ಡೊನಾಲ್ಡ್ ಟ್ರಂಪ್ ಅಮೇರಿಕಾದ ನೂತನ ರಾಷ್ಟ್ರಾಧ್ಯಕ್ಷ !

ವಾಷಿಂಗ್ಟನ್ (ಅಮೇರಿಕಾ) – ಅಂತರಾಷ್ಟ್ರೀಯ ಮಹಾಧಿಕಾರ ಇರುವ ಅಮೆರಿಕಾದ ರಾಷ್ಟ್ರಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆಲವು ಸಾಧಿಸಿದ್ದಾರೆ. ಈ ವಿಜಯದಿಂದ ಟ್ರಂಪ್ ಅಮೇರಿಕಾದ ೪೭ ನೇ ರಾಷ್ಟ್ರಾಧ್ಯಕ್ಷರಾಗಿದ್ದಾರೆ. ಅವರು ಡೆಮೊಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲ ಹ್ಯಾರಿಸ್ ಇವರನ್ನು ಸೋಲಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಇವರಿಗೆ ೨೭೭ ಎಲೆಕ್ಟ್ರೋರಲ್ ಮತಗಳು ದೊರೆತಿವೆ. ಇದೇ ಸಮಯದಲ್ಲಿ ಕಮಲ ಹ್ಯಾರಿಸ್ ಇವರಿಗೆ ಕೇವಲ ೨೨೬ ಎಲೆಕ್ಟ್ರೋರಲ್ ಮತಗಳು ದೊರೆತಿವೆ. ೫೩೮ ಎಲೆಕ್ಟ್ರೋರಲ್ ಮತಗಳಲ್ಲಿ ೨೭೦ ಮತಗಳ ಬಹುಮತಕ್ಕೆ ಆವಶ್ಯಕ ಇರುತ್ತವೆ. ಟ್ರಂಪ್ ಎರಡನೆಯ ಅವಧಿಗೆ ರಾಷ್ಟ್ರಾಧ್ಯಕ್ಷರಾಗಿದ್ದಾರೆ. ೨೦೧೬ ರಲ್ಲಿ ಅವರು ಮೊದಲಬಾರಿ ರಾಷ್ಟ್ರಾಧ್ಯಕ್ಷರಾಗಿದ್ದರು. ೨೦೨೦ ರಲ್ಲಿ ಡೆಮೊಕ್ರಟಿಕ್ ಪಕ್ಷದ ಜೋ ಬಾಯೆಡೇನ್ ಇವರು ಟ್ರಂಪ್ ಇವರನ್ನು ಸೋಲಿಸಿದ್ದರು.

ನಾನು ನಿಮಗಾಗಿ ಪ್ರತಿದಿನ ಹೋರಾಡುವೆ ! – ಟ್ರಂಪ್ ಗೆಲುವಿನ ನಂತರ ಜನರಿಗೆ ನೀಡಿರುವ ಆಶ್ವಾಸನೆ

ಗೆಲುವಿನ ನಂತರ ಬೆಂಬಲಿಗರೊಂದಿಗಿನ ಸಭೆಯಲ್ಲಿ ಟ್ರಂಪ್ ಇವರು ಮಾತನಾಡುತ್ತಾ, ನಮ್ಮ ದೇಶ ಈ ಹಿಂದೆ ನೋಡದೆ ಇರುವ ಐತಿಹಾಸಿಕ ರಾಜಕೀಯ ಗೆಲುವಾಗಿದೆ. ಇದು ಇತಿಹಾಸದಲ್ಲಿನ ಎಲ್ಲಕ್ಕಿಂತ ಮಿಗಿಲಾದ ರಾಜಕೀಯ ಕ್ಷಣವಾಗಿದೆ. ಇದು ಅಮೆರಿಕಾದ ದೊಡ್ಡ ಗೆಲುವಾಗಿದೆ, ಇದರಿಂದ ಅಮೇರಿಕಾ ಪುನಃ ಶ್ರೇಷ್ಠ ಆಗುವುದು. ೪೭ ನೇ ರಾಷ್ಟ್ರಪತಿ ಎಂದು ನಾನು ನಿಮಗಾಗಿ ಪ್ರತಿ ದಿನ ಹೋರಾಡುವೆ. ನಾನು ನಿಮ್ಮ ಕುಟುಂಬಕ್ಕಾಗಿ ಮತ್ತು ಭವಿಷ್ಯಕ್ಕಾಗಿ ಹೋರಾಡುವೆನು. ನಾವು ಮತದಾರರಿಗಾಗಿ ಎಲ್ಲವೂ ವ್ಯವಸ್ಥಿತಗೊಳಿಸುವೆವು. ನಾವು ದೇಶದ ಗಡಿ ಹೆಚ್ಚು ಸಧೃಢಗೊಳಿಸುವೆವು ಮತ್ತು ದೇಶದಲ್ಲಿನ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವೆವು. ಮುಂಬರುವ ೪ ವರ್ಷಗಳು ಅಮೇರಿಕಾಗೆ ‘ಸುವರ್ಣ ಯುಗ’ವಾಗಲಿದೆ. ಜನರು ನಮಗೆ ಬಹುಮತದ ಜನಾದೇಶ ನೀಡಿದ್ದಾರೆ ಎಂದು ಹೇಳುತ್ತಾ ಟ್ರಂಪ್ ಇವರು ಜನರಿಗೆ ಧನ್ಯವಾದ ಹೇಳಿದರು.

ಸಭೆಯಲ್ಲಿ ಟ್ರಂಪ್ ತಮ್ಮ ಪತ್ನಿ ಮೇಲೆನಿಯ ಇವರ ಜೊತೆಗೆ ಮಕ್ಕಳು ಮತ್ತು ಇತರ ಸಂಬಂಧಿಕರು ಹಾಗೂ ಪಕ್ಷದ ನಾಯಕರು ಉಪಸ್ಥಿತರಿದ್ದರು.

ಉಪರಾಷ್ಟ್ರಪತಿಯಂದು ಜೆಡಿ ವಾನ್ಸ್ ಇವರ ನೇಮಕ

ಅಮೇರಿಕಾದ ಉಪರಾಷ್ಟ್ರಪತಿ ಸ್ಥಾನದ ಅಭ್ಯರ್ಥಿ ಜೆಡಿ ವಾನ್ಸ ಇವರು ಕೂಡ ಅವರ ಮತದಾರ ಕ್ಷೇತ್ರದಿಂದ ಗೆಲವು ಸಾಧಿಸಿದ್ದಾರೆ. ಟ್ರಂಪ್ ಇವರ ನಂತರ ರಿಪಬ್ಲಿಕನ್ ಪಕ್ಷದ ಬೆಂಬಲಿಗರನ್ನುದ್ದೇಶಿಸಿ ಮಾತನಾಡುತ್ತಾ ಜೆಡಿ ವಾನ್ಸ್ ಇವರು, ಇದು ಅಮೆರಿಕ ಇತಿಹಾಸದಲ್ಲಿನ ಅತಿ ದೊಡ್ಡ ರಾಜಕೀಯ ಪುನರಾಗಮನವಾಗಿದೆ. ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

ಅಮೇರಿಕಾದ ರಾಷ್ಟ್ರಾಧ್ಯಕ್ಷರ ಆಯ್ಕೆ ಹೇಗೆ ಆಗುತ್ತದೆ ?

ಅಮೇರಿಕಾದ ರಾಷ್ಟ್ರಾಧ್ಯಕ್ಷರ ಚುನಾವಣೆ ಒಂದು ಪರೋಕ್ಷ ಪ್ರಕ್ರಿಯೆ ಇರುತ್ತದೆ. ಇದರಲ್ಲಿ ಎಲ್ಲಾ ರಾಜ್ಯದಲ್ಲಿನ ನಾಗರಿಕರು ‘ಎಲೆಕ್ಟ್ರೋವಲ್ ಕಾಲೇಜ್’ ದ ಆಯ್ದ ಸದಸ್ಯರೇ ಮತದಾನ ಮಾಡುತ್ತಾರೆ. ಈ ಸದಸ್ಯರಿಗೆ ‘ಎಲೆಕ್ಟರ್ಸ್’ ಎನ್ನುತ್ತಾರೆ. ಈ ಎಲೆಕ್ಟರ್ಸ್ ನಂತರ ಪ್ರತ್ಯಕ್ಷ ಮತದಾನ ಮಾಡುತ್ತಾರೆ. ಅದನ್ನು ‘ಎಲೆಕ್ಟ್ರೋರಲ್ ಮತದಾನ’ ಎಂದು ಹೇಳುತ್ತಾರೆ. ಅದು ರಾಷ್ಟ್ರಾಧ್ಯಕ್ಷ ಮತ್ತು ಉಪರಾಷ್ಟ್ರಾಧ್ಯಕ್ಷ ಇವರ ಚುನಾವಣೆಯಲ್ಲಿ ಮತ ನೀಡುತ್ತಾರೆ. ಈ ಎಲೆಕ್ಟ್ರೋರಲ್ ಮತಗಳಲ್ಲಿ ಬಹುಮತ ಪಡೆಯುವ ಅಭ್ಯರ್ಥಿ ಅಮೇರಿಕಾದ ರಾಷ್ಟ್ರಾಧ್ಯಕ್ಷ ಮತ್ತು ಉಪರಾಷ್ಟ್ರಾಧ್ಯಕ್ಷರೆಂದು ಆಯ್ಕೆ ಆಗುತ್ತಾರೆ.

ಅಮೇರಿಕಾದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಗೆಲವು ಸಾಧಿಸುವುದಕ್ಕೆ ೫೩೮ ಎಲೆಕ್ಟ್ರೋರಲ್ ಮತಗಳಲ್ಲಿ ೨೭೦ ಮತಗಳು ಪಡೆಯುವುದು ಅವಶ್ಯಕವಾಗಿರುತ್ತದೆ. ಪ್ರಸ್ತುತ ಚುನಾವಣೆಯಲ್ಲಿ ಇಲ್ಲಿಯವರೆಗೆ ೫೦೩ ತೀರ್ಪು ಕೈ ಸೇರಿದೆ. ಇದರಲ್ಲಿ ಟ್ರಂಪ್ ಇವರಿಗೆ ೨೭೭ ಎಲೆಕ್ಟ್ರೋರಲ್ ಮತಗಳು ದೊರೆತಿವೆ ಹಾಗೂ ಕಮಲ ಹ್ಯಾರಿಸ್ ಇವರಿಗೆ ೨೨೬ ಎಲೆಕ್ಟ್ರೋರಲ್ ಮತಗಳು ದೊರೆತಿವೆ. ಹಾಗೂ ಟ್ರಂಪ್ ಇವರು ವಿಶ್ಕಾಸಿನ, ಮಿಷಿಗನ್, ಆ್ಯರಿಝೋನಾ, ನೇವಾಡಾ ಮತ್ತು ಅಲಾಸ್ಕ ಈ ರಾಜ್ಯಗಳಲ್ಲಿ ಮುಂಚೂಣಿಯಲ್ಲಿ ಇರುವುದರಿಂದ ಅವರು ೩೦೦ ಕ್ಕಿಂತಲೂ ಹೆಚ್ಚಿನ ಮತಗಳು ಪಡೆಯುವವರು ಎಂದು ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು

  • ಅಮೇರಿಕಾದಲ್ಲಿನ ನಾಗರೀಕರು ಟ್ರಂಪ್ ಇವರನ್ನು ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಕೂರಿಸಿ ಸ್ವಂತ ದೇಶದ ವಿಚಾರ ಮಾಡಿರುವುದಾಗಿ ಕಂಡು ಬರುತ್ತಿದೆ. ಟ್ರಂಪ್ ಅಮೇರಿಕಾದ ಮಾಜಿ ರಾಷ್ಟ್ರಾಧ್ಯಕ್ಷರ ಹಾಗೆ ಇತರ ದೇಶಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಎಂದು ಆಶಿಸುತ್ತೇವೆ !
  • ಟ್ರಂಪ್ ಇವರು ಮೋದಿಯವರನ್ನು ಸ್ನೇಹಿತನೆಂದು ನಂಬಿದ್ದಾರೆ ಮತ್ತು ಅವರು ಬಾಂಗ್ಲಾದೇಶದಲ್ಲಿನ ಹಿಂದೂಗಳ ಸಂದರ್ಭದಲ್ಲಿ ಚುನಾವಣೆಯ ಕೆಲವು ದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಇದನ್ನು ನೋಡಿದರೆ ಟ್ರಂಪ್ ಇವರು ಪ್ರತ್ಯಕ್ಷದಲ್ಲಿ ಭಾರತಕ್ಕೆ ಪೂರಕವಾಗುವರು ಮತ್ತು ಹಿಂದುಗಳ ರಕ್ಷಣೆಗಾಗಿ ಕೃತಿ ಮಾಡಬೇಕೆಂದು ಹಿಂದೂಗಳ ಅಪೇಕ್ಷೆಯಾಗಿದೆ !