|
ತ್ರಿಶೂರ (ಕೇರಳ) – ಇಲ್ಲಿಯ ಪ್ರಸಿದ್ಧ ಗುರುವಾಯೂರ್ ದೇವಸ್ಥಾನದ ಆಡಳಿತ ಮಂಡಳಿ ಭಕ್ತರಿಗೆ ತುಳಸಿಯ ಪ್ರಸಾದ ನೀಡದಂತೆ ಹೇಳಿದೆ. ಭಕ್ತರು ತಂದ ತುಳಸಿ ಪೂಜೆಗೆ ಯೋಗ್ಯವಲ್ಲ ಮತ್ತು ಅದರಲ್ಲಿ ರಾಸಾಯನಿಕದ ಪ್ರಮಾಣ ಕೂಡ ಹೆಚ್ಚಾಗಿರುತ್ತದೆ. ಆದ್ದರಿಂದ ಅದನ್ನು ಅರ್ಪಿಸಬಾರದೆಂದು ಮಂಡಳಿ ಹೇಳಿದೆ. ದೇವಸ್ಥಾನದ ಆಡಳಿತ ಮಂಡಳಿಯಿಂದ ಭಕ್ತರಿಗೆ ದೇವಸ್ಥಾನಕ್ಕೆ ತುಳಸಿಯ ಬದಲು ಕಮಲದ ಹೂವು ತರಲು ಸಲಹೆ ನೀಡಿದೆ. ದೇವಸ್ಥಾನ ಮಂಡಳಿಯ ಈ ನಿರ್ಣಯದಿಂದ ವಿವಾದ ಸೃಷ್ಟಿಯಾಗಿದೆ. ಮಂಡಳಿ ನಮ್ಮ ಹಕ್ಕಿನ ಗಧಾ ಪ್ರಹಾರ ಮಾಡುತ್ತಿದೆ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮಂಡಳಿಯ ಮುಖ್ಯಸ್ಥ ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ನಾಯಕ ವಿ.ಕೆ. ವಿಜಯನ್ ಇದ್ದಾರೆ.
Devotees should not offer the Tulasi to Bhagwan Vishnu! – Guruvayur Temple Board
Why is the board not trying to provide a Tulasi free from chemicals ? It would be inappropriate to make such an opposition in the name of chemicals alone. Hindus should oppose this in a legal manner… pic.twitter.com/c52q65B3vJ
— Sanatan Prabhat (@SanatanPrabhat) November 5, 2024
೧. ದೇವಸ್ಥಾನ ಮಂಡಳಿಯು ಇತ್ತೀಚಿಗೆ ಭಕ್ತರಿಗೆ ಹೊರಗಿನಿಂದ ತುಳಸಿ ಖರೀದಿಸಿ ದೇವಸ್ಥಾನಕ್ಕೆ ತರುವ ಸಲಹೆ ನೀಡಿತ್ತು. ಭಕ್ತರು ಈ ತುಳಸಿ ಭಗವಂತ ಗುರುವಾಯೂರ್ (ಭಗವಂತ ವಿಷ್ಣುವಿನ ರೂಪ) ಗೆ ಅರ್ಪಿಸುತ್ತಿದ್ದರು. ತಲತಲಾಂತರದಿಂದ ಗುರುವಾಯೂರ್ ದೇವಸ್ಥಾನದಲ್ಲಿ ಪೂಜೆಗೆ ಹೂವು ಅಥವಾ ಹಾರ ತರುವ ಕಾರ್ಯ ಕೆಲವು ಕುಟುಂಬಗಳು ಮಾಡುತ್ತಿರುವದಾಗಿ ಹೇಳಲಾಗುತ್ತದೆ.
೨. ‘ಹೊರಗಿನಿಂದ ತಂದಿರುವ ತುಳಸಿಯ ಹಾರ ಅರ್ಪಿಸುವುದಕ್ಕಾಗಿ ಅಥವಾ ದೇವರ ಪೂಜೆಗಾಗಿ ಉಪಯೋಗಿಸುವುದಿಲ್ಲ. ಈ ತುಳಸಿ ಒಂದು ಖಾಸಗಿ ಕಂಪನಿಗೆ ನೀಡುತ್ತಾರೆ. ಅದರಿಂದ ಅವರು ಇತರ ಉತ್ಪಾದನೆಯನ್ನು ತಯಾರಿಸುತ್ತಾರೆ. ಹೊರಗಿನಿಂದ ತಂದಿರುವ ತುಳಸಿಯಲ್ಲಿ ಕೀಟನಾಶಕದ ಪ್ರಮಾಣ ಹೆಚ್ಚಾಗಿದ್ದರಿಂದ ಭಕ್ತರು ಅದನ್ನು ತರುವುದನ್ನು ತಪ್ಪಿಸಬೇಕೆಂದು ಮಂಡಳಿ ಹೇಳಿದೆ.
