ತ್ರಿಪುರಾದ ಹೊಸ ಮುಖ್ಯಮಂತ್ರಿಯಾಗಿ ಮಾಣಿಕ ಸಾಹಾ ಆಯ್ಕೆ

ಅಗರ್ತಲಾ (ತ್ರಿಪುರ) : ತ್ರಿಪುರಾದ ಭಾಜಪಾ ಸರಕಾರದ ಮುಖ್ಯಮಂತ್ರಿ ವಿಪ್ಲವ ಕುಮಾರ್ ದೇವ ಇವರು ರಾಜೀನಾಮೆ ನೀಡಿದ ನಂತರ ತ್ರಿಪುರಾದಲ್ಲಿ ಭಾಜಪದ ಪ್ರದೇಶಾಧ್ಯಾಕ್ಷ ಮಾಣಿಕ ಸಾಹಾ ಇವರನ್ನು ಮುಖ್ಯಮಂತ್ರಿಯೆಂದು ಘೋಷಿಸಲಾಯಿತು. ಮೇ ೧೫ ರಂದು ಮುಖ್ಯಮಂತ್ರಿ ಪದವಿಯ ಪ್ರಮಾಣವಚನ ಕಾರ್ಯಕ್ರಮ ನಡೆಯಿತು. ಮಾಣಿಕ ಸಾಹಾ ಇವರು ಭಾಜಪದ ರಾಜ್ಯಸಭೆಯ ಸಂಸದರಾಗಿದ್ದಾರೆ. ೬ ವರ್ಷಗಳ ಹಿಂದೆ ಮಾಣಿಕ ಸಾಹ ಇವರು ಕಾಂಗ್ರೆಸ್ ಬಿಟ್ಟು ಭಾಜಪ ಸೇರಿದರು. ತ್ರಿಪುರಾ ವಿಧಾನಸಭೆಯ ಚುನಾವಣೆ ೨೦೨೩ ರಲ್ಲಿ ನಡೆಯುವುದು, ಮಾಣಿಕ ಸಾಹಾ ಇವರೇ ಮುಂಬರುವ ಚುನಾವಣೆಯಲ್ಲಿ ಪಕ್ಷದ ನಾಯಕರು ಹೇಗೆಂದು ಭಾಜಪಾದ ಸ್ಥಳೀಯ ನಾಯಕರು ಹೇಳಿದರು.

ಮಾಣಿಕ ಸಾಹಾ ಭಾಜಪದ ನಾಲ್ಕನೆಯ ಮುಖ್ಯಮಂತ್ರಿ ಆಗಿದ್ದರೆ. ಕಾಂಗ್ರೆಸ್ಸಿನಿಂದ ರಾಜಕೀಯ ಜೀವನ ಪ್ರಾರಂಭಿಸಿದವರು. ಅಸ್ಸಾಮಿನ ಹಿಮಂತ ಬಿಸ್ವ ಸರ್ಮಾ, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖಾಂಡು, ಮಣಿಪುರದ ಮುಖ್ಯಮಂತ್ರಿ ಎನ್ ಬೀರೆನ ಸಿಂಹ ಇವರು ಈಶಾನ್ಯದ ೩ ರಾಜ್ಯಗಳ ಮುಖ್ಯಮಂತ್ರಿಗಳು, ಮೊದಲು ಕಾಂಗ್ರೆಸ್ಸಿನಲ್ಲಿದ್ದ ನಾಯಕರು. ಈ ಮೂವರೂ ಕಾಂಗ್ರೆಸ್ನಿಂದ ಭಾಜಪಕ್ಕೆ ಸೇರಿದವರು.