ಶ್ರೀನಗರ (ಜಮ್ಮು-ಕಾಶ್ಮೀರ) – ಉಪಮುಖ್ಯಮಂತ್ರಿ ಸುರಿಂದರ ಚೌಧರಿ ಅವರು ಕಲಂ 370 ಅನ್ನು ಮರುಸ್ಥಾಪಿಸಲು ಆಗ್ರಹಿಸುವ ನಿರ್ಣಯವನ್ನು ಮಂಡಿಸಿದ ನಂತರ, ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಮೂರನೇ ದಿನವೂ ಗದ್ದಲವಾಯಿತು. ಪ್ರಚಂಡ ಗದ್ದಲದ ಬಳಿಕ ಈ ಪ್ರಸ್ತಾವನೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಭಾಜಪ ಶಾಸಕ ಹಾಗೂ ವಿರೋಧ ಪಕ್ಷದ ನಾಯಕ, ಸುನಿಲ್ ಶರ್ಮಾ ಅವರು ಈ ನಿರ್ಣಯವನ್ನು ಬಲವಾಗಿ ವಿರೋಧಿಸಿದರು. `ಉಪರಾಜ್ಯಪಾಲರ ಭಾಷಣವನ್ನು ಚರ್ಚಿಸುವ ಕೆಲಸವಿರುವಾಗ ಈ ಪ್ರಸ್ತಾವನೆಯನ್ನು ಹೇಗೆ ಮಂಡಿಸಲಾಯಿತು ?’, ಎಂದು ಅವರು ಪ್ರಶ್ನಿಸಿದರು. ಪಕ್ಷಾತೀತ ಶಾಸಕರಾದ ಶೇಖ್ ಖುರ್ಷಿದ್ ಮತ್ತು ಶಬ್ಬೀರ್ ಕುಲ್ಲೆ, ಪೀಪಲ್ಸ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಸಜ್ಜದ್ ಲೋನ್ ಮತ್ತು ಪಾಪ್ಯುಲರ್ ಡೆಮಾಕ್ರಟಿಕ್ ಪಕ್ಷದ ಮೂವರು ಶಾಸಕರು ಈ ಠರಾವನ್ನು ಬೆಂಬಲಿಸಿದರು.
ಪ್ರಸ್ತಾವನೆ ಏನು?
ಸರಕಾರ ಮಂಡಿಸಿದ ಪ್ರಸ್ತಾವನೆಯಲ್ಲಿ, ಈ ವಿಧಾನಸಭೆ ಜಮ್ಮು ಮತ್ತು ಕಾಶ್ಮೀರದ ಜನರ ಗುರುತು, ಸಂಸ್ಕೃತಿ ಮತ್ತು ಹಕ್ಕುಗಳನ್ನು ರಕ್ಷಿಸುವ ವಿಶೇಷ ಮತ್ತು ಸಂವಿಧಾನಾತ್ಮಕ ಭರವಸೆಯ ಮಹತ್ವಕ್ಕೆ ಒತ್ತು ನೀಡುತ್ತದೆ, ಹಾಗೆಯೇ ಈ ಭರವಸೆಯನ್ನು ಏಕಪಕ್ಷೀಯವಾಗಿ ತೆಗೆದುಹಾಕಿರುವ ಬಗ್ಗೆ ನಾವು ಚಿಂತೆ ವ್ಯಕ್ತಪಡಿಸುತ್ತೇವೆ. ಈ ವಿಧಾನಸಭೆಯು ಭಾರತ ಸರಕಾರಕ್ಕೆ ವಿಶೇಷ ಸ್ಥಾನಮಾನ, ಸಂವಿಧಾನಾತ್ಮಕ ಭರವಸೆ ಮತ್ತು ಈ ನಿಬಂಧನೆಗಳನ್ನು ಪುನಃ ಸ್ಥಾಪಿಸಲು ಸಂವಿಧಾನಾತ್ಮಕ ಆಡಳಿತವನ್ನು ಕಾರ್ಯಗತಗೊಳಿಸಲು ಜಮ್ಮು ಮತ್ತು ಕಾಶ್ಮೀರದ ಜನರ ಚುನಾಯಿಸಿಲ್ಪಟ್ಟಿರುವ ಪ್ರತಿನಿಧಿಗಳೊಂದಿಗೆ ಸಂವಾದವನ್ನು ಪ್ರಾರಂಭಿಸುವಂತೆ ಆಗ್ರಹಿಸುತ್ತದೆ. ಈ ವಿಧಾನಸಭೆ ಮರುಸ್ಥಾಪನೆಯ ಯಾವುದೇ ಪ್ರಕ್ರಿಯೆಯಲ್ಲಿ, ರಾಷ್ಟ್ರೀಯ ಏಕತೆ ಮತ್ತು ಜಮ್ಮೂ-ಕಾಶ್ಮೀರದ ಜನರ ನ್ಯಾಯಯುತ ಆಕಾಂಕ್ಷೆಗಳನ್ನು ರಕ್ಷಿಸಬೇಕು ಎನ್ನುವುದನ್ನು ಒತ್ತಿ ಹೇಳುತ್ತದೆ ಎಂದು ಹೇಳಲಾಗಿದೆ.
ಸಂಪಾದಕೀಯ ನಿಲುವುಈ ರೀತಿ ಎಷ್ಟೇ ಪ್ರಯತ್ನಿಸಿದರೂ, ಕಲಂ 370 ರಂದು ಮತ್ತೆ ಜಾರಿಗೊಳ್ಳುವುದಿಲ್ಲ, ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕಲಂ 370 ಅನ್ನು ಮರಳಿ ಜಾರಿಗೊಳಿಸಲು ಪ್ರಯತ್ನಿಸುತ್ತಿರುವವರು ಯಾವ ಮನಃಸ್ಥಿತಿಯವರಾಗಿದ್ದಾರೆ ಮತ್ತು ಅವರನ್ನು ಚುನಾಯಿಸಿ ಅಧಿಕಾರ ನೀಡಿರುವ ಕಾಶ್ಮೀರದ ಮುಸಲ್ಮಾನ ಜನತೆಯ ಮನಃಸ್ಥಿತಿ ಹೇಗಿದೆ ? ಎನ್ನುವುದನ್ನೂ ಭಾರತೀಯರು ಗಮನಕ್ಕೆ ತೆಗೆದುಕೊಳ್ಳಬೇಕು ! |