Terror Supporters Houses Demolish: ಭಯೋತ್ಪಾದಕರಿಗೆ ಆಶ್ರಯ ನೀಡುವವರ ಮನೆಗಳು ನೆಲಸಮವಾಗುವುದು !

ಜಮ್ಮು ಕಾಶ್ಮೀರದ ಉಪರಾಜ್ಯಪಾಲ ಮನೋಜ ಸಿಂಹ ಇವರಿಂದ ಎಚ್ಚರಿಕೆ

ಜಮ್ಮು-ಕಾಶ್ಮೀರದ ಉಪರಾಜ್ಯಪಾಲ ಮನೋಜ ಸಿಂಹ

ಬಾರಾಮುಲ್ಲಾ (ಜಮ್ಮು ಕಾಶ್ಮೀರ) – ಭಯೋತ್ಪಾದಕರಿಗೆ ಆಶ್ರಯ ನೀಡುವವರ ಮನೆಗಳನ್ನು ನೆಲೆಸಮ ಮಾಡಲಾಗುವುದು, ಎಂದು ಜಮ್ಮು-ಕಾಶ್ಮೀರದ ಉಪರಾಜ್ಯಪಾಲ ಮನೋಜ ಸಿಂಹ ಇವರು ಎಚ್ಚರಿಕೆ ನೀಡಿದ್ದಾರೆ. ಅದರ ನಂತರ ‘ಜಮ್ಮು ಕಾಶ್ಮೀರದಲ್ಲಿ ಕೂಡ ಬುಲ್ಡೋಜರ್ ಕಾರ್ಯಾಚರಣೆಯ ಸಿದ್ಧತೆ ನಡೆಯುತ್ತಿದೆಯೇ ? ಎಂದು ಚರ್ಚೆ ಆರಂಭವಾಗಿದೆ.

ಬಾರಾಮುಲ್ಲಾ ಜಿಲ್ಲೆಯಲ್ಲಿ ಆಯೋಜಿಸಿರುವ ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ ಉಪರಾಜ್ಯಪಾಲ ಸಿಂಹ ಇವರು,

೧. ನಾನು ಭದ್ರತಾ ಪಡೆಗೆ, ಯಾವುದೇ ನಿರಪರಾಧಿಗಳಿಗೆ ನೋವು ಆಗದಂತೆ ನೋಡಿಕೊಳ್ಳಿ ಎಂದು ಆದೇಶ ನೀಡಿದ್ದೇನೆ; ಆದರೆ ತಪ್ಪಿತಸ್ಥರಿಗೆ ಬಿಡಲಾಗುವುದಿಲ್ಲ. ಯಾರಾದರೂ ಭಯೋತ್ಪಾದಕರಿಗೆ ಆಶ್ರಯ ನೀಡಿದರೆ, ಅವರ ಮನೆಗಳನ್ನು ನೆಲೆಸಮ ಮಾಡಲಾಗುವುದು ಇದರಲ್ಲಿ ಯಾವುದೇ ರಾಜಿ ಮಾದಿಕೊಳ್ಳಲಾಗುವುದಿಲ್ಲ. ಇದು ದಬ್ಬಾಳಿಕೆಯಾಗಿರದೇ ನ್ಯಾಯದ ಬೇಡಿಕೆ ಆಗಿದೆ.

೨. ಕೆಲವರು ಭಯೋತ್ಪಾದಕರಿಗೆ ಆಶ್ರಯ ನೀಡುವವರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಿಕೆ ನೀಡುತ್ತಾರೆ. ಆದರೆ ಇದು ದೌರ್ಜನ್ಯವಲ್ಲ, ಇದು ನ್ಯಾಯದ ಬೇಡಿಕೆ ಆಗಿದೆ ಮತ್ತು ಇದೇ ರೀತಿ ನ್ಯಾಯ ಶಾಶ್ವತ ಇರುವುದು.

೩. ಜನರು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದರೆ ಮತ್ತು ‘ನಾವು ಅವರ ಮೇಲೆ ಅನ್ಯಾಯ ಮಾಡುತ್ತಿದ್ದೇವೆ’ ಎಂದು ಹೀಗೆ ಹೇಳುತ್ತಿದ್ದರೆ, ಅದು ಯೋಗ್ಯವಲ್ಲ.

೪. ಈ ಪ್ರದೇಶದಲ್ಲಿನ ಸಂಪರ್ಕ ಸುಧಾರಣೆಗಾಗಿ ಕಾರ್ಯನಿರ್ವಹಿಸುವವರನ್ನು ಕೊಲ್ಲುವ ಅಧಿಕಾರ ಯಾರಿಗಾದರೂ ಇದೆಯೇ ? ಹಾಗಾದರೆ ಜನರು ಇಂತಹ ವ್ಯಕ್ತಿಗಳ ವಿರುದ್ಧ ನಿಲ್ಲಲಿಲ್ಲ ಬದಲಾಗಿ ಈ ಪರಿಸ್ಥಿತಿ ಎಂದಿಗೂ ಸುಧಾರಿಸುವುದಿಲ್ಲ. ಕೇವಲ ಔಪಚಾರಿಕತೆಗಾಗಿ ಹೇಳಿಕೆ ನೀಡುವುದು ಅದಕ್ಕಿಂತಲೂ (ಭಯೋತ್ಪಾದಕರ ಗಿಂತಲೂ) ಕೆಟ್ಟದ್ದಾಗಿದೆ, ಎಂದು ನನ್ನ ಅಭಿಪ್ರಾಯವಿದೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

ಕೇವಲ ಮನೆ ನೆಲಸಮ ಮಾಡಿದರೆ ಉಪಯೋಗವಿಲ್ಲ ಇಂತಹ ದೇಶದ್ರೋಹಿಗಳಿಗೆ ತ್ವರಿತ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ನಡುರಸ್ತೆಯಲ್ಲಿ ಗಲ್ಲು ಶಿಕ್ಷೆ ವಿಧಿಸಬೇಕು, ಆಗ ಮಾತ್ರ ಕಾಶ್ಮೀರದಲ್ಲಿನ ಜಿಹಾದಿ ಭಯೋತ್ಪಾದನೆ ಬೇಗನೆ ನಾಶವಾಗುವುದು !