ಈಗ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ನಡೆಸುವ ಹಿಂದುಗಳ ಮೇಲೆ ಪೊಲೀಸರು ಮತ್ತು ಸೈನಿಕರಿಂದ ದೌರ್ಜನ್ಯ

ಮುಸಲ್ಮಾನ ಅಂಗಡಿದಾರನು ಸನಾತನ ಧರ್ಮದ ಅವಮಾನ ಮಾಡಿರುವುದರಿಂದ ಹಿಂದೂಗಳು ಪ್ರತಿಭಟನೆ ನಡೆಸುತ್ತಿದ್ದರು !

ಚಿತಗಾವ (ಬಾಂಗ್ಲಾದೇಶ) – ಸನಾತನ ಧರ್ಮದ ಅವಮಾನ ಮಾಡಿರುವ ಮುಸಲ್ಮಾನನ ಅಂಗಡಿ ಎದುರಿಗೆ ಪ್ರತಿಭಟನೆ ನಡೆಸಿರುವ ಹಿಂದುಗಳ ಮೇಲೆ ಇಲ್ಲಿಯ ಹಜಾರಿ ಗೋಲಿ ಪ್ರದೇಶದಲ್ಲಿ ಪೊಲೀಸರು ಮತ್ತು ಸೈನಿಕರು ದಾಳಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಇಲ್ಲಿ ಹಿಂದೂಗಳ ಪರಿಶೀಲನೆ ನಡೆಸಲಾಯಿತು, ಹಾಗೂ ಅವರಿಗೆ ಥಳಿಸಲಾಯಿತು. ಪೊಲೀಸರು ೩೦ ಹಿಂದುಗಳನ್ನು ಬಂಧಿಸಿದ್ದಾರೆ. ಪೊಲೀಸರ ದಾಳಿಯಲ್ಲಿ ೫ ಹಿಂದುಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಿಂದುಗಳೇ ಅವರ ಮೇಲೆ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಮತ್ತು ರಕ್ಷಣಾ ವ್ಯವಸ್ಥೆ ದಾವೆ ಮಾಡುತ್ತಿದ್ದು ಅದರ ನಂತರ ಅವರು ಹಿಂದುಗಳ ಮೇಲೆ ಕ್ರಮ ಕೈಗೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ.

೧. ಉಸ್ಮಾನ್ ಮುಲ್ಲಾ ಮುಸಲ್ಮಾನ ಅಂಗಡಿದಾರನು ನವೆಂಬರ್ ೫ ರಂದು ಸಂಜೆ ಸನಾತನ ಧರ್ಮದ ಕುರಿತು ಅವಮಾನವಾಗುವಂತಹ ಟೀಕೆ ಮಾಡಿದ್ದನು. ಆ ಸಮಯದಲ್ಲಿ ಅವನು, ‘ಹಿಂದುಗಳ ‘ಇಸ್ಕಾನ್’ ಈ ಆಧ್ಯಾತ್ಮಿಕ ಸಂಸ್ಥೆ ಅನಾಗರೀಕವಾಗಿದೆ. ಅದನ್ನು ಬಹಿಷ್ಕರಿಸಬೇಕು. ‘ಇದರಿಂದ ಅವನ ಅಂಗಡಿಯ ಹೊರಗೆ ಹಿಂದುಗಳು ಪ್ರತಿಭಟನೆ ನಡೆಸುವಾಗ ಅವನ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಯಿತು. ಅವನಿಗೆ ಹಿಂದುಗಳ ಕ್ಷಮೆಯಾಚಿಸಲು ಅನಿವಾರ್ಯಗೊಳಿಸಲಾಗಿತ್ತು ಎಂದು ಅಲ್ಲಿಯ ಓರ್ವ ಹಿಂದೂ ನಾಯಕರು ‘ಸನಾತನ ಪ್ರಭಾತ’ಗೆ ಮಾಹಿತಿ ನೀಡಿದರು.

೨. ಆ ಸಮಯದಲ್ಲಿ ಉಸ್ಮಾನ ಮೇಲೆ ಕ್ರಮ ಕೈಗೊಳ್ಳುವ ಬದಲು ಪೊಲೀಸರು ಮತ್ತು ಇತರ ರಕ್ಷಣಾ ವ್ಯವಸ್ಥೆಯವರು ಹಿಂದುಗಳನ್ನೇ ಗುರಿ ಮಾಡಲು ಆರಂಭಿಸಿದರು. ಅವರು ಉಸ್ಮಾನನಿಗೆ ಸುರಕ್ಷಿತ ಸ್ಥಳಕ್ಕೆ ಸಾಗಿಸಿ ಹಿಂದೂಗಳ ಹುಡುಕಾಟ ಆರಂಭಿಸಿದರು.

