ಹಿಂದೂ ಜನಜಾಗೃತಿ ಸಮಿತಿಯಿಂದ ವಿರೋಧ !
ಕೇಂದ್ರ ಸರಕಾರವೂ ಇದನ್ನು ವಿರೋಧಿಸಿ ಈ ಅಯೋಗ್ಯ ನಕ್ಷೆಯನ್ನು ತೆಗೆದುಹಾಕಿ ಸರಿಯಾದ ನಕ್ಷೆಯನ್ನು ತೆಗೆದುಕೊಳ್ಳುವಂತೆ ಈ ಸಂಸ್ಥೆಯ ಮೇಲೆ ಒತ್ತಡವನ್ನು ಹೇರಬೇಕು !
ಮುಂಬಯಿ – ಅಮೆರಿಕದ ಚಲನಚಿತ್ರ ನಿರ್ಮಾಣ ಕಂಪನಿಯಾದ ‘ವಾರ್ನರ್ ಬ್ರದರ್ಸ್’ ಸಂಸ್ಥೆಯಿಂದ ಮಕ್ಕಳ ಶಿಕ್ಷಣದ ಬಗ್ಗೆ ವೀಡಿಯೊಗಳನ್ನು ಸಹ ತಯಾರಿಸಲಾಗುತ್ತದೆ. ಇಂತಹ ಒಂದು ವಿಡಿಯೋದಲ್ಲಿ ಭಾರತದ ನಕಾಶೆಯನ್ನು ಅವಮಾನಿಸಲಾಗಿದೆ. ಯು-ಟ್ಯೂಬ್ ಚಾನೆಲ್‌ನಲ್ಲಿರುವ ಈ ಸಂಸ್ಥೆಯ ಅಧಿಕೃತ ವಿಡಿಯೋದಲ್ಲಿ ತೋರಿಸಲಾದ ನಕಾಶೆಯಲ್ಲಿ ಭಾರತದ ಜಮ್ಮು – ಕಾಶ್ಮೀರ ಮತ್ತು ಲಡಾಖ್ ಅನ್ನು ಹೊರಗಿಡಲಾಗಿದೆ.
Dear @warnerbros, appreciate your innovative way of teaching geography, but you’ve no right to distort the political borders of India, as you have done by alienating the territories of J&K and Ladakh from Indian map. The map should be revised immediatelyhttps://t.co/OoXqNFzbA9
— HinduJagrutiOrg (@HinduJagrutiOrg) June 5, 2021
ಈ ಬಗ್ಗೆ ರಾಷ್ಟ್ರಪ್ರೇಮಿಯೊಬ್ಬರು ಹಿಂದೂ ಜನಜಾಗೃತಿ ಸಮಿತಿಗೆ ಮಾಹಿತಿ ನೀಡಿದ ನಂತರ, ಸಮಿತಿಯು ಟ್ವೀಟ್ ಮೂಲಕ ಭಾರತದ ಸರಿಯಾದ ನಕ್ಷೆಯನ್ನು ತೆಗೆದುಕೊಳ್ಳುವಂತೆ ವಾರ್ನರ್ ಬ್ರದರ್ಸ್‌ಗೆ ಒತ್ತಾಯಿಸಿದೆ. ಅದೇರೀತಿ ‘ಸಾಮಾಜಿಕ ಮಾಧ್ಯಮದಿಂದ ರಾಷ್ಟ್ರಪ್ರೇಮಿಗಳು ಈ ಬಗ್ಗೆ ಇ-ಮೇಲ್ ಮತ್ತು ಟ್ವೀಟ್‌ಗಳ ಮೂಲಕ ಕಾನೂನುಬದ್ಧವಾಗಿ ವಿರೋಧಿಸುವಂತೆ ಕರೆ ನೀಡಿದೆ. ಸಮಿತಿಯ ಕೋರಿಕೆಗೆ ವಾರ್ನರ್ ಬ್ರದರ್ಸ್‌ದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ರಾಷ್ಟ್ರಪ್ರೇಮಿಗಳು ಈ ಮುಂದಿನ ಸಂಪರ್ಕದಿಂದ ವಿರೋಧಿಸುತ್ತಿದ್ದಾರೆ.
ಟ್ವಿಟರ್ : twitter.com/Warnerbros
ವಿ. ಅಂಚೆ : studiofacilities.warnerbros.com