ಕೆನಡಾ) – ಇಲ್ಲಿಯ ಹಿಂದೂ ಸಭೆ ದೇವಸ್ಥಾನ ಮೇಲೆ ಖಲಿಸ್ತಾನಿಗಳಿಂದ ನಡೆಸಿರುವ ದಾಳಿಯ ನಂತರ ಹಿಂದೂಗಳು ಬೃಹತ್ ಸಂಖ್ಯೆಯಲ್ಲಿ ಒಗ್ಗೂಡಿ ದೇವಸ್ಥಾನದ ಹೊರಗೆ ಶಕ್ತಿ ಪ್ರದರ್ಶನ ಮಾಡಿದರು. ಈ ಸಮಯದಲ್ಲಿ ಸಹಭಾಗಿ ಆಗಿರುವ ಹಿಂದುಗಳ ಕೈಯಲ್ಲಿ ತ್ರಿವರ್ಣ ಧ್ವಜವಿತ್ತು. ‘ವಂದೇ ಮಾತರಂ’ ಮತ್ತು ‘ಜೈ ಶ್ರೀ ರಾಮ’ ಎಂದು ಘೋಷಣೆ ನೀಡುತ್ತಾ ಗುಂಪಿನಿಂದ ಹಿಂದೂ ಐಕ್ಯತೆಯ ದರ್ಶನ ಮಾಡಿಸಿದರು. ಈ ಸಮಯದಲ್ಲಿ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಸರಕಾರದ ವಿರುದ್ಧ ಘೋಷಣೆ ಕೂಗಲಾಯಿತು.

ಈ ಪ್ರತಿಭಟನೆಯಲ್ಲಿ ಸಹಭಾಗಿ ಆಗಿರುವ ವೃಷಭ ಎಂಬ ಯುವಕನು, ಇಲ್ಲಿ ಘಟಿಸಿರುವ ಘಟನೆಗಳಿಂದ ಒಂದು ಹಿಂದೂ ಸಮುದಾಯವೆಂದು ನಾವು ಬಹಳ ದುಃಖಿತರಾಗಿದ್ದೇವೆ. ಹಿಂದೂ ಸಮಾಜವನ್ನು ಬೆಂಬಲಿಸಲು ನಾವು ಇಲ್ಲಿ ಬಂದಿದ್ದೇವೆ. ಹಿಂದೂ ಸಮಾಜವು ಕೆನಡಾಗೆ ಬಹಳಷ್ಟು ಕೊಡುಗೆ ನೀಡಿದೆ. ಮತ್ತು ನಾವು ಪ್ರಗತಿಪರಾಗಿದ್ದೇವೆ. ನಾವು ಬಹಳಷ್ಟು ಆರ್ಥಿಕವಾಗಿ ಕೈ ಜೋಡಿಸುತ್ತೇವೆ, ನಾವು ಎಲ್ಲಿ ಹೋಗುತ್ತೇವೆ ಅಲ್ಲಿಯ ಕಾನೂನು ಮತ್ತು ಸುವ್ಯವಸ್ಥೆಯ ಪಾಲನೆ ಮಾಡುತ್ತೇವೆ. ರಾಜಕಾರಣಿ ಮತ್ತು ಪೊಲೀಸರ ವರ್ತನೆ ನೋಡಿ ನಮಗೆ ಬಹಳ ದುಃಖ ಉಂಟಾಗಿದೆ. ನಾವು ಕೇವಲ ನ್ಯಾಯ ಕೇಳುತ್ತಿದ್ದೇವೆ. ಕಾನೂನನ್ನು ಪಾಲಿಸಲೇಬೇಕು ಮತ್ತು ಅಪರಾಧಿಗಳ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು, ಎಂದು ಹೇಳಿದನು.

ಟ್ರುಡೋ ಇವರನ್ನು ‘ಮೂರ್ಖ’ ಎಂದು ಹೇಳಿದ ಕೆನಡಾದ ಮಾಜಿ ಸಿಖ್ ಸಚಿವ !

ಮಾಜಿ ಪ್ರಧಾನಮಂತ್ರಿ ಪಾಲ್ ಮಾರ್ಟಿನ್ ಇವರ ಸರಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿರುವ ಉಜ್ವಲ್ ದೋಸಾಂಝ ಇವರು ಒಂದು ಲೇಖನದಲ್ಲಿ ದಾವೆ ಮಾಡುತ್ತಾ, ಕೆನಡಾದಲ್ಲಿನ ಅನೇಕ ಗುರುದ್ವಾರಗಳು ಖಲಿಸ್ತಾನಿ ಬೆಂಬಲಿಗರ ವಶದಲ್ಲಿವೆ. ಇಂದು ಕೆನಡಾದಲ್ಲಿನ ಜನರು ‘ಖಲಿಸ್ತಾನಿ’ ಮತ್ತು ‘ಸಿಖ್ಖರನ್ನು’ ಒಂದೇ ಎಂದು ತಿಳಿದಿದ್ದಾರೆ, ನಾವು ಸಿಖರಾಗಿದ್ದೇವೆ, ಅಂದರೆ ನಾವೆಲ್ಲರೂ ಖಲಿಸ್ತಾನಿಗಳೇ ಆಗಿದ್ದೇವೆ. ಇದು ಟ್ರೂಡೋ ಇವರ ತಪ್ಪಿನ ಪರಿಣಾಮವಾಗಿದೆ. ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ‘ಸಾಮಾಜಿಕ ಮತ್ತು ರಾಜಕೀಯ ದೃಷ್ಟಿಯಿಂದ ಮೂರ್ಖ ವ್ಯಕ್ತಿ’ ಇದ್ದಾರೆ. ಬಹುತೇಕ ಸಿಖ್ ಜಾತ್ಯತೀತರಾಗಿದ್ದಾರೆ. ಮತ್ತು ಅವರು ಖಲಿಸ್ತಾನಿಗಳ ಜೊತೆಗೆ ಯಾವುದೇ ಸಂಬಂಧ ಹೊಂದಲು ಬಯಸುವುದಿಲ್ಲ, ಇದು ಟ್ರುಡೋ ಇವರಿಗೆ ಎಂದೂ ತಿಳಿದಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಕೆನಡಾದಲ್ಲಿನ ಹಿಂದೂಗಳಿಂದ ಭಾರತೀಯ ಹಿಂದುಗಳು ಆದರ್ಶ ಪಡೆಯಬೇಕು !