೩. ಚಿತಗಾವದಲ್ಲಿನ ವಿಡಿಯೋದಲ್ಲಿ ಪೋಲೀಸರು ಒಂದು ಕಿರಿದಾದ ಪ್ರದೇಶದಲ್ಲಿ ಹಿಂದುಗಳನ್ನು ಬಂಧಿಸುವುದು ಕಾಣುತ್ತಿದೆ. ಪೊಲೀಸರು ಸಿಸಿಟಿವಿಗಳು ಓಡೆದಿರುವುದು ವಿಡಿಯೋದಲ್ಲಿ ಕಾಣುತ್ತಿದೆ. ಈ ವಿಡಿಯೋದಲ್ಲಿ ಒಂದು ಮನೆಯಲ್ಲಿ ಪೊಲೀಸರು ಲಾಠಿಯಿಂದ ಹೊಡೆಯುವುದು ಕಾಣುತ್ತಿದೆ. ಪೊಲೀಸರು ೩೦ ಹಿಂದೂಗಳನ್ನು ಬಂಧಿಸಿದ್ದಾರೆ. ಈ ಸಮಯದಲ್ಲಿ ಸೈನ್ಯದ ಪಡೆಗಳು ಕೂಡ ಉಪಸ್ಥಿತ ಇದ್ದವು ಮತ್ತು ಅವರು ಕೂಡ ಹಿಂದುಗಳಿಗೆ ಹೊಡೆದಿದ್ದಾರೆ.

೪. ಚಿತಗಾವದಲ್ಲಿ ಹಿಂದೂಗಳು ಅವರ ಮೇಲಿನ ದೌರ್ಜನ್ಯದ ವಿರುದ್ಧ ನಿರಂತರ ಪ್ರತಿಭಟನೆ ಮಾಡುತ್ತಿದ್ದಾರೆ. ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತಿರುವ ಹಿಂದುಗಳ ಮೇಲೆ ಬಾಂಗ್ಲಾದೇಶದ ಪೊಲೀಸರು ಇತ್ತೀಚಿಗೆ ದೇಶದ್ರೋಹದ ದೂರನ್ನು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಹಿಂದುಗಳನ್ನು ಬಂಧಿಸಲಾಗಿತ್ತು ಹಾಗೂ ೧೯ ಜನರ ವಿರುದ್ಧ ದೂರು ದಾಖಲಿಸಲಾಗಿತ್ತು.

ಬಾಂಗ್ಲಾದೇಶಿ ಸೈನ್ಯವು ಹಿಂದೂ ಅಂಗಡಿದಾರರಿಂದ ಚಿನ್ನ, ಹಣ ಮುಂತಾದವು ಲೂಟಿ ಮಾಡಿರುವ ಸಂದೇಹ !

ಈ ಸಮಯದಲ್ಲಿ ಬಾಂಗ್ಲಾದೇಶದ ಸೈನ್ಯವು ಚಿತಗಾವದಲ್ಲಿನ ಹಿಂದೂ ಬಹುಸಂಖ್ಯಾತ ಪ್ರದೇಶದ ಮೇಲೆ ದಾಳಿ ನಡೆಸಿದೆ. ಈ ಪ್ರದೇಶದಲ್ಲಿ ಹಿಂದುಗಳ ಆಭರಣ, ಬಟ್ಟೆ ಬರೆ ಮುಂತಾದ ಅಂಗಡಿಗಳು ಇವೆ. ಸೈನಿಕರ ಕಾರ್ಯಾಚರಣೆಯಿಂದ ಹಿಂದೂ ಅಂಗಡಿದಾರರು ಮತ್ತು ಜನರು ದಿಕ್ಕಾಪಾಲಾಗಿ ಓಡಿದ್ದಾರೆ, ಆ ಸಮಯದಲ್ಲಿ ಸೈನಿಕರು ಅಂಗಡಿಯಿಂದ ಚಿನ್ನ ಮತ್ತು ಹಣ ಲೂಟಿ ಮಾಡಿದ್ದಾರೆ, ಎಂದೂ ಕೂಡ ಆರೋಪಿಸಲಾಗುತ್ತಿದೆ, ಚಿತಗಾವದಲ್ಲಿನ ಹಿಂದೂ ನಾಯಕರು ‘ಸನಾತನ ಪ್ರಭಾತಗೆ’ ಈ ಮಾಹಿತಿ ನೀಡಿದ್ದಾರೆ.

 

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಮತಂಧ ಮುಸಲ್ಮಾನರಷ್ಟೇ ಅಲ್ಲದೆ, ಈಗ ಮುಸಲ್ಮಾನ ಪೊಲೀಸರು ಮತ್ತು ಮುಸಲ್ಮಾನ ಸೈನಿಕರು ಕೂಡ ಹಿಂದುಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಇದರಿಂದ ಹಿಂದುಗಳ ವಿನಾಶ ಖಚಿತವಾಗಿದೆ. ಈ ಪರಿಸ್ಥಿತಿ ಬದಲಾಯಿಸಲು ಹಿಂದುಗಳ ರಕ್ಷಣೆ ಮಾಡುವುದಕ್ಕೆ ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆ ಮಾಡುವುದು ಅತ್ಯಾವಶ್ಯಕವಾಗಿದೆ !