2016 ರಲ್ಲಿ ಕೇರಳದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣ; 3 ಮುಸ್ಲಿಮರು ಅಪರಾಧಿಗಳು

ಕೊಲ್ಲಂ (ಕೇರಳ) – ಜೂನ್ 15, 2016 ರಂದು ನಡೆದ ಬಾಂಬ ಸ್ಫೋಟದಲ್ಲಿ ಕೊಲ್ಲಂ ಜಿಲ್ಲಾ ನ್ಯಾಯಾಲಯವು 3 ಜನರನ್ನು ತಪ್ಪಿತಸ್ಥರೆಂದು ತೀರ್ಪು ನೀಡಿದೆ. ಅಬ್ಬಾಸ ಅಲಿ, ಶಮ್ಸನ ಕರೀಂ ರಾಜಾ ಮತ್ತು ದಾವೂದ ಸುಲೇಮಾನ್ ಅವರ ಹೆಸರುಗಳಾಗಿವೆ. ಇನ್ನೊಬ್ಬನನ್ನು ಸಾಕ್ಷಿಯ ಕೊರತೆಯಿಂದಾಗಿ ಖುಲಾಸೆಗೊಳಿಸಲಾಗಿದೆ. ತಪ್ಪಿತಸ್ಥರೆಲ್ಲರೂ ತಮಿಳುನಾಡಿನ ಮಧುರೈ ನಿವಾಸಿಗಳು. ಈ ಸ್ಫೋಟದಿಂದ ಕೊಲ್ಲಂ ಜಿಲ್ಲಾಧಿಕಾರಿ ಕಚೇರಿಯ ಎದುರು ನಿಲ್ಲಿಸಿದ್ದ ಜೀಪ್ ಧ್ವಂಸಗೊಳಿಸಲಾಗಿತ್ತು. ಈ ಸ್ಫೋಟದಲ್ಲಿ 61 ವರ್ಷದ ವ್ಯಕ್ತಿ ಗಾಯಗೊಂಡಿದ್ದನು. ಈ ಘಟನೆಯ ನಂತರ, ರಾಜ್ಯಾದ್ಯಂತ ಸರಣಿ ಬಾಂಬ್ ಸ್ಫೋಟಗಳನ್ನು ನಡೆಸುವ ಸಂಚು ರೂಪಿಸಲಾಗಿತ್ತೆಂದು ತನಿಖೆಯಿಂದ ಬಯಲಾಗಿತ್ತು.

ಪೊಲೀಸರು ಸ್ಫೋಟ ನಡೆದ ಸ್ಥಳದಿಂದ 15 ಬ್ಯಾಟರಿಗಳು, 17 ಫ್ಯೂಜಗಳು, ವಾಯರ ಮತ್ತು ಒಂದು ಬ್ಯಾಗ ವಶಪಡಿಸಿಕೊಂಡಿದ್ದಾರೆ. ಹಾಗೆಯೇ ಈ ಪ್ರಕರಣದಲ್ಲಿ ಒಟ್ಟು 5 ಜನರನ್ನು ಬಂಧಿಸಲಾಗಿತ್ತು. ತಪ್ಪಿತಸ್ಥರಾಗಿರುವ ಮೂವರನ್ನು ಹೊರತುಪಡಿಸಿ ಮಹಮ್ಮದ ಅಯುಬ ಮತ್ತು ಶಂಶುದ್ದೀನ ಇವರು ಸೇರಿದ್ದಾರೆ. ಅವರು ಅಲ್ ಕಾಯದಾ ಈ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದವರೆಂದು ಬಹಿರಂಗವಾಗಿತ್ತು.

ಸಂಪಾದಕೀಯ ನಿಲುವು

ಇಂತಹವರಿಗೆ ಗಲ್ಲುಶಿಕ್ಷೆಯ ಶಿಕ್ಷೆ ನೀಡುವಂತೆ ಯಾರಾದರೂ ಕೋರಿದರೆ, ಆಶ್ಚರ್ಯ ಪಡಬಾರದು !