ಪೊಲೀಸರ ಮೇಲೆ ಹಲ್ಲೆ ನಡೆಸಿದ ಗೂಂಡಾನಿಗೆ ಪರಾರಿಯಾಗಲು ಅವಕಾಶ ನೀಡಿದ ಮಾಜಿ ಬಿಜೆಪಿ ಪದಾಧಿಕಾರಿಯ ಬಂಧನ

ಇಂತಹವರಿಗೆ ಸರಕಾರವು ಕಠೋರ ಶಿಕ್ಷೆಯಾಗಲು ಪ್ರಯತ್ನಿಸಬೇಕು, ಆಗ ಇತರರು ಸತರ್ಕರಾಗುವರು

ಕಾನಪುರ (ಉತ್ತರ ಪ್ರದೇಶ) – ಪೊಲೀಸರ ಮೇಲೆ ಹಲ್ಲೆ ನಡೆಸಿದ ಗೂಂಡಾನಿಗೆ ಪರಾರಿಯಾಗಲು ಅವಕಾಶ ನೀಡಿದ ಮಾಜಿ ಬಿಜೆಪಿ ಪದಾಧಿಕಾರಿ ನಾರಾಯಣ ಸಿಂಗ್ ಭದೌರಿಯಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ನಂತರ ಬಿಜೆಪಿ ಅವರನ್ನು ದಕ್ಷಿಣ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದೆ. ಈ ಪ್ರಕರಣದಲ್ಲಿ ಇತರ ನಾಲ್ವರನ್ನು ಸಹ ಬಂಧಿಸಲಾಗಿದೆ.