ಜಮ್ಮು-ಕಾಶ್ಮೀರ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಭಯೋತ್ಪಾದಕ ಚಟುವಟಿಕೆ ತಡೆಯುವುದಕ್ಕಾಗಿ ಸೈನಿಕರು ಇಲ್ಲದಿರುವುದು ಬಹಿರಂಗ !
ನವ ದೆಹಲಿ – ಲೇಹ ನ ಭಾರತ ಚೀನಾ ಗಡಿಯಲ್ಲಿ ಸುರಕ್ಷಾ ಪರಿಸ್ಥಿತಿಯ ವರದಿ ಪಡೆದು ಸೈನ್ಯ ದಳದ ಪ್ರಮುಖ ಜನರಲ ಮನೋಜ್ ಪಾಂಡೆ ಇವರು ದೊಡ್ಡ ನಿರ್ಣಯ ತೆಗೆದುಕೊಂಡಿದ್ದಾರೆ. ಅವರು ಅಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿದ್ದಾರೆ. ಲಡಾಖ್ ಭಾಗದಲ್ಲಿ ಸೈನ್ಯದ ೬ ಹೊಸ ಪಥಕಗಳನ್ನು ನೇಮಕ ಮಾಡಲಾಗಿದೆ. ಈ ಪಥಕಗಳು ಹಿಂದೆ ಉಗ್ರರ ವಿರುದ್ಧ ಹೋರಾಡುವುದಕ್ಕಾಗಿ ಮತ್ತು ಪಾಕಿಸ್ತಾನದ ಮೇಲೆ ಗಮನ ಇಡುವುದಕ್ಕಾಗಿ ನೇಮಿಸಲಾಗಿದ್ದವು. ಇದರಿಂದ ಸುಮಾರು ೫೦ ಸಾವಿರ ಸೈನಿಕರು ಭಾರತ-ಚೀನಾ ಗಡಿಯ ಹತ್ತಿರ ಜಮಾಯಿಸಿದ್ದಾರೆ. ಭಾರತ ಪ್ರತ್ಯಕ್ಷ ನಿಯಂತ್ರಣ ರೇಖೆಯಲ್ಲಿ ಇಷ್ಟು ದೊಡ್ಡ ಮಟ್ಟದ ಸೈನ್ಯ ನೇಮಿಸಿರುವುದರಿಂದ ನುಸುಳುವಿಕೆಯ ಯಾವುದೇ ಪ್ರಯತ್ನ ಸಾಧ್ಯವಾಗುವುದಿಲ್ಲ, ಎಂಬ ಸಂದೇಶ ಚೀನಾದ ಸೈನ್ಯಕ್ಕೂ ನೀಡಲಾಗಿದೆ.
From Ladakh to Northeast, 6 Indian Army Divisions shifted from Pak front, anti-terrorist roles to tackle China threat
Read @ANI Story | https://t.co/fIVQKXo0kq#IndiaChinaStandOff #IndianArmy #Ladakh #IndiaChinaBorder #LAC pic.twitter.com/IL0q0xpCZD
— ANI Digital (@ani_digital) May 15, 2022
೧. ಸೂತ್ರಗಳಿಂದ ತಿಳಿದಿರುವ ಮಾಹಿತಿಯ ಪ್ರಕಾರ, ರಾಷ್ಟ್ರೀಯ ರೈಫಲ್ಸ್ ನ ಒಂದು ಪಥಕ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಚಟುವಟಿಕೆಯ ಮೇಲೆ ಗಮನ ಇಡುವುದಕ್ಕಾಗಿ ನೇಮಿಸಲಾಗಿತ್ತು. ಈಗ ಈ ಪಥಕಕ್ಕೆ ಪೂರ್ವ ಲಡಾಕ್ ಸೆಕ್ಟರ್ ನಲ್ಲಿ ನೇಮಿಸಲಾಗಿದೆ.
೨. ತೇಜಪುರದಲ್ಲಿ ಗಜರಾಜ ಕಾರ್ಪ್ಸ್ ದ ಅಂತರ್ಗತ ಅಸ್ಸಾಂನಲ್ಲಿದ್ದ ಒಂದು ಪಥಕ ರಾಜ್ಯದಲ್ಲಿ ಉಗ್ರರ ಚಟುವಟಿಕೆ ತಡೆಯುವದಕ್ಕಾಗಿ ನೇಮಿಸಲಾಗಿತ್ತು. ಈಗ ಮಾತ್ರ ಆ ಪಥಕ ಭಾರತ ಚೀನಾದ ಈಶಾನ್ಯ ಗಡಿಗೆ ನೇಮಿಸಲಾಗಿದೆ.
೩. ಸೈನ್ಯದ ಪಥಕ ಕಡಿಮೆ ಮಾಡಿರುವುದರಿಂದ ಈಗ ಅಸ್ಸಾಂನಲ್ಲಿ ಉಗ್ರರ ವಿರೋಧದ ಚಟುವಟಿಕೆಗಳ ಮೇಲೆ ಗಮನ ಇಡುವುದಕ್ಕಾಗಿ ಯಾವುದೇ ಪಥಕ ಇಲ್ಲದಿರುವುದು ಬೆಳಕಿಗೆ ಬಂದಿದೆ.
ಸಂಪಾದಕೀಯ ನಿಲುವುಪಾಕ ಬೆಂಬಲಿತ ಭಯೋತ್ಪಾದನೆ ನಾಶ ಮಾಡುವುದಕ್ಕಾಗಿ ಪಾಕಿಸ್ತಾನವನ್ನೇ ನಾಶಮಾಡಬೇಕು. ಇದು ಸರಕಾರ ತಿಳಿದು ಆ ರೀತಿಯ ಕಾರ್ಯಾಚರಣೆ ಮಾಡಬೇಕು. ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಸೈನ್ಯದ ಪರಾಕ್ರಮ ನೋಡಿ ಚೀನಾ ಕೂಡ ಜಾಗರೂಕತೆಯಿಂದ ಹೆಜ್ಜೆ ಇಡುತ್ತಿದೆ. ಆದ್ದರಿಂದ ಬಳ ಪ್ರದರ್ಶನದೊಂದಿಗೆ ಚೀನಾದ ಮೇಲೆ ಮಾನಸಿಕ ಒತ್ತಡ ಹೇರುವುದಕ್ಕಾಗಿ ಹೆಚ್ಚು ಪ್ರಯತ್ನ ಮಾಡುವುದು ಅಪೇಕ್ಷಿತ ವಾಗಿದೆ. |