Temple Vandalized: ಭಾಗ್ಯನಗರ(ತೆಲಂಗಾಣ)ದಲ್ಲಿ ಮತ್ತೊಂದು ದೇವಸ್ಥಾನದಲ್ಲಿ ಧ್ವಂಸ !

ನವಗ್ರಹ ಮೂರ್ತಿಗಳ ಅವಮಾನ !

ಭಾಗ್ಯನಗರ (ತೆಲಂಗಾಣ) – ಇತ್ತೀಚೆಗೆ ಮತ್ತೂಂದು ದೇವಸ್ಥಾನದ ಧ್ವಂಸಮಾಡಿದ ಘಟನೆ ಬೆಳಕಿಗೆ ಬಂದಿದೆ. ಕೆಲವು ಮತಾಂಧ ಮುಸಲ್ಮಾನ ಗೂಂಡಾಗಳು ದೇವಸ್ಥಾನದಲ್ಲಿದ್ದ ನವಗ್ರಹ ವಿಗ್ರಹಗಳ ವಿರೂಪ ಮಾಡಿದ್ದಾರೆ. ನಗರದ ಶಂಶಾಬಾದ್ ಪ್ರದೇಶದಲ್ಲಿನ ದೇವಸ್ಥಾನವೊಂದರಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಿಂದ ಸ್ಥಳೀಯರಲ್ಲಿ ಆಕ್ರೋಶದ ಜ್ವಾಲೆ ಭುಗಿಲೆದ್ದಿದೆ. ಜನರು ದೇವಸ್ಥಾನದ ಹೊರಗೆ ಜಮಾಯಿಸಿ ದಾಳಿಯನ್ನು ವಿರೋಧಿಸಿದರು. ಸ್ಥಳಕ್ಕೆ ಪೊಲೀಸರ ಒಂದು ತಂಡ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದೆ. ಈ ಪ್ರಕರಣದಲ್ಲಿ ಪೋಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಮತಾಂಧ ಮುಸಲ್ಮಾನರು ಭಾಗ್ಯನಗರದ ಕೂರ್ಮಗುಡದಲ್ಲಿರುವ ಮುತ್ಯಾಲಮ್ಮ ದೇವಸ್ಥಾನದ ಮೇಲೆ ದಾಳಿ ನಡೆಸಿ ವಿಗ್ರಹವನ್ನು ಧ್ವಂಸಗೊಳಿಸಿದ್ದರು. ಈ ಘಟನೆಯ ನಂತರವೂ ಸ್ಥಳೀಯ ಹಿಂದೂಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ವಿಗ್ರಹವನ್ನು ಅವಮಾನಿಸಿದ ಆರೋಪಿಗಳಲ್ಲಿ ಒಬ್ಬನನ್ನು ಸ್ಥಳೀಯರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದರು.

(ಮೇಲೆ ಪ್ರಕಾಶಿಸಿದ ಚಿತ್ರ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರಲು ಮಾಡಿರುವುದಾಗಿರದೇ ನೈಜ ಸ್ಥಿತಿ ತೋರಿಸುವುದಾಗಿದೆ – ಸಂಪಾದಕರು)

ಸಂಪಾದಕೀಯ ನಿಲುವು

ಇದೇ ಏನಾದರೂ ಮಸೀದಿಯಲ್ಲಿ ಅಥವಾ ದರ್ಗಾದ ಮೇಲೆ ದಾಳಿ ಮಾಡಲು ಧೈರ್ಯ ಮಾಡಿದ್ದರೆ, ದೇಶಾದ್ಯಂತ ‘ಸರ್ ತನ್ ಸೆ ಜುದಾ’ ದ (ತಲೆಕಡಿಯುವುದು) ಘೋಷಣೆಗಳೊಂದಿಗೆ ಹಿಂಸಾಚಾರ ನಡೆಯುತ್ತಿತ್ತು. ಹಿಂದೂಗಳು ಕಾನೂನನ್ನು ಕೈಗೆ ತೆಗೆದುಕೊಳ್ಳದ ಕಾರಣ ಮುಸಲ್ಮಾನರು ಮತ್ತು ಆಡಳಿತವು ಹಿಂದೂಗಳ ಒಳ್ಳೆಯತನದ ದುರುಪಯೋಗ ಪಡೆದುಕೊಳ್ಳುತ್ತಿದೆಯೇ ?