ಸೂರತ (ಗುಜರಾತ)ನಲ್ಲಿ ಸಾಧುಗಳ ವೇಶದಲ್ಲಿ ಅಲೆದಾಡುತ್ತಿದ್ದ 3 ಮುಸ್ಲಿಮರನ್ನು ಸ್ಥಳೀಯ ಜನರು ಹಿಡಿದರು

ಸೂರತ (ಗುಜರಾತ) – ಇಲ್ಲಿನ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದು, ಇದರಲ್ಲಿ ಕಾವಿ ಬಟ್ಟೆ ಧರಿಸಿದ ಮೂವರು ವ್ಯಕ್ತಿಗಳು ಭಿಕ್ಷೆ ಬೇಡುತ್ತಿರುವ ದೃಶ್ಯ ಕಾಣುತ್ತಿದೆ. ಕೆಲವು ಜನರು ಈ ಮೂವರೊಂದಿಗೆ ವಾದಿಸುತ್ತಿದ್ದಾರೆ. ಇವರೆಲ್ಲರೂ ಸಾಧುಗಳಲ್ಲ, ಮುಸಲ್ಮಾನರಾಗಿದ್ದಾರೆಂದು ಜನರು ಆರೋಪಿಸುತ್ತಿದ್ದಾರೆ. ಮೂವರಿಗೆ ಹಿಂದೂಗಳ ದೇವತೆಗಳ ಹೆಸರು ಸರಿಯಾಗಿ ಹೇಳಲು ಬರಲಿಲ್ಲ ಹಾಗೆಯೇ ಯಾವುದೇ ಧರ್ಮಗ್ರಂಥದಲ್ಲಿನ ಶ್ಲೋಕವನ್ನು ಹೇಳಲು ಸಾಧ್ಯವಾಗಲಿಲ್ಲ.

ವೀಡಿಯೋ ಮಾಡುವ ವ್ಯಕ್ತಿಯು ಈ ಜನರಿಗೆ ಶ್ಲೋಕವನ್ನು ಹೇಳಲು ಕೇಳಿದಾಗ, ಅವರು ಉರ್ದುವಿನಲ್ಲಿ ‘ದುವಾ’ (ಕೃಪೆ) ಎಂದು ಹೇಳಲು ಪ್ರಾರಂಭಿಸಿದರು. ಅವರಿಗೆ ಕೇಲವ ಭೋಲೆನಾಥನ ಹೆಸರು ಗೊತ್ತಿದೆ. ಇವರಲ್ಲಿ ಒಬ್ಬನ ಗುರುತುಪತ್ರವನ್ನು ತಪಾಸಣೆ ಮಾಡುದಾಗ ಅದರಲ್ಲಿ ಅವನ ಹೆಸರು ಸಲ್ಮಾನ ಎಂದು ಬರೆದಿರುವುದು ಕಂಡು ಬಂದಿತು.

ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ಕಾವಿ ಬಟ್ಟೆ ಧರಿಸಿ ತಿರುಗಾಡುತ್ತಿದ್ದ ಮೂವರು ಮುಸ್ಲಿಮರನ್ನು ಪೊಲೀಸರು ತಡೆದಿದ್ದರು.

ಸಂಪಾದಕೀಯ ನಿಲುವು

ಮತಾಂಧ ಮುಸಲ್ಮಾನರಿಗೆ ಜೀವನವನ್ನು ನಡೆಸಲು ಹಿಂದೂಗಳಾಗಬೇಕಾಗುತ್ತದೆ, ಕಾವಿ ಬಟ್ಟೆ ಧರಿಸಬೇಕಾಗುತ್ತದೆ, ಇದರಿಂದ ಅವರ ಧರ್ಮಭ್ರಷ್ಟಗೊಳ್ಳುವುದಿಲ್ಲವೇ ?