ಚೀನಾದ ಗಡಿಯಲ್ಲಿ ೫೦ ಸಾವಿರ ಸೈನಿಕರನ್ನು ನೇಮಿಸಿದ ಭಾರತ !
ಲೇಹ ನ ಭಾರತ ಚೀನಾ ಗಡಿಯಲ್ಲಿ ಸುರಕ್ಷಾ ಪರಿಸ್ಥಿತಿಯ ವರದಿ ಪಡೆದು ಸೈನ್ಯ ದಳದ ಪ್ರಮುಖ ಜನರಲ ಮನೋಜ್ ಪಾಂಡೆ ಇವರು ದೊಡ್ಡ ನಿರ್ಣಯ ತೆಗೆದುಕೊಂಡಿದ್ದಾರೆ. ಅವರು ಅಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿದ್ದಾರೆ.
ಲೇಹ ನ ಭಾರತ ಚೀನಾ ಗಡಿಯಲ್ಲಿ ಸುರಕ್ಷಾ ಪರಿಸ್ಥಿತಿಯ ವರದಿ ಪಡೆದು ಸೈನ್ಯ ದಳದ ಪ್ರಮುಖ ಜನರಲ ಮನೋಜ್ ಪಾಂಡೆ ಇವರು ದೊಡ್ಡ ನಿರ್ಣಯ ತೆಗೆದುಕೊಂಡಿದ್ದಾರೆ. ಅವರು ಅಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿದ್ದಾರೆ.
ಕಾಶ್ಮೀರದಲ್ಲಿ ವಾಸಿಸುವ ಕಾಶ್ಮೀರಿ ಹಿಂದೂಗಳಿಗೆ ಲಷ್ಕರ್ ಎ ಇಸ್ಲಾಂ ಹೆಸರಿನ ಜಿಹಾದಿ ಉಗ್ರರ ಸಂಘಟನೆ ಕಾಶ್ಮೀರ ಬಿಟ್ಟುಬಿಡಿ ಇಲ್ಲವಾದರೆ ಸಾಯಲು ಸಿದ್ಧರಾಗಿ, ಎಂದು ಪತ್ರದ ಮೂಲಕ ಬೆದರಿಕೆ ಒಡ್ಡಿದ್ದಾರೆ. ಪುಲ್ವಾಮಾ ಜಿಲ್ಲೆಯಲ್ಲಿನ ಪುನರ್ವಸತಿ ಛಾವಣಿಯಲ್ಲಿರುವ ಕಾಶ್ಮೀರಿ ಹಿಂದೂಗಳಿಗೆ ಈ ಪತ್ರ ದೊರೆತಿದೆ.
ಸ್ಥಳೀಯ ಜ್ಞಾನವ್ಯಾಪಿ ಮಸೀದಿಯ ಎರಡನೇ ದಿನದ ಪರಿಶೀಲನೆಯ ಕೆಲಸ ಪೂರ್ಣವಾಗಿದೆ. ಎರಡು ದಿನದಲ್ಲಿ ಶೇಕಡ ೮೦ ಪರಿಶೀಲನೆ ಮತ್ತು ಚಿತ್ರೀಕರಣ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ಮೇ ೧೬ ರಂದು ಒಂದರಿಂದ ಒಂದುವರೆ ಗಂಟೆ ಇನ್ನೂ ಹೆಚ್ಚಿನ ಪರಿಶೀಲನೆ ನಡೆಯುವುದು.
ತ್ರಿಪುರಾದ ಭಾಜಪಾ ಸರಕಾರದ ಮುಖ್ಯಮಂತ್ರಿ ವಿಪ್ಲವ ಕುಮಾರ್ ದೇವ ಇವರು ರಾಜೀನಾಮೆ ನೀಡಿದ ನಂತರ ತ್ರಿಪುರಾದಲ್ಲಿ ಭಾಜಪದ ಪ್ರದೇಶಾಧ್ಯಾಕ್ಷ ಮಾಣಿಕ ಸಾಹಾ ಇವರನ್ನು ಮುಖ್ಯಮಂತ್ರಿಯೆಂದು ಘೋಷಿಸಲಾಯಿತು.
ಇಲ್ಲಿಯ ಶ್ರೀವೈಷ್ಣೋ ದೇವಿಯ ದರ್ಶನಕ್ಕೆ ತೆರಳಿದ ಶ್ರದ್ಧಾಳುಗಳ ಬಸ್ಸಿಗೆ ಮೇ ೨೩ ರಂದು ಅಚಾನಕ್ಕಾಗಿ ಬೆಂಕಿ ಹೊತ್ತಿಕೊಂಡಿತು. ಈ ಬಸ್ಸು ಕಟರಾದಿಂದ ಜಮ್ಮು ಕಡೆಗೆ ಹೋಗುತ್ತಿತ್ತು. ಅಗ್ನಿ ಅನಾಹುತದಲ್ಲಿ ೪ ಜನರ ಮೃತಪಟ್ಟಿದ್ದಾರೆ. ಹಾಗೂ ೨೦ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಜಸ್ಥಾನದ ಮಂತ್ರಿ ಮಹೇಶ ಜೋಶಿಯವರ ಮಗ ರೋಹಿತ ಜೋಶಿ ಇವನ ಮೇಲೆ ಓರ್ವ ೨೩ ವರ್ಷದ ಯುವತಿಗೆ ಮದುವೆಯ ಆಮಿಷವೊಡ್ಡಿ ಬಲಾತ್ಕಾರ ಮಾಡಿದ ಪ್ರಕರಣ ದೆಹಲಿಯಲ್ಲಿ ದಾಖಲಾಗಿದೆ.
ಕೇಂದ್ರ ಸರಕಾರದ ಗೃಹ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಪಾಕಿಸ್ತಾನ ಬೆಂಬಲಿತ ಉಗ್ರವಾದದಿಂದ ಕಾಶ್ಮೀರದ ೬೪ ಸಾವಿರ ೮೨೭ ಕಾಶ್ಮೀರಿ ಹಿಂದೂ ಕುಟುಂಬಗಳು ೧೯೯೦ ರ ದಶಕದಲ್ಲಿ ಕಾಶ್ಮೀರ ತೊರೆದು ಜಮ್ಮು, ದೆಹಲಿ ಮತ್ತು ದೇಶದ ಇತರೆಡೆ ಪಲಾಯನ ಮಾಡಬೇಕಾಯಿತು.
ಇಲ್ಲಿನ ಜ್ಞಾನವಾಪಿ ಮಸೀದಿಯ ಸಮೀಕ್ಷೆಯು ಮೇ ೧೪ರಂದು ಬೆಳಿಗ್ಗೆ ೮ ರಿಂದ ಮದ್ಯಾಹ್ನ ೧೨ರ ವರೆಗೆ ನಡೆಸಲಾಯಿತು. ಈ ಸಮೀಕ್ಷೆಯು ಶೇ. ೪೦ರಷ್ಟು ಪೂರ್ಣವಾಗಿದೆ. ಉಳಿದ ಸಮೀಕ್ಷೆಯು ಮೇ ೧೫ರಂದು ಪುನಃ ನಡೆಯಲಿದೆ. ಈ ಸಮೀಕ್ಷೆಯ ವರದಿಯನ್ನು ಮೇ ೧೭ರಂದು ನ್ಯಾಯಾಲಯದಲ್ಲಿ ಸಾದರಪಡಿಸಬೇಕಿದೆ.
ಹಿಂದಿ ಭಾಷೆಗಿಂತ ಇಂಗ್ಲಿಷ್ ಭಾಷೆಗೆ ಹೆಚ್ಚು ಬೆಲೆಯಿದೆ, ಆದ್ದರಿಂದ ಹಿಂದಿ ಇದು ಐಚ್ಛಿಕವಾಗಬೇಕು. ಆದರೆ ಅನಿವಾರ್ಯ ಆಗಬಾರದು. ಯಾರು ಹಿಂದಿ ಮಾತನಾಡುತ್ತಾರೆ, ಅವರು ಕ್ಷುಲ್ಲಕ ಕೆಲಸದಲ್ಲಿದ್ದಾರೆ (ನೌಕರಿ). ಹಿಂದಿ ಮಾತನಾಡುವ ಜನರು ನಮ್ಮ ಕಡೆ ಪಾನಿಪುರಿ ಮಾರುತ್ತಾರೆ, ಎಂಬ ಸಂತಾಪಜನಕ ಹೇಳಿಕೆ ತಮಿಳುನಾಡಿನ ಶಿಕ್ಷಣ ಸಚಿವರು ಪೋನಮುಡಿ ನೀಡಿದರು.
ಜಿಹಾದಿ ಉಗ್ರಗಾಮಿಗಳು ಕಾಶ್ಮೀರದ ಬಡಗಾವ ಜಿಲ್ಲೆಯಲ್ಲಿನ ಚದೂರಾದಲ್ಲಿ ರಾಹುಲ ಭಟ್ಟ ಎಂಬ ಹಿಂದೂ ಸರಕಾರಿ ನೌಕರನನ್ನು ತಹಸೀಲುದಾರರ ಕಛೇರಿಗೆ ನುಗ್ಗಿ ಕೊಲೆ ಮಾಡಿದ ನಂತರ ಅಲ್ಲಿ ಅಸಂತೋಷ ನಿರ್ಮಾಣವಾಗಿದೆ.