Dy. CM Pawan Kalyan Advise: ಯೋಗಿ ಆದಿತ್ಯನಾಥರಂತೆ ಆಗಬೇಕು’: ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಪವನ ಕಲ್ಯಾಣ್ ಅವರ ಸಲಹೆ!

 

ಅಮರಾವತಿ (ಆಂಧ್ರಪ್ರದೇಶ) – ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ ಕಲ್ಯಾಣ್ ಇವರು ರಾಜ್ಯದ ಗೃಹ ಸಚಿವೆ ಅನಿತಾ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಂತೆ ಆಗಲು ಮತ್ತು ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧಗಳ ಹೆಡೆಮುರಿ ಕಟ್ಟಲು ಕಠಿಣ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು. ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಎಚ್ಚರಿಕೆ ನೀಡಿದ್ದಾರೆ.

1. ಇತ್ತೀಚೆಗೆ ಮೂರು ವರ್ಷದ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಘಟನೆ ಬಹಿರಂಗವಾದ ನಂತರ ಪವನ ಕಲ್ಯಾಣ್ ಮಾತನಾಡಿ, ಆಂಧ್ರಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯ ಪರಿಸ್ಥಿತಿ ಗಮನಾರ್ಹವಾಗಿ ಹದಗೆಟ್ಟಿದೆ. ಯೋಗಿ ಆದಿತ್ಯನಾಥ್ ಅವರ ಉತ್ತರ ಪ್ರದೇಶದಲ್ಲಿ ಯಾವ ರೀತಿ ಕಾನೂನು ಸುವ್ಯವಸ್ಥೆಯನ್ನು ನಿಭಾಯಿಸಲಾಗುತ್ತಿದೆಯೋ, ಅದೇ ರೀತಿ ರಾಜ್ಯದಲ್ಲಿ ಕಾನೂನು ವ್ಯವಸ್ಥೆಯನ್ನು ನಿರ್ವಹಿಸಬೇಕು ಎಂದು ಹೇಳಿದರು.

2. ರಾಜಕೀಯ ಮುಖಂಡರು ಮತ್ತು ಶಾಸಕರು ಕೇವಲ ಮತ ಕೇಳಲು ಇರುವುದಿಲ್ಲ. ಅವರ ಮೇಲೆ ಜವಾಬ್ದಾರಿಗಳಿವೆ. ‘ನಾನು ಗೃಹ ಇಲಾಖೆ ಕೇಳಲು ಅಥವಾ ಪಡೆಯಲು ಸಾಧ್ಯವಿಲ್ಲ’ ಅಂತಲ್ಲ. ನಾನು ಹಾಗೆ ಮಾಡಿದರೆ, ಜನರಿಗೆ ವಿಷಯಗಳು ತುಂಬಾ ಭಿನ್ನವಾಗಿರುತ್ತವೆ. ನಾವು ಯೋಗಿ ಆದಿತ್ಯನಾಥ ಅವರಂತೆ ಆಗಬೇಕು. ಇಲ್ಲದಿದ್ದರೆ ಅಪರಾಧಿಗಳು ಬದಲಾಗುವುದಿಲ್ಲ. ಆದ್ದರಿಂದ ನೀವು ಬದಲಾಗುವಿರೋ ಅಥವಾ ಇಲ್ಲವೋ ಎನ್ನುವುದನ್ನು ನೀವೇ ನಿರ್ಧರಿಸಿರಿ’.

3. ಗೃಹ ಸಚಿವರ ಮೇಲಿನ ಬಹಿರಂಗ ಟೀಕೆಯ ನಂತರ ಭಿನ್ನಾಭಿಪ್ರಾಯಗಳ ಆಗುವ ಸಾಧ್ಯತೆಯಿದೆಯೆಂದು ಹೇಳಲಾಗುತ್ತಿತ್ತು; ಆದರೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಂಪುಟದ ಮತ್ತೊಬ್ಬ ಹಿರಿಯ ಸಚಿವ ನಾರಾಯಣ ಮಾತನಾಡಿ, ಪವನ್ ಕಲ್ಯಾಣ್ ಅವರು ಉಪಮುಖ್ಯಮಂತ್ರಿಯಾಗಿರುವುದರಿಂದ ಅವರಿಗೆ ತಪ್ಪುಗಳನ್ನು ಎತ್ತಿ ತೋರಿಸುವ ಮತ್ತು ಸಚಿವರ ಕಾರ್ಯ ವೈಖರಿಯನ್ನು ಟೀಕಿಸುವ ಅಧಿಕಾರವಿದೆ ಎಂದು ಹೇಳಿದ್ದಾರೆ.