ಗುಜರಾತ್‍ನಲ್ಲಿ ‘ಗೋ ಸಂಶೋಧನಾ ಕೇಂದ್ರ’ದ ಸ್ಥಾಪನೆ !

ಹಸುವಿನ ಹಾಲು, ಸಗಣಿ ಮತ್ತು ಗೋಮೂತ್ರದ ಬಗ್ಗೆ ಸಂಶೋಧನೆ ನಡೆಸಲಾಗುವುದು

ಕರ್ಣಾವತಿ (ಗುಜರಾತ) – ‘ಗುಜರಾತ ಟೆಕ್ನೊಲೊಜಿಕಲ ಯುನಿವರ್ಸಿಟಿ’ (‘ಜಿ.ಟಿ.ಯು.’ವು) `ಗೋ ಸಂಶೋಧನಾ ಕೇಂದ್ರ’ವನ್ನು ಪ್ರಾರಂಭಿಸಿದೆ. ಹಸುವಿನ ಹಾಲು, ಗೋಮೂತ್ರ ಮತ್ತು ಸಗಣಿ ಸಾಂಪ್ರದಾಯಿಕ ಬಳಕೆಯನ್ನು ಉತ್ತೇಜಿಸಲು ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ರಾಷ್ಟ್ರೀಯ ಕಾಮಧೇನು ಆಯೋಗದಡಿಯಲ್ಲಿ ಸ್ಥಾಪಿಸಲಾದ ‘ಕಾಮಧೇನು ಸಂಸ್ಥೆ’ ಈ ಕೇಂದ್ರದ ಮುಂದಾಳತ್ವವನ್ನು ವಹಿಸಿಕೊಂಡಿದೆ. ಸಂಶೋಧನಾ ಕೇಂದ್ರವನ್ನು ರಾಜ್ಯಪಾಲಆಚಾರ್ಯ ದೇವವ್ರತ ಇವರ ಹಸ್ತದಿಂದ ಉದ್ಘಾಟಿಸಲಾಯಿತು.

೧. ಜಿ.ಟಿ.ಯು.ನ ಉಪಕುಲಪತಿ ನವೀನ್ ಶೇಠರು ಮಾತನಾಡುತ್ತಾ, ‘ಪ್ರಸ್ತುತ ಹಸುಗಳ ಬಗ್ಗೆ ಕೇವಲ ಭಾವನಾತ್ಮಕವಾಗಿ ಚರ್ಚೆ ನಡೆಯುತ್ತಿದೆ. ಹಸುಗಳ ಬಗ್ಗೆ ಇನ್ನೂ ಹೆಚ್ಚಿನ ವೈಜ್ಞಾನಿಕ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿಲ್ಲ. ನಾವು ವೈಜ್ಞಾನಿಕ ಸಂಶೋಧನೆ ಮತ್ತು ನಾವೀನ್ಯತೆಗಳ ಮೂಲಕ ಸಾಂಪ್ರದಾಯಿಕ ಜ್ಞಾನವನ್ನು ಬೆಳಕಿಗೆ ತರಲು ಪ್ರಯತ್ನಿಸುತ್ತಿದ್ದೇವೆ, ಎಂದರು

೨. ಜಿ.ಟಿ.ಯು.ನ ಪ್ರಾ. ಡಾ. ಸಂಜಯ ಚೌಹಾಣ ಇವರು ಮಾತನಾಡಿ, ಸ್ಥಳೀಯ ಹಸುಗಳ ಗೋಮೂತ್ರದಿಂದ ಔಷಧಿಗಳು ಮತ್ತು ಗೊಬ್ಬರ ತಯಾರಿಸುವ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ. ‘ಹಸುಗಳಿಂದ ವೈಜ್ಞಾನಿಕವಾಗಿ ಪಡೆಯಬಹುದಾದ ಎಲ್ಲ ವಸ್ತುಗಳನ್ನು ಸಂಶೋಧಿಸುವುದು’ ಈ ಸಂಶೋಧನಾ ಕೇಂದ್ರದ ಉದ್ದೇಶವಾಗಿದೆ. ಗೋಮೂತ್ರದಲ್ಲಿ ಹಲವು ಬಗೆಯ ಬ್ಯಾಕ್ಟೀರಿಯಾಗಳಿವೆ. ಸಂಶೋಧನೆ ಮತ್ತು ಆಧುನಿಕ ಕಲ್ಪನೆಗಳ ಮೂಲಕ, ಈ ಬ್ಯಾಕ್ಟೀರಿಯಾವನ್ನು ಅನೇಕ ಚಿಕಿತ್ಸೆಗಳಲ್ಲಿ ಬಳಸಬಹುದು. ಗೋಮೂತ್ರವು ಔಷಧೀಯ ಮೌಲ್ಯವನ್ನು ಹೊಂದಿದೆ ಮತ್ತು ಇದನ್ನು ಮಣ್ಣಿನ ಪುನರುತ್ಪಾದನೆಯನ್ನು ಹೆಚ್ಚಿಸಲು ಇದನ್ನು ಬಳಸಬಹುದು ಎಂದು ಹೇಳಿದರು.