ಬಿಶಪ ಸಹಿತ ಕಾಂಗ್ರೆಸ್ಸಿನ ಶಾಸಕರ ಉಪಸ್ಥಿತಿ
ಬಿಲಾಸಪುರ (ಛತ್ತೀಸ್‌ಗಡ) – ಇಲ್ಲಿಯ ಒಂದು ಚರ್ಚ್ ನ ಉದ್ಘಾಟನೆಯ ಕಾರ್ಯಕ್ರಮಕ್ಕೆ ಹಿಂದೂ ಸಂಘಟನೆಗಳಿಂದ ವಿರೋಧ ವ್ಯಕ್ತವಾದ ನಂತರ ರದ್ದುಪಡಿಸಲಾಯಿತು. ಬುಡಕಟ್ಟು ಜನಾಂಗಕ್ಕಾಗಿ ಪ್ರಾರ್ಥನಾಗೃಹ ಕಟ್ಟುವ ಹೆಸರಿನಲ್ಲಿ ಚರ್ಚ್ ಉದ್ಘಾಟನೆ ಮಾಡುವುದಿತ್ತು. ಇನ್ನೊಂದು ಘಟನೆಯಲ್ಲಿ ರಾಜ್ಯದಲ್ಲಿನ ರಾಯಗಡದಲ್ಲಿ ಕೂಡ ಮತಾಂತರದಿಂದ ರಂಪಾರಾಧಾಂತವಾಗಿದೆ. ಇಲ್ಲಿ ಪ್ರಾರ್ಥನಾ ಸಭೆಯ ಹೆಸರಿನಲ್ಲಿ ಮಹಿಳೆಯರ ಮತಾಂತರ ಮಾಡುವ ಪ್ರಯತ್ನ ಮಾಡಲಾಗುತ್ತದೆ ಎಂದು ಆರೋಪವಿದೆ.
धर्मांतरण की वजह से पूरे भारत की जनसांख्यिकी बदल रही है। भारत के 800 जिलों में से 200 जिलों में हिन्दू अल्पमत में आ गए हैं। हम हमारी धर्मनगरी रतनपुर को धर्मांतरण की नगरी नहीं बनने देंगे।
बंगलाभाटा (रतनपुर) में सरकारी जमीन पर चर्च बनाने का षड्यंत्र का पर्दाफास और विरोध हमारे… pic.twitter.com/5nPZwOnhsw— Prabal Pratap Singh Judev (@prabaljudevBJP) November 6, 2024
೧. ಬಂಗಲಾಭಥಾ ಈ ಬುಡಕಟ್ಟು ಜನಾಂಗದ ಬಹುಸಂಖ್ಯಾತ ಗ್ರಾಮದಲ್ಲಿ ಪ್ರಾರ್ಥನಾಗೃಹದ ಉದ್ಘಾಟನೆಯ ಹೆಸರಿನಲ್ಲಿ ಜನರ ಮೇಳದ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಮಹಿಳೆಯರು ಮತ್ತು ಚಿಕ್ಕ ಹುಡುಗರ ಸಮಾವೇಶ ಕೂಡ ಇತ್ತು. ಈ ಕಾರ್ಯಕ್ರಮದಲ್ಲಿ ಛತ್ತಿಸ್‌ಗಡದ ಪ್ರಾದೇಶಿಕ ಪ್ರದೇಶಾಧ್ಯಕ್ಷ ಬಿಷಪ್ (ಹಿರಿಯ ಪಾದ್ರಿ) ಸುಷಮಾ ಕುಮಾರ್ ಸಹಿತ ಕಾಂಗ್ರೆಸ್ಸಿನ ಶಾಸಕ ಅಟಲ್ ಶ್ರೀನಿವಾಸ ಇವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
೨. ಚರ್ಚ್ ನ ಉದ್ಘಾಟನೆಯ ಕುರಿತು ಹಿಂದೂ ಸಂಘಟನೆಗಳಿಗೆ ಮಾಹಿತಿ ದೊರೆಯುತ್ತಲೇ ಅವರು ಘಟನಾಸ್ಥಳಕ್ಕೆ ತಲುಪಿದರು. ಉದ್ಘಾಟನೆಯನ್ನು ಖಂಡಿಸುತ್ತಾ ಹನುಮಾನ ಚಾಲಿಸಾದ ಪಠಣೆ ಮಾಡಿದರು. ಈ ವಿರೋಧದಿಂದ ಆಯೋಜಕರು ಕಾರ್ಯಕ್ರಮ ರದ್ದುಪಡಿಸಬೇಕಾಯಿತು. ಭಾಜಪದ ನಾಯಕ ಪ್ರಬಲ ಪ್ರತಾಪ ಜುದೇವ್ ಇವರು, ಕಾಂಗ್ರೆಸ್ಸಿನ ನಾಯಕರು ಮತಾಂತರಕ್ಕೆ ಪ್ರೋತ್ಸಾಹ ನೀಡುತ್ತಾರೆ ಎಂದು ಆರೋಪಿಸಿದರು. ಅವರು, ಕಾಂಗ್ರೆಸ್ಸಿನ ಶಾಸಕರು ಪ್ರಾರ್ಥನಾ ಸಭೆಯ ಹೆಸರಿನಲ್ಲಿ ಈ ಧಾರ್ಮಿಕ ನಗರವನ್ನು ‘ಮತಾಂತರ ನಗರ’ ದಲ್ಲಿ ರೂಪಾಂತರಿಸಲು ಪ್ರಯತ್ನಿಸುತ್ತಿದ್ದಾರೆ. ಬುಡಕಟ್ಟು ಜನಾಂಗದ ಮತಾಂತರ ಮಾಡುವ ಷಡ್ಯಂತ್ರವನ್ನು ಸರಕಾರ ನಿರ್ಲಕ್ಷಿಸುತ್ತಿದೆ ಎಂದು ಕೂಡ ಅವರು ಆರೋಪಿಸಿದರು.
ಸಂಪಾದಕೀಯ ನಿಲುವುಜಾರ್ಖಂಡ್ ಮತ್ತು ಛತ್ತೀಸ್‌ಗಡದಲ್ಲಿ ಬುಡಕಟ್ಟು ಜನಾಂಗದ ಹಿಂದುಗಳನ್ನು ಬೃಹತ್ ಪ್ರಮಾಣದಲ್ಲಿ ಮತಾಂತರ ಮಾಡಲಾಗುತ್ತದೆ. ಇದರ ವಿರುದ್ಧ ಕೇಂದ್ರ ಸರಕಾರವು ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ ! |