ಶಿವಸೇನಾ (ಹಿಂದ) ಪಕ್ಷದ ನಾಯಕನ ಮನೆಯ ಮೇಲೆ ದಾಳಿ ನಡೆಸಿದ 4 ಭಯೋತ್ಪಾದಕರ ಬಂಧನ

ಪೆಟ್ರೋಲ್ ಬಾಂಬ್ ನಿಂದ ದಾಳಿ ನಡೆಸಿದ್ದರು

ಲುಧಿಯಾನ (ಪಂಜಾಬ) – ಶಿವಸೇನಾ (ಹಿಂದ್) ಪಕ್ಷದ ನಾಯಕ ಹರಕಿರತ ಸಿಂಗ್ ಖುರಾಣಾ ಅವರ ಮನೆಯ ಮೇಲೆ ನವೆಂಬರ್ 2 ರಂದು ನಡೆದ ಪೆಟ್ರೋಲ್ ಬಾಂಬ್ ದಾಳಿಯ ಪ್ರಕರಣದಲ್ಲಿ ಪೊಲೀಸರು 4 ಜನರನ್ನು ಬಂಧಿಸಿದ್ದಾರೆ. ಇವರಲ್ಲಿ ಮನೀಶ, ರವೀಂದರಪಾಲ ಸಿಂಗ, ಅಮಿತ ಮತ್ತು ಜಸ್ವಿಂದರ ಸಿಂಗ ಸೇರಿದ್ದಾರೆ. ಹಾಗೂ ಲವ್ಪ್ರೀತ ಸಿಂಗ್ ಹೆಸರಿನ ಆರೋಪಿ ಪರಾರಿಯಾಗಿದ್ದಾನೆ. ಈ ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ.

ಈ ಘಟನೆಯ ಮಾಹಿತಿ ನೀಡುವಾಗ ಲುಧಿಯಾನ ಪೊಲೀಸ್ ಆಯುಕ್ತ ಕುಲದೀಪ್ ಸಿಂಗ್ ಚಾಹಲ್ ಇವರು ಮಾತನಾಡಿ, ಈ ವಿಷಯದಲ್ಲಿ ದೂರು ಬಂದನಂತರ ಪೊಲೀಸರು ಕ್ರಮ ಕೈಗೊಂಡಿದೆ. ಬಂಧಿತ ಭಯೋತ್ಪಾದಕರು ‘ಬಬ್ಬರ್ ಖಾಲ್ಸಾ ಇಂಟರ್ನ್ಯಾಶನಲ್’ ಈ ಭಯೋತ್ಪಾದಕ ಸಂಘಟನೆಯ ಕಟ್ಟರ ಭಯೋತ್ಪಾದಕ ಹರಜೀತ ಸಿಂಗ್ ಉರ್ಫ ಲಡ್ಡಿಯಿಂದ ಆದೇಶ ಪಡೆಯುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ, ಎಂದು ಹೇಳಿದ್ದಾರೆ.

ಪೊಲೀಸ್ ಆಯುಕ್ತ ಕುಲದೀಪ್ ಸಿಂಗ್ ಚಾಹಲ್ ನೀಡಿದ ಮಾಹಿತಿಯ ಪ್ರಕಾರ, ಬಂಧಿತ ಆರೋಪಿಗಳು ಈ ಹಿಂದೆ ಅಕ್ಟೋಬರ್ 16 ರಂದು ಶಿವಸೇನಾ (ಭಾರತವಂಶಿ) ಮುಖಂಡ ಯೋಗೇಶ್ ಬಕ್ಷಿ ಅವರ ಮನೆಗೆ ಪೆಟ್ರೋಲ್ ಬಾಂಬ್ ಎಸೆದಿದ್ದರು. ಈ ಘಟನೆಗಳ ಉದ್ದೇಶ ಪಂಜಾಬ್‌ನಲ್ಲಿ ಶಾಂತಿಯುತ ವಾತಾವರಣವನ್ನು ಕದಡುವುದಾಗಿತ್ತು.