ತಿಳಿಯೋಣ : ಡೊನಾಲ್ಡ್ ಟ್ರಂಪ್ ಇವರ ಗೆಲುವಿನ ಕುರಿತು ಅಂತರಾಷ್ಟ್ರೀಯ ಶಕ್ತಿಗಳ ಪ್ರತಿಕ್ರಿಯೆ !

ನಾವೆಲ್ಲರೂ ಸೇರಿ ನಮ್ಮ ಜನರಿಗೋಸ್ಕರ ಒಳ್ಳೆಯ ಕೆಲಸ ಮಾಡೋಣ ! – ಪ್ರಧಾನಮಂತ್ರಿ ಮೋದಿ ಇವರಿಂದ ಶುಭಾಶಯಗಳು

ನವ ದೆಹಲಿ – ಪ್ರಧಾನಮಂತ್ರಿ ಮೋದಿ ಇವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ ಟ್ರಂಪ್ ಇವರಿಗೆ ಶುಭಾಶಯಗಳು ಕೋರಿದ್ದಾರೆ. ಅವರು, ನನ್ನ ಮಿತ್ರ ಡೊನಾಲ್ಡ್ ಟ್ರಂಪ್ ಇವರಿಗೆ ಚುನಾವಣೆಯಲ್ಲಿನ ಅವರ ಐತಿಹಾಸಿಕ ವಿಜಯಕ್ಕೆ ಹಾರ್ದಿಕ ಅಭಿನಂದನೆ ! ನೀವು ನಿಮ್ಮ ಹಿಂದಿನ ಕಾರ್ಯಕಾಲದಲ್ಲಿ ಯಶಸ್ಸಿನ ಆಧಾರ ಪಡೆಯುವಾಗ, ನಾನು ಭಾರತ ಅಮೆರಿಕ ಸಂಬಂಧ ಮತ್ತು ಕಾರ್ಯತಂತ್ರದ ಪಾಲುದಾರಿಕೆ ಇನ್ನಷ್ಟು ಸದೃಢಗೊಳಿಸುವುದನ್ನು ನೋಡುತ್ತಿದ್ದೇನೆ. ನಾವೆಲ್ಲರೂ ಸೇರಿ ನಮ್ಮ ಜನರ ಒಳಿತಿಗಾಗಿ ಕಾರ್ಯ ಮಾಡೋಣ ಮತ್ತು ಅಂತರಾಷ್ಟ್ರೀಯ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಪ್ರೋತ್ಸಾಹ ನೀಡೋಣ ಎಂದು ಹೇಳಿದರು.

ಟ್ರಂಪ್ ಇವರ ನೀತಿ ನೋಡಿ ಅವರಿಗೆ ಶುಭಾಶಯಗಳು ನೀಡುವೆವು ! – ರಷ್ಯಾ

ರಷ್ಯಾವು ಟ್ರಂಪ್ ಇವರಿಗೆ ಶುಭಾಶಯಗಳು ಕೋರಲಿಲ್ಲ. ಅಮೇರಿಕಾ ಮಿತ್ರ ದೇಶ ಇಲ್ಲದಿರುವುದರಿಂದ ನಾವು ಟ್ರಂಪ್ ಇವರ ನೀತಿಯ ಆಧಾರಿತ ನಿರ್ಣಯ ತೆಗೆದುಕೊಳ್ಳುವೆವು, ಎಂದು ರಷ್ಯಾದ ಸರಕಾರಿ ವಕ್ತಾರರು ದೀಮಿತ್ರಿ ಪೆಸ್ಕೋವ ಇವರು ಪತ್ರಕರ್ತರಿಗೆ ಹೇಳಿದರು.

ಇನ್ನೊಂದು ಕಡೆಗೆ ಉಕ್ರೇನ್ ಅಧ್ಯಕ್ಷ ವೋಲೋದಿಮಿರ್ ಝೇಲಾಕ್ಸಿ ಇವರು ಟ್ರಂಪ್ ಇವರಿಗೆ ಶುಭಾಶಯ ಕೋರಿದ್ದಾರೆ.

ಈಗ ಯುರೋಪ ತನ್ನ ಹಣೆಬರಹದ ಜವಾಬ್ದಾರಿ ಹೊತ್ತುಕೊಳ್ಳಬೇಕು ! – ಫ್ರಾನ್ಸಿನ ಪ್ರತಿಕ್ರಿಯೆ

ಅಮೇರಿಕಾ ಏನು ಮಾಡುವುದು; ಎಂಬುದು ನಾವು ನಮ್ಮನ್ನು ಕೇಳಬಾರದು; ಆದರೆ ಯುರೋಪ್ ಏನು ಮಾಡಲು ಸಮರ್ಥವಾಗಿದೆ? ಇದರ ಯೋಚನೆ ಮಾಡಬೇಕು. ರಕ್ಷಣೆ, ಔದ್ಯೋಗಿಕ ಇಂತಹ ಅನೇಕ ಪ್ರಮುಖ ಕ್ಷೇತ್ರಗಳಲ್ಲಿ ಯುರೋಪ್ ತನ್ನ ಸ್ವಂರದ ಹಣೆಬರಹದ ಜವಾಬ್ದಾರಿ ಹೊತ್ತುಕೊಳ್ಳಬೇಕು’, ಎಂದು ಫ್ರಾನ್ಸ್ ಸರಕಾರದ ವಕ್ತಾರರು ಟ್ರಂಪ್ ಇವರ ಗೆಲುವಿನ ನಂತರ ಹೇಳಿದರು.