ಭರತಪುರ (ರಾಜಸ್ಥಾನ) ಇಲ್ಲಿ ಗೋಕಳ್ಳರೊಂದಿಗೆ ಪೊಲೀಸರ ಘರ್ಷಣೆ!

100 ಹಸುಗಳು ಜಪ್ತಿ

ಭರತಪುರ (ರಾಜಸ್ಥಾನ) – ನವೆಂಬರ್ 3 ರ ರಾತ್ರಿ ಇಲ್ಲಿನ ಚೌಕಿ ಸರೋವರದ ಪ್ರದೇಶದಲ್ಲಿ ಪೊಲೀಸರು ಮತ್ತು ಗೋಕಳ್ಳರ ನಡುವೆ ನಡೆದ ಚಕಮಕಿಯ ನಂತರ, ಗೋಕಳ್ಳರು ಲಾರಿಯನ್ನು ಬಿಟ್ಟು ಕಾಲ್ಕಿತ್ತರು. ಈ ಲಾರಿಯಲ್ಲಿ 30 ಹಸುಗಳು ಪತ್ತೆಯಾಗಿವೆ. ಈ ಹಸುಗಳನ್ನು ವಧೆಗಾಗಿ ಹರಿಯಾಣದ ನುಹ್‌ಗೆ ಒಯ್ಯಲಾಗುತ್ತಿತ್ತು.

ಗೋರಕ್ಷಕ ದಳದ ಸದಸ್ಯರು ನೀಡಿದ ಮಾಹಿತಿ ಪ್ರಕಾರ, ಲಾರಿ ಬಂದಾಗ, ಪೊಲೀಸರು ಅದನ್ನು ತಡೆಯಲು ಪ್ರಯತ್ನಿಸಿದರು. ಈ ವೇಳೆ ಲಾರಿ ಚಾಲಕನು ಪೊಲೀಸರತ್ತ ಗುಂಡು ಹಾರಿಸಲು ಆರಂಭಿಸಿದನು. ಪೊಲೀಸರೂ ಪ್ರತ್ಯುತ್ತರ ನೀಡಿದರು. ಆನಂತರ ಅಕ್ರಮ ಸಾಗಣೆದಾರರು ಲಾರಿ ಬಿಟ್ಟು ಓಡಿ ಹೋದರು. ಪೋಲೀಸರು ಅವರನ್ನು ಹುಡುಕಿದರು ಆದರೆ ಅವರು ಸಿಗಲಿಲ್ಲ; ಆದರೆ ಅವರಿಗೆ ಇನ್ನೂ 100 ಹಸುಗಳು ಸಿಕ್ಕವು. ವಶಕ್ಕೆ ಪಡೆದ ಎಲ್ಲಾ ಗೋವುಗಳನ್ನು ಬಾಯಣಾದಲ್ಲಿರುವ ರುದ್ವಲ ಶ್ರೀಕೃಷ್ಣ ಗೋಶಾಲೆಗೆ ಮತ್ತು ಭರತಪುರದ ಇಕ್ರಾನ್ ಗೋಶಾಲೆಗೆ ಕಳುಹಿಸಲಾಯಿತು.

ಸಂಪಾದಕೀಯ ನಿಲುವು

ಗೋಕಳ್ಳರು ಪೊಲೀಸರ ಮೇಲೆ ಗುಂಡು ಹಾರಿಸುವಷ್ಟು ಧೈರ್ಯ ತೋರುತ್ತಾರೆ, ಇದರಿಂದ ಅವರ ಸಿದ್ಧತೆ ಎಷ್ಟೊಂದು ಇರುತ್ತದೆ, ಇದು ಗಮನಕ್ಕೆ ಬರುತ್ತದೆ. ಇಂತಹವರಿಗೆ ಗಲ್ಲುಶಿಕ್ಷೆಯಾಗಲು ಕಾನೂನು ರೂಪಿಸುವುದು ಅವಶ್ಯಕವಾಗಿದೆ !