ಕಾಶ್ಮೀರದಲ್ಲಿ ಜಿಹಾದಿ ಉಗ್ರರ ಸಂಘಟನೆಯಿಂದ ಹಿಂದೂಗಳಿಗೆ ಬೆದರಿಕೆ

ಶ್ರೀನಗರ (ಜಮ್ಮು ಕಾಶ್ಮೀರ) – ಕಾಶ್ಮೀರದಲ್ಲಿ ವಾಸಿಸುವ ಕಾಶ್ಮೀರಿ ಹಿಂದೂಗಳಿಗೆ ಲಷ್ಕರ್ ಎ ಇಸ್ಲಾಂ ಹೆಸರಿನ ಜಿಹಾದಿ ಉಗ್ರರ ಸಂಘಟನೆ ಕಾಶ್ಮೀರ ಬಿಟ್ಟುಬಿಡಿ ಇಲ್ಲವಾದರೆ ಸಾಯಲು ಸಿದ್ಧರಾಗಿ, ಎಂದು ಪತ್ರದ ಮೂಲಕ ಬೆದರಿಕೆ ಒಡ್ಡಿದ್ದಾರೆ. ಪುಲ್ವಾಮಾ ಜಿಲ್ಲೆಯಲ್ಲಿನ ಪುನರ್ವಸತಿ ಛಾವಣಿಯಲ್ಲಿರುವ ಕಾಶ್ಮೀರಿ ಹಿಂದೂಗಳಿಗೆ ಈ ಪತ್ರ ದೊರೆತಿದೆ. ಕೆಲವು ದಿನಗಳ ಮೊದಲು ಕಾಶ್ಮೀರದಲ್ಲಿನ ಬಡಗಾವ್ ನ ರಾಹುಲ್ ಭಟ್ಟ ಎಂಬ ಕಾಶ್ಮೀರಿ ಹಿಂದೂ ವ್ಯಕ್ತಿಯನ್ನು ತಹಸೀಲ್ದಾರ ಕಚೇರಿ ಒಳಗೆ ನುಗ್ಗಿ ಹತ್ಯೆ ಮಾಡಲಾಯಿತು. ಆದರ ನಂತರ ಈಗ ಈ ಬೆದರಿಕೆಯಿಂದ ಕಾಶ್ಮೀರಿ ಹಿಂದೂಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ರಾಹುಲ ಇವರ ಹತ್ಯೆಯ ನಂತರ ಕಾಶ್ಮೀರಿ ಹಿಂದೂಗಳು ಬೀದಿಗಿಳಿದು ಕೇಂದ್ರ ಮತ್ತು ರಾಜ್ಯ ಸರಕಾರದ ವಿರೋಧದಲ್ಲಿ ಘೋಷಣೆ ಕೂಗಿದರು. ಕಾಶ್ಮೀರದಲ್ಲಿ ಹಿಂದೂ ಸುರಕ್ಷಿತವಾಗಿಲ್ಲವೆಂದು ಆರೋಪ ಮಾಡಿದರು.
‘Be ready for target killings’: Terror outfit issues threat letter to #KashmiriPandits in J-K’s #Pulwama
Read | https://t.co/1udyXq42GP pic.twitter.com/AoF8IR67iu
— DNA (@dna) May 16, 2022
ಪುನರ್ವಸತಿ ಛಾವಣಿಯ ಅಧ್ಯಕ್ಷರನ್ನು ಉದ್ದೇಶಿಸಿ ಈ ಪತ್ರ ಬರೆಯಲಾಗಿದೆ. ಇದರಲ್ಲಿ, ಮರಳಿ ಬಂದ ಎಲ್ಲ ಕಾಶ್ಮೀರಿಗಳು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಬಲಿಗರು ಕಾಶ್ಮೀರ ಬಿಟ್ಟು ಹೋಗಬೇಕು, ಇಲ್ಲವಾದರೆ ಸಾಯಲು ಸಿದ್ಧರಾಗಬೇಕು. ಕಾಶ್ಮೀರದಲ್ಲಿ ಇನ್ನೊಂದು ಇಸ್ರಾಯಿಲ್ ನಿರ್ಮಿಸಿ ಕಾಶ್ಮೀರಿ ಮುಸಲ್ಮಾನರ ಹತ್ಯೆ ಮಾಡುವ ಆಸೆ ಇರುವ ಕಾಶ್ಮೀರಿ ಹಿಂದೂಗಳಿಗೆ ಇಲ್ಲಿ ಜಾಗ ಇಲ್ಲ. ನಿಮಗೆ ದುಪ್ಪಟ್ಟು ಅಥವಾ ಮೂರು ಪಟ್ಟು ಸುರಕ್ಷೆ ಒದಗಿಸಿದರೂ ಸಹ ನೀವು ಸಾಯುತ್ತೀರಿ. (ಈ ರೀತಿಯ ಬೆದರಿಕೆ ಕೇಂದ್ರ ಮತ್ತು ರಾಜ್ಯ ಸರಕಾರ ಇವರಿಗೆ ಒಂದು ಸವಾಲು ಅನ್ನಬಹುದು. ಈ ಜಿಹಾದಿ ಉಗ್ರರ ಸಂಘಟನೆಗೆ ಪಾಕಿಸ್ತಾನದ ಬೆಂಬಲ ಇರುವುದರಿಂದ ಪಾಕಿಸ್ತಾನವನ್ನು ನಾಶಮಾಡದೇ ಇದು ಮುಗಿಯುವುದಿಲ್ಲ! – ಸಂಪಾದಕರು)
ಸಂಪಾದಕೀಯ ನಿಲುವು೧೯೮೯ ನಂತರ ಇಂದಿಗೂ ಕಾಶ್ಮೀರದಲ್ಲಿ ಹಿಂದೂಗಳಿಗೆ ಈ ರೀತಿಯ ಬೆದರಿಕೆ ನೀಡುತ್ತಿದ್ದಾರೆ, ಇದು ಈವರೆಗಿನ ಎಲ್ಲಾ ಪಕ್ಷದ ಸರಕಾರಗಳಿಗೆ ನಾಚಿಕೆಗೇಡು ! ಅಣ್ವಸ್ತ್ರಗಳು ಇರುವ ಭಾರತಕ್ಕೆ ಮುಷ್ಟಿಯಷ್ಟು ಜಿಹಾದಿ ಉಗ್ರರು ೩ ದಶಕಗಳಿಂದ ಆಟ ಆಡಿಸುತ್ತಿದ್ದಾರೆ ಮತ್ತು ಭಾರತ ಅವರನ್ನು ಬೇರುಸಹಿತ ಕಿತ್ತುಹಾಕಿ ಹಿಂದೂಗಳ ರಕ್ಷಣೆ ನೀಡುವಲ್ಲಿ ವಿಫಲವಾಗುತ್ತಿದೆ ಎಂದರೆ ಅದು ನಾಚಿಕೆಗೇಡು ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!