ಲಸಿಕೀಕರಣಗಾಗಿ ಹಜ್ ಯಾತ್ರಿಕರನ್ನು ತನ್ನ ಆದ್ಯತೆಯ ಪಟ್ಟಿಯಲ್ಲಿ ಸೇರಿಸಿದ ಕೇರಳದ ಸಿಪಿಐ (ಎಂ) ನೇತೃತ್ವದ ಸರಕಾರ !

ಕೊರೋನಾದಿಂದ ಎಲ್ಲರ ರಕ್ಷಣೆ ಮಾಡುವುದು ಅಪೇಕ್ಷಿತವಿದೆ; ಆದರೆ ಆದ್ಯತೆ ನೀಡುವಾಗ ಸರಕಾರವು ಹಿಂದೂ ಯಾತ್ರಾರ್ಥಿಗಳಿಗೆ ಈ ರೀತಿ ಆದ್ಯತೆ ನೀಡುತ್ತಿತ್ತೇನು ? ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ !

ತಿರುವನಂತಪುರಂ (ಕೇರಳ) – ಕೇರಳ ರಾಜ್ಯದ ಸಿಪಿಐ (ಎಂ) ಸರಕಾರವು ಕೊರೊನಾ ಲಸಿಕೆ ನೀಡಲು ೧೮ ರಿಂದ ೪೪ ವರ್ಷದೊಳಗಿನ ನಾಗರಿಕರಿಗೆ ಆದ್ಯತೆ ನೀಡಿದೆ. ಈ ಪೈಕಿ ೪೩ ಗುಂಪುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅದರಲ್ಲಿ ಹಜ್ ಯಾತ್ರಾರ್ಥಿಗಳನ್ನು ಸಹ ಸೇರಿಸಲಾಗಿದೆ. ಅದೇರೀತಿ ಆದಿವಾಸಿ ಯುವಕರು, ಕೊರೊನಾದೊಂದಿಗೆ ಹೋರಾಡುತ್ತಿರುವ ಮಂಚೂಣಿಯಲ್ಲಿ ಕೆಲಸ ಮಾಡುವವರು, ಪೊಲೀಸ್ ತರಬೇತುದಾರರು, ಉನ್ನತ ಮತ್ತು ಕೆಳ ನ್ಯಾಯಾಲಯದ ಸಿಬ್ಬಂದಿ, ಹಾಗೆಯೇ ಹವಾಮಾನ ಇಲಾಖೆ, ಮೆಟ್ರೋ, ಏರ್ ಇಂಡಿಯಾ ಮುಂತಾದ ಸಿಬ್ಬಂದಿಗಳು ಸೇರಿದ್ದಾರೆ.