ನವದೆಹಲಿ – ಸರಕಾರ ಮತ್ತು ಅದರ ಅಧಿಕಾರಿಗಳು ತೆಗೆದುಕೊಳ್ಳುವ ನಿರ್ಧಾರಗಳನ್ನು ಟೀಕಿಸುವ ಹಕ್ಕು ಪ್ರತಿಯೊಬ್ಬ ನಾಗರಿಕರಿಗೆ ಇದೆ. ಟೀಕೆಯಿಂದ ಸರಕಾರದ ವಿರುದ್ಧ ಹಿಂಸಾಚಾರ ಮಾಡಿ ಅಶಾಂತಿಯು ಉಂಟಾಗದಿರುವ ತನಕ ಈ ಹಕ್ಕು ಸೀಮಿತವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಪತ್ರಕರ್ತ ವಿನೋದ ದುವಾ ವಿರುದ್ಧ ದೇಶದ್ರೋಹದ ಆರೋಪವನ್ನು ವಜಾಗೊಳಿಸಿ ನ್ಯಾಯಾಲಯವು ಈ ಆದೇಶವನ್ನು ಜಾರಿಗೊಳಿಸಿದೆ. ಕಳೆದ ವರ್ಷ ಶಿಮ್ಲಾದಲ್ಲಿ ಬಿಜೆಪಿ ಮುಖಂಡ ಶ್ಯಾಮ ಇವರು ದುವಾ ವಿರುದ್ಧ ದೂರು ದಾಖಲಿಸಿದ್ದರು ಮತ್ತು ಅವರ ವಿರುದ್ಧ ಪ್ರಕರಣವು ದಾಖಲಾಗಿತ್ತು.
ನ್ಯಾಯಾಲಯವು, ದುವಾ ನೀಡಿದ ಹೇಳಿಕೆಯು ಸರಕಾರ ಮತ್ತು ಅದರ ಪದಾಧಿಕಾರಿಗಳ ಕೆಲಸವನ್ನು ನಿರಾಕರಿಸುವಂತಹದಾಗಿದ್ದು ಇದು ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದೆ ಏಕೆಂದರೆ ಇಂತಹ ಟೀಕೆಗಳಿಂದ ಇನ್ನೂ ಹೆಚ್ಚು ಉತ್ತಮವಾಗಿ ಕಾರ್ಯನಿರ್ವಹಿಸಬಹುದು. ಆದ್ದರಿಂದ ಟೀಕೆಯು ಜನರನ್ನು ಪ್ರಚೋದಿಸುವ ಉದ್ದೇಶವನ್ನು ಹೊಂದಿರಲಿಲ್ಲ, ಇದು ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.