ಕೋಲಕಾತಾದ ಬಿಜೆಪಿ ಕಚೇರಿ ಬಳಿ ೫೧ ನಾಡಬಾಂಬ್‌ಗಳು ಪತ್ತೆ !

ಬಂಗಾಲವೆಂದರೆ ನಾಡಬಾಂಬುಗಳ ಕಾರ್ಖಾನೆಯಂತೆ ಆಗಿದೆ. ಈ ಬಾಂಬ್ ಅನ್ನು ರಾಜಕೀಯ ಪಕ್ಷಗಳು ಸಾರಾಸಗಟಾಗಿ ಬಳಸುತ್ತವೆ; ಆದರೆ ಯಾವುದೇ ಪಕ್ಷದ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸಲು ಮತ್ತ್ತು ಅದರ ಮೇಲೆ ನಿಷೇಧ ಹೇರಲು ಒತ್ತಾಯಿಸುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

ಬಂಗಾಲದ ಬದಲು ಯಾವುದಾದರೂ ಹಿಂದುತ್ವನಿಷ್ಠ ಸಂಘಟನೆಯಲ್ಲಿ ಇಂತಹ ಬಾಂಬ್ ಪತ್ತೆಯಾಗಿದ್ದರೆ, ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷ, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ರಾಷ್ಟ್ರವಾದಿ ಕಾಂಗ್ರೆಸ್ ಇತ್ಯಾದಿ ಪಕ್ಷಗಳು, ಅದೇರೀತಿ ಪ್ರಗತಿ(ಅಧೋಗತಿ)ಪರರು, ಜಾತ್ಯಾತೀತವಾದಿ ಹಾಗೂ ಅಂಧಶ್ರದ್ಧಾ ನಿರ್ಮೀಲನ ಸಮಿತಿಯಂತಹ ಸಂಘಟನೆಗಳು ಸಂಬಂಧಪಟ್ಟ ಹಿಂದುತ್ವನಿಷ್ಠ ಸಂಘಟನೆಯ ಮೇಲೆ ನಿರ್ಬಂಧ ಹೇರುವಂತೆ ಒತ್ತಾಯಿಸುತ್ತಿದ್ದರು, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಕೋಲಕಾತಾ (ಬಂಗಾಲ) – ಇಲ್ಲಿನ ಬಿಜೆಪಿ ಕಚೇರಿಯ ಬಳಿ ೫೧ ನಾಡಬಾಂಬ್‌ಗಳು ಪತ್ತೆಯಾಗಿವೆ. ಒಂದು ಚೀಲದಲ್ಲಿ ಈ ಬಾಂಬ್‌ಗಳನ್ನು ಇಡಲಾಗಿತ್ತು. ಈ ಮಾಹಿತಿ ಪಡೆದ ನಂತರ, ಬಾಂಬ್ ನಿಷ್ಕ್ರೀಯ ದಳವು ಸ್ಥಳಕ್ಕೆ ತಲುಪಿತು. ಈ ಎಲ್ಲಾ ಬಾಂಬ್‌ಗಳು ಕಡಿಮೆ ತೀವ್ರತೆಯ ಹೊಂದಿವೆ ಎಂದು ಹೇಳಲಾಗುತ್ತದೆ. ಪೊಲೀಸರು ಇದರ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದಾರೆ. ಇಲ್ಲಿಯ ‘ಸಿಸಿಟಿವಿ ದೃಶ್ಯಾವಳಿ’ಗಳನ್ನು ಪರಿಶೀಲಿಸಲಾಗುತ್ತಿದೆ.

ರಾಜ್ಯದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ಸಹ ಇಂತಹ ದೊಡ್ಡ ಸಂಖ್ಯೆಯ ನಾಡಬಾಂಬ್‌ಗಳು ವಿವಿಧ ಸ್ಥಳಗಳಲ್ಲಿ ಪತ್ತೆಯಾಗಿತ್ತು. ದಕ್ಷಿಣ ೨೪ ಪರಗಣಾ ಜಿಲ್ಲೆಯ ಭಾಂಗರ ಪ್ರದೇಶದಿಂದ ಸುಮಾರು ೨೦೦ ನಾಡಬಾಂಬ್‌ಗಳನ್ನು ಪೊಲೀಸರು ಜಫ್ತಿಮಾಡಿದ್ದಾರೆ. ಈ ಹಿಂದೆ ಇಲ್ಲಿ ನಾಡಬಾಂಬು ಸ್ಫೋಟಗೊಂಡಿತ್ತು. ಇದರಲ್ಲಿ ಒಬ್ಬ ಬಿಜೆಪಿಯ ಕಾರ್ಯಕರ್ತನು ಸಾವನ್ನಪ್ಪಿದ್ದು, ಐವರು ಕಾರ್ಯಕರ್ತರು ಗಾಯಗೊಂಡಿದ್ದರು.