ಇಂದು ಉಳಿದ ಸಮೀಕ್ಷೆ ನಡೆಯಲಿದೆ
ವಾರಾಣಸಿ (ಉತ್ತರಪ್ರದೇಶ) – ಇಲ್ಲಿನ ಜ್ಞಾನವಾಪಿ ಮಸೀದಿಯ ಸಮೀಕ್ಷೆಯು ಮೇ ೧೪ರಂದು ಬೆಳಿಗ್ಗೆ ೮ ರಿಂದ ಮದ್ಯಾಹ್ನ ೧೨ರ ವರೆಗೆ ನಡೆಸಲಾಯಿತು. ಈ ಸಮೀಕ್ಷೆಯು ಶೇ. ೪೦ರಷ್ಟು ಪೂರ್ಣವಾಗಿದೆ. ಉಳಿದ ಸಮೀಕ್ಷೆಯು ಮೇ ೧೫ರಂದು ಪುನಃ ನಡೆಯಲಿದೆ. ಈ ಸಮೀಕ್ಷೆಯ ವರದಿಯನ್ನು ಮೇ ೧೭ರಂದು ನ್ಯಾಯಾಲಯದಲ್ಲಿ ಸಾದರಪಡಿಸಬೇಕಿದೆ.
Inspection of the complex began at 8 am and ended at noon. Varanasi police commissioner Satish Ganesh said the action of the court-appointed commission will continue on Sunday.https://t.co/AbeFj27Mih
— The Indian Express (@IndianExpress) May 14, 2022
ಬೆಳಿಗ್ಗೆ ಸಮೀಕ್ಷೆ ಹಾಗೂ ಚಿತ್ರೀಕರಣವನ್ನು ಆರಂಭಿಸಲಾಯಿತು. ಈ ಸಮಯದಲ್ಲಿ ನ್ಯಾಯಾಲಯದ ಆಯುಕ್ತರು, ೨ ಸಹಾಯಕ ನ್ಯಾಯಾಲಯ ಆಯುಕ್ತರು, ಹಿಂದೂ ಪಕ್ಷಗಳ ನ್ಯಾಯವಾದಿಗಳು ಹಾಗೂ ಪಕ್ಷದವರು, ಹಾಗೆಯೇ ಇತರರು ಹೀಗೆ ಒಟ್ಟೂ ೫೨ ಜನರು ಉಪಸ್ಥಿತರಿದ್ದರು. ಈ ಎಲ್ಲರ ಮೊಬೈಲನ್ನು ಹೊರಗಡೆ ಜಮೆ ಮಾಡಲಾಗಿತ್ತು. ಸರಕಾರವು ಜ್ಞಾನವಾಪಿ ಪರಿಸರದ ೫೦೦ ಮೀಟರ್ ಪರಿಸರದಲ್ಲಿ ನಾಗರೀಕರ ಪ್ರವೇಶವನ್ನು ತಡೆದಿತ್ತು. ಸುರಕ್ಷೆಯ ದೃಷ್ಟಿಯಿಂದ ೧ ಸಾವಿರದ ೫೦೦ಕ್ಕೂ ಹೆಚ್ಚಿನ ಪೊಲೀಸರನ್ನು ನೇಮಿಸಲಾಗಿತ್ತು.
ಜ್ಞಾನವಾಪಿಯ ತಳಮಹಡಿಯಲ್ಲಿದ್ದ ೪ ಕೋಣೆಗಳನ್ನು ತೆರೆಯಲಾಯಿತು !
ಈ ಸಮೀಕ್ಷೆಯಲ್ಲಿ ಜ್ಞಾನವಾಪಿ ಮಸೀದಿಯ ತಳಮಹಡಿಯಲ್ಲಿನ ೪ ಕೋಣೆಗಳನ್ನು ತೆರೆಯಲಾಯಿತು. ಇವುಗಳಲ್ಲಿ ೩ ಮುಸಲ್ಮಾನ ಪಕ್ಷದಲ್ಲಿದ್ದರೆ ೧ ಹಿಂದೂಗಳ ಪಕ್ಷದಲ್ಲಿದೆ. ಇವುಗಳ ಸಂಪೂರ್ಣ ಚಿತ್ರೀಕರಣ ಮಾಡಲಾಯಿತು. ತಳಮಹಡಿಯೊಂದಿಗೆ ಮಸೀದಿಯ ಪಶ್ಚಿಮದಿಕ್ಕಿನಲ್ಲಿರುವ ಗೋಡೆಯ ಚಿತ್ರೀಕರಣ ಮಾಡಲಾಯಿತು. ವರ್ಷಾನುಗಟ್ಟಲೆ ಮುಚ್ಚಿದ್ದ ತಳಮಹಡಿಯಲ್ಲಿ ಸಮೀಕ್ಷೆ ಮಾಡಬೇಕಾಗುವುದು; ಎಂದು ಬ್ಯಾಟರಿಗಳನ್ನು ತರಲಾಗಿತ್ತು. ಇವುಗಳ ಪ್ರಕಾಶದಲ್ಲಿ ಚಿತ್ರೀಕರಣ ಮಾಡಲಾಯಿತು, ಹಾಗೆಯೇ ಬೀಗಗಳನ್ನು ಮುರಿಯುವ ಮತ್ತು ಅಲ್ಲಿನ ಸ್ವಚ್ಛತೆಯನ್ನು ಮಾಡಲು ಸಂಬಂಧಿತರನ್ನೂ ಆಗ ಅಲ್ಲಿ ಕರೆತರಲಾಗಿತ್ತು. ವಿಶೇಷವೆಂದರೆ ತಳಮಹಡಿಯಲ್ಲಿ ಹಾವುಗಳೂ ಇರಬಹುದೆಂದು ಸರ್ಪಮಿತ್ರರನ್ನೂ ಕರೆತರಲಾಗಿತ್ತು.
ಅಪೇಕ್ಷೆಗಿಂತಲೂ ಹೆಚ್ಚು ಸಿಕ್ಕಿದೆ ! – ಹಿಂದೂ ಪಕ್ಷದವರುನ್ಯಾಯಾಲಯದ ಆದೇಶದ ಅನುಸಾರ ಈ ಸಮೀಕ್ಷೆಯ ನಂತರ ಈ ತಂಡದಲ್ಲಿರುವ ಯಾವುದೇ ವ್ಯಕ್ತಿಯು ಹೊರಗಿದ್ದ ಪ್ರಸಾರಮಾಧ್ಯಮಗಳೊಂದಿಗೆ ಸಂವಾದವನ್ನು ಸಾಧಿಸಲಿಲ್ಲ. ‘ಯಾರಾದರೂ ಮಾಹಿತಿಯನ್ನು ಬಹಿರಂಗಗೊಳಿಸಿದರೆ ಅವರ ಮೇಲೆ ಕಾರ್ಯಾಚರಣೆಯಾಗಬಹುದು’ ಎಂದು ನ್ಯಾಯಾಲಯವು ಎಚ್ಚರಿಸಿದೆ. ಆದರೂ ಹಿಂದೂ ಪಕ್ಷದವರಲ್ಲಿ ಒಬ್ಬರಾದ ವಿಶ್ವ ವೈದಿಕ ಸನಾತನ ಸಂಘದ ಪ್ರಮುಖರಾದ ಜಿತೇಂದ್ರ ಸಿಂಹ ಬಿಸೇನರವರು ‘ನ್ಯಾಯಾಲಯದ ಆದೇಶದಿಂದ ಪೂರ್ಣ ಪ್ರಕ್ರಿಯೆಯನ್ನು ಗೌಪ್ಯವಾಗಿಡಬೇಕಿದೆ. ಆದುದರಿಂದ ನಾವು ಈಗ ಏನೂ ಹೇಳಲಾರೆವು; ಆದರೆ ಕಲ್ಪನೆಗಿಂತಲೂ ಹೆಚ್ಚು ದೊರೆತಿದೆ ಎಂದಷ್ಟೇ ಹೇಳುತ್ತೇನೆ, ಎಂದು ಹೇಳಿದರು. ಈ ಸಮಯದಲ್ಲಿ ತಳಮಹಡಿಯಲ್ಲಿನ ಕೆಲವು ಬೀಗಗಳನ್ನು ಕೀಲಿಯ ಮೂಲಕ ತೆರೆಯಲಾದರೆ ಕೆಲವನ್ನು ಮುರಿಯಬೇಕಾಯಿತು. ಸಮೀಕ್ಷೆಯ ನಂತರ ತಳಮಹಡಿಗೆ ಪುನಃ ಬೀಗ ಹಾಕಲಾಯಿತು. ಸಮೀಕ್ಷೆಯಿಂದ ಏನೂ ದೊರೆಯಲಿಲ್ಲ ! – ಮುಸಲ್ಮಾನ ಪಕ್ಷದವರುಈ ಸಮಯದಲ್ಲಿ ಕೆಲವು ಪ್ರಸಾರ ಮಾಧ್ಯಮಗಳು ಮುಸಲ್ಮಾನ ಪಕ್ಷದವರ ನ್ಯಾಯವಾದಿಗಳಿಗೆ ಕೇಳಿದಾಗ ಅವರು ‘ಸಮೀಕ್ಷೆಯಿಂದ ಏನೂ ದೊರೆಯಲಿಲ್ಲ’ ಎಂದು ಹೇಳಿದರು. |