೩. ದೇವಸ್ಥಾನದಲ್ಲಿನ ಕೆಲವು ಸಿಬ್ಬಂದಿಗಳು ಪ್ರಸಾರ ಮಾಧ್ಯಮದೊಂದಿಗೆ ಮಾತನಾಡುವಾಗ, ಹೊರಗಿನಿಂದ ತಂದಿರುವ ತುಳಸಿಯಿಂದ ನಮ್ಮ ಕೈಗಳಿಗೆ ತುರಿಕೆ ಉಂಟಾಗುತ್ತದೆ ಮತ್ತು ಅದರಿಂದ ಅಲರ್ಜಿ ಕೂಡ ಆಗುತ್ತದೆ ಎಂದು ಹೇಳಿದರು.
೪. ಕ್ಷೇತ್ರ ರಕ್ಷಾ ಸಮಿತಿಯ ಕಾರ್ಯದರ್ಶಿ ಎಂ. ಬಿಜೇಶ ಇವರು, ಒಂದುವೇಳೆ ಮಂಡಳಿಯು ವಾಹನಗಳು ಮತ್ತು ಚಿನ್ನದ ಆಭರಣಗಳಂತಹ ವಸ್ತುಗಳನ್ನು ಸ್ವೀಕರಿಸಬಹುದಾದರೆ, ಪೂಜೆಗಾಗಿ ಉಪಯೋಗಿಸಲು ಅವುಗಳು ಸಾಧ್ಯವಾಗುವುದಿಲ್ಲ, ಹಾಗಾದರೆ ಅವರು ಭಕ್ತರಿಗೆ ಇಷ್ಟವಾಗುವಂತಹ ವಸ್ತುವನ್ನು ದೇವರಿಗೆ ಅರ್ಪಿಸಿವುದರಿಂದ ತಡೆಯಬಾರದು. ತುಳಸಿ ಅರ್ಪಣೆ ಮಾಡಲು ನಿರಾಕರಿಸುವ ಬದಲು ಅದರಿಂದ ಯಾವುದೋ ಒಳ್ಳೆಯ ಉಪಯೋಗ ಏಕೆ ಹುಡುಕಬಾರದು ? ಎಂದು ಕೇಳಿದರು.
೫. ಈ ಹಿಂದೆ ಮೇ ೨೦೨೪ ರಲ್ಲಿ ಕೇರಳದ ದೇವಸ್ಥಾನದಲ್ಲಿ ಕಣೆಗಲ ಹೂವನ್ನೂ ಕೂಡ ನಿಷೇಧ ಹೇರಲಾಗಿತ್ತು. ಈ ಹೂವಿನಿಂದ ೨೪ ವರ್ಷದ ನರ್ಸ್‌ನ ಮೃತ್ಯು ಆಗಿತ್ತು. ಅದರ ನಂತರ ೨ ದೊಡ್ಡ ದೇವಸ್ಥಾನ ಮಂಡಳಿಗಳಿಂದ ದೇವಸ್ಥಾನದಲ್ಲಿ ಈ ಹೂಗಳನ್ನು ನಿಷೇಧಿಸಲಾಗಿತ್ತು.
೬. ಗುರುವಾಯೂರ್ ದೇವಸ್ಥಾನ ೧೪ ನೆಯ ಶತಮಾನದಲ್ಲಿ ಕಟ್ಟಲಾಗಿದೆ ಎಂದು ಹೇಳಲಾಗುತ್ತಿದೆ. ದೇವಸ್ಥಾನದಲ್ಲಿ ಭಗವಂತ ವಿಷ್ಣುವಿನ ಚತುರ್ಭುಜ ಮೂರ್ತಿ ಸ್ಥಾಪಿತವಾಗಿದೆ. ಈ ರೂಪಕ್ಕೆ ‘ಗುರುವಾಯೂರ್’ ಎನ್ನುತ್ತಾರೆ.
ಸಂಪಾದಕೀಯ ನಿಲುವು